ಬೆಂಗಳೂರು: ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಫೆ.4ರಂದು ಹಾಜರಾಗಿದ್ದ ಹಿರಿಯ ಸಾಹಿತಿ ಕೆ. ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದಿರುವ ವಕೀಲೆ ಮೀರಾ ರಾಘವೇಂದ್ರ ಅವರ ನಡೆಯನ್ನು ಬೆಂಗಳೂರು ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.
ಮೀರಾ ರಾಘವೇಂದ್ರ ಬೆಂಗಳೂರು ವಕೀಲರ ಸಂಘದ ಸದಸ್ಯರಾಗಿಲ್ಲ. ಆದರೂ, ಅವರ ಈ ಕೃತ್ಯ ವಕೀಲ ವೃತ್ತಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ ಎಂದು ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಖಂಡಿಸಿದ್ದಾರೆ.
ಓದಿ: ಸಾಹಿತಿ ಭಗವಾನ್ ಮುಖಕ್ಕೆ ಮಸಿ ಬಳಿದ ಕೃತ್ಯ ಖಂಡಿಸಿದ ಸಿದ್ದರಾಮಯ್ಯ
ನ್ಯಾಯಾಂಗದ ಗೌರವ ಕಾಪಾಡುವಲ್ಲಿ ಬೆಂಗಳೂರು ವಕೀಲರ ಸಂಘ ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.