ETV Bharat / state

ಎಲೆಕ್ಷನ್​​​ಗೆ ಮೋದಿ ಫ್ಯಾಕ್ಟರ್ ಟ್ರಂಪ್ ಕಾರ್ಡ್: ಟಾರ್ಗೆಟ್ ಮೆಜಾರಿಟಿ ಟಾಸ್ಕ್ ಫಿಕ್ಸ್ ಮಾಡಿಕೊಂಡ ಬಿಜೆಪಿ - ಈಟಿವಿ ಭಾರತ ಕನ್ನಡ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಆಡಳಿತ ಪರ ಅಲೆಯನ್ನಾಗಿ ಪರಿವರ್ತಿಸಲು ಮೋದಿ ಫ್ಯಾಕ್ಟರ್​ ನ್ನು ಬಳಸಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧಾರ ಕೈಗೊಂಡಿದೆ.

bjp-strategy-for-state-assembly-elections
ಎಲೆಕ್ಷನ್ ಗೆ ಮೋದಿ ಫ್ಯಾಕ್ಟರ್ ಟ್ರಂಪ್ ಕಾರ್ಡ್: ಟಾರ್ಗೆಟ್ ಮೆಜಾರಿಟಿ ಟಾಸ್ಕ್ ಫಿಕ್ಸ್ ಮಾಡಿಕೊಂಡ ಬಿಜೆಪಿ
author img

By

Published : Oct 6, 2022, 6:38 PM IST

Updated : Oct 6, 2022, 6:57 PM IST

ಬೆಂಗಳೂರು : ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಫ್ಯಾಕ್ಟರ್ ಅನ್ನೇ ಪ್ರಮುಖ ಅಸ್ತ್ರವಾಗಿ ಬಳಸಿಕೊಳ್ಳಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಆಡಳಿತ ವಿರೋಧಿ ಅಲೆಯಲ್ಲಿ ಆಡಳಿತ ಪರ ಅಲೆಯನ್ನಾಗಿ ಪರಿವರ್ತಿಸಿಕೊಳ್ಳುವ ಹೊಸ ಟಾಸ್ಕ್ ಅನ್ನು ಮಿಷನ್ 150ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಬಿಎಸ್​​​​ವೈಗೆ ಪರ್ಯಾಯ ಫೇಸ್ ಲಭ್ಯವಾಗದ ಹಿನ್ನೆಲೆಯಲ್ಲಿ ರಾಷ್ಟ್ರೀಯ ನಾಯಕರನ್ನೇ ಕರೆತಂದು ಮತ ಸೆಳೆಯುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.

2023ರ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಬಿಜೆಪಿಗೆ ಮಾಸ್ ಫೇಸ್ ವ್ಯಾಲ್ಯು ಕೊರತೆ ಸೃಷ್ಟಿಯಾಗಿದ್ದು, ಯಡಿಯೂರಪ್ಪಗೆ ಪರ್ಯಾಯ ನಾಯಕತ್ವ ಇಲ್ಲವಾಗಿದೆ. ಬಿಜೆಪಿ ಭದ್ರವಾಗಿ ನೆಲೆಯೂರಿದ ನಂತರ ಈವರೆಗೂ ನಡೆದ ಎಲ್ಲ ಚುನಾವಣೆಗಳಲ್ಲಿಯೂ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎನ್ನುವುದು ನಿರ್ವಿವಾದವಾಗಿತ್ತು.

2008 ಮತ್ತು 2018 ರಲ್ಲಿ ಚುನಾವಣೆಗೂ ಮುನ್ನವೇ ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಗಿತ್ತು. ಅವರ ನೇತೃತ್ವದಲ್ಲಿಯೇ ಚುನಾವಣೆಗೆ ಹೋಗಲಾಗಿತ್ತು. ಆದರೆ, 2013ರಲ್ಲಿ ಯಡಿಯೂರಪ್ಪ ಬಿಜೆಪಿ ತೊರೆದಿದ್ದರಿಂದ ಸಿಎಂ ಅಭ್ಯರ್ಥಿ ಹೆಸರು ಘೋಷಣೆ ಮಾಡದ ಸ್ಥಿತಿಯಲ್ಲಿ ಬಿಜೆಪಿ ಚುನಾವಣೆ ಎದುರಿಸಿ ದಯನೀಯ ಸೋಲು ಕಂಡಿತ್ತು.

ಯಡಿಯೂರಪ್ಪ ಬದಲು ಮತ್ತೊಂದು ಹೆಸರು ಮುಂದಿಟ್ಟುಕೊಂಡು ಪ್ರಚಾರಕ್ಕೆ ತೆರಳಲು ಮಾಸ್ ಇಮೇಜ್ ಇರುವ ನಾಯಕರ ಕೊರತೆ ಬಿಜೆಪಿಯಲ್ಲಿದೆ. ಬೊಮ್ಮಾಯಿ ಉತ್ತಮ ಆಳ್ವಿಕೆ ನೀಡುತ್ತಿದ್ದರೂ ರಾಜ್ಯಮಟ್ಟದಲ್ಲಿ ವರ್ಚಸ್ಸು ಗಳಿಸಲಾಗಿಲ್ಲ. ಇತರ ನಾಯಕರಿಗೂ ಅಂತಹ ಇಮೇಜ್ ಇಲ್ಲ. ಹಾಗಾಗಿ ಬಿಜೆಪಿ ಈ ಬಾರಿ ಅನಿವಾರ್ಯವಾಗಿ ಮತ್ತೊಮ್ಮೆ ಕೇಂದ್ರದತ್ತಲೇ ಮುಖ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಫ್ಯಾಕ್ಟರ್ ಅನ್ನೇ ಈ ಬಾರಿ ಟ್ರಂಪ್ ಕಾರ್ಡ್ ಆಗಿ ಬಳಸಲು ರಾಜ್ಯ ಬಿಜೆಪಿ ನಿರ್ಧರಿಸಿದೆ.

ಟಾರ್ಗೆಟ್ ಮೆಜಾರಿಟಿ : 2006ರಲ್ಲಿ ಮೊದಲ ಬಾರಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿತ್ತು. ನಂತರ ಅಧಿಕಾರ ಹಸ್ತಾಂತರ ಮಾಡದ ಜೆಡಿಎಸ್ ವಿರುದ್ಧ 2008ರಲ್ಲಿ ವಚನಭ್ರಷ್ಟ ಆಂದೋಲನ ನಡೆಸಿ ಮೊದಲ ಬಾರಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ 110 ಸ್ಥಾನಗಳಿಸಿತ್ತು. ಸರಳ ಬಹುಮತಕ್ಕೆ 3 ಸ್ಥಾನ ಕಡಿಮೆಯಿದ್ದರೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಿದ್ದ ಯಡಿಯೂರಪ್ಪ ನಂತರ ಆಪರೇಷನ್ ಕಮಲದ ಮೂಲಕ ಸರ್ಕಾರವನ್ನು ಭದ್ರಪಡಿಸಿಕೊಂಡಿದ್ದರು.

2018 ರಲ್ಲಿ ಎರಡನೇ ಬಾರಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ, 105 ಸ್ಥಾನಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆತುರದಲ್ಲಿ ಸರ್ಕಾರ ರಚಿಸಲು ಹೋಗಿ ಕೈಸುಟ್ಟುಕೊಂಡಿದ್ದ ಯಡಿಯೂರಪ್ಪ ಮೂರು ದಿನ್ಕಕೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ವರ್ಷದ ಬಳಿಕ ಆಪರೇಷನ್ ಕಮಲದ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದ್ದರು.

ಈಗ ಅವರ ಪ್ರಯತ್ನದ ಫಲವಾಗಿಯೇ ಸರ್ಕಾರ ಮುನ್ನಡೆಯುತ್ತಿದೆ. ಈ ಬಾರಿ ಸ್ವತಂತ್ರವಾಗಿ ಯಾರ ಬೆಂಬಲವಿಲ್ಲದೇ ಸರ್ಕಾರ ರಚಿಸಬೇಕು ಎನ್ನುವ ಟಾರ್ಗೆಟ್ ಮೆಜಾರಿಟಿ ಟಾಸ್ಕ್ ಅನ್ನು ಹೈಕಮಾಂಡ್ ಅಳವಡಿಸಿಕೊಳ್ಳುತ್ತಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಬಳಿಕ ಪೂರ್ಣ ಸಮಯವನ್ನು ಕರ್ನಾಟಕಕ್ಕೆ ನೀಡಲು ಹೈಕಮಾಂಡ್ ನಾಯಕರು ನಿರ್ಧರಿಸಿದ್ದಾರೆ.

ಮೊಳಗಲಿದೆ ನಮೋ ಮಂತ್ರ : 2008 ರಲ್ಲಿ ಮತ್ತು 2013 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ. ಹಾಗಾಗಿ ಕೇಂದ್ರದ ನಾಯಕತ್ವ ರಾಜ್ಯಕ್ಕೆ ಸಿಕ್ಕಿರಲಿಲ್ಲ. ಆದರೆ 2018ರಲ್ಲಿ ಕೇಂದ್ರದ ನಾಯಕತ್ವ ಸಿಕ್ಕರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಆದರೆ, ಈಗ ಮೋದಿ ಸರ್ಕಾರದ ಎರಡನೇ ಅವಧಿಯ ಆಳ್ವಿಕೆಯಲ್ಲಿ ಕರ್ನಾಟಕದಲ್ಲಿ ದಾಖಲೆಯ 25 ಸ್ಥಾನ ಬಿಜೆಪಿ ವಶದಲ್ಲಿದೆ.

ರಾಜ್ಯ ಬಿಜೆಪಿ ಇತಿಹಾಸದಲ್ಲಿ ಇಷ್ಟು ಸ್ಥಾನ ಬಿಜೆಪಿಗೆ ಬಂದಿದ್ದು ಇದೇ ಮೊದಲು. ಇದಕ್ಕೆ ಮುಖ್ಯ ಕಾರಣ ಮೋದಿ ಫ್ಯಾಕ್ಟರ್, ಅದನ್ನೇ ಈಗ ವಿಧಾನಸಭಾ ಚುನಾವಣೆಗೂ ಮುಂದುವರೆಸಿಕೊಂಡು ಹೋಗುವ ನಿರ್ಧಾರಕ್ಕೆ ಬಿಜೆಪಿ ನಾಯಕರು ಬಂದಿದ್ದಾರೆ.

ಹೈಕಮಾಂಡ್ ರಂಗಪ್ರವೇಶ : ರಾಜ್ಯದಲ್ಲಿ ಯಡಿಯೂರಪ್ಪಗೆ ಪರ್ಯಾಯ ನಾಯಕ ಇನ್ನು ಕಾಣಿಸದ ಹಿನ್ನೆಲೆಯಲ್ಲಿ ಹೈಕಮಾಂಡ್ ರಂಗಪ್ರವೇಶ ಮಾಡಿದ್ದು, ಚುನಾವಣಾ ಚಟುವಟಿಕೆಯನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಟಾಸ್ಕ್ ಸಿದ್ದಪಡಿಸಿ ಅದನ್ನು ಅನುಷ್ಠಾನಕ್ಕೆ ತರುವ ಕೆಲಸವನ್ನು ಮಾಡುವಂತೆ ರಾಜ್ಯ ಘಟಕಕ್ಕೆ ಸೂಚನೆ ನೀಡುತ್ತಿದೆ. ಅದರ ಮೊದಲ ಭಾಗವೇ ಈಗ ನಡೆಯುತ್ತಿರುವ ಬಿಜೆಪಿ ರಾಜ್ಯ ಪ್ರವಾಸ ಮತ್ತು ಸರಣಿ ಸಮಾವೇಶಗಳಾಗಿವೆ. ಈ ಸಮಾವೇಶಗಳು ಯಾವ ರೀತಿ ನಡೆಯಬೇಕು, ಹೇಗೆ ನಡೆಯಬೇಕು, ಏನೆಲ್ಲಾ ವಿದ್ಯಮಾನಗಳು ಈ ವೇಳೆ ನಡೆಯಬೇಕು ಎಂದು ಎಲ್ಲವೂ ದೆಹಲಿಯಿಂದಲೇ ನಿರ್ಧಾರವಾಗುತ್ತಿದೆ.

ಜೋಡೋ ಸಕ್ಸಸ್ ಗೆ ಪ್ಲಾನ್ ಬದಲಿಸಿದ ಕೇಸರಿಪಡೆ : ಪಕ್ಷದ ಹೈಕಮಾಂಡ್ ಸೂಚನೆಯಂತೆ ರಾಜ್ಯದಲ್ಲಿ ಬಿಜೆಪಿ ಪ್ರವಾಸ ಆರಂಭಗೊಂಡಿದೆ. ಪಕ್ಷ ಹಾಗೂ ಸರ್ಕಾರದ ಅಂಶಗಳನ್ನು ಪ್ರತ್ಯೇಕವಾಗಿ ತಿಳಿಸಲು ಎರಡು ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದ ತಂಡ ಪ್ರವಾಸ ಆರಂಭಿಸಿದೆ. ಅಕ್ಟೋಬರ್ 11 ರಿಂದ ಸಿಎಂ ಬೊಮ್ಮಾಯಿ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಎರಡನೇ ತಂಡ ಪ್ರವಾಸ ಆರಂಭಿಸಲಿದೆ. ಈ ಪ್ರವಾಸದಲ್ಲಿ ಸರ್ಕಾರ ಮತ್ತು ಸಂಘಟನೆ ವಿಷಯ ಪ್ರಮುಖವಾಗಿರಲಿದೆ.

ಈಗ ಹೊಸದಾಗಿ ಟಾಸ್ಕ್ ವೊಂದನ್ನು ಅಳವಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರಂಭಿಸಿರುವ ಭಾರತ್ ಜೋಡೊ ಯಾತ್ರೆಯ ಎಫೆಕ್ಟ್ ಗೆ ಪ್ರತಿಯಾಗಿ ಬಿಜೆಪಿಯ ಅಲೆ ಏಳಿಸುವ ಸಂಕಲ್ಪ ಮಾಡಲಾಗಿದೆ. ಜನರ ಗಮನ ಬಿಜೆಪಿ ಕಡೆ ಸೆಳೆಯುವಂತೆ ಮಾಡಿ ಭಾರತ್ ಜೋಡೋ ಸಕ್ಸಸ್ ಗೆ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ.

ಬೃಹತ್ ಸಮಾವೇಶದಲ್ಲಿ ಕೇಂದ್ರ ನಾಯಕರು ಭಾಗಿ : ರಾಜ್ಯದ ಏಳು ನಗರಗಳಲ್ಲಿ ದೊಡ್ಡ ಸಮಾವೇಶಗಳಿಗೆ ಸಿದ್ದತೆ ನಡೆದಿದೆ. ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ, ಹುಬ್ಬಳ್ಳಿಯಲ್ಲಿ ರೈತ ಸಮಾವೇಶ, ಬೆಂಗಳೂರಿನಲ್ಲಿ ಮಹಿಳಾ ಸಮಾವೇಶ, ಮಂಗಳೂರಿನಲ್ಲಿ ಯುವ ಸಮಾವೇಶ, ಮೈಸೂರಿನಲ್ಲಿ ಎಸ್ಸಿ ಸಮಾವೇಶ, ಕಲಬುರಗಿಯಲ್ಲಿ ಒಬಿಸಿ ಸಮಾವೇಶ ನಡೆಸಲು ನಿರ್ಧರಿಸಿದ್ದು, ಶಿವಮೊಗ್ಗದಲ್ಲಿಯೂ ಒಂದು ಸಮಾವೇಶ ನಡೆಯಲಿದೆ. ಈ ಸಮಾವೇಶಗಳಿಗೆ ಹೈಕಮಾಂಡ್​ನ ಪ್ರಭಾವಿ ನಾಯಕರೇ ಆಗಮಿಸಲಿದ್ದಾರೆ. ಡಿ.30 ರೊಳಗೆ ರಾಜ್ಯ ಪ್ರವಾಸ, ಸಮಾವೇಶ ಮುಗಿಯಲಿದೆ ಎಂದು ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾಹಿತಿ ನೀಡಿದ್ದಾರೆ.

ಹಾಲಿಗಳಿಗೆ ಶಾಕ್ : ಇನ್ನು ಮೋದಿ ಹೆಸರಿನಲ್ಲಿ ಅನಾಯಾಸವಾಗಿ ಮರು ಆಯ್ಕೆಯಾಗುತ್ತೇವೆ ಎನ್ನುವ ನಿರೀಕ್ಷೆಯಲ್ಲಿರುವ ಹಾಲಿ ಶಾಸಕರಿಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಪಕ್ಷದ ಎಲ್ಲ ಶಾಸಕರಿಗೂ ಎಚ್ಚರಿಕೆಯ ಸಂದೇಶ ರವಾನಿಸಿರುವ ವರಿಷ್ಠರು, ಕ್ಷೇತ್ರದಲ್ಲಿ ಕೆಲಸ ಮಾಡಬೇಕು, ವರ್ಚಸ್ಸು ಬೆಳೆಸಿಕೊಂಡಿರಬೇಕು. ಖಾಸಗಿ ಸಮೀಕ್ಷೆ ನಡೆಸಿ ಗೆಲ್ಲುವ ಮಾನದಂಡದ ಅನುಸಾರವೇ ಟಿಕೆಟ್ ಅಂತಿಮಗೊಳಿಸಲಾಗುತ್ತದೆ.

ಹಾಗಾಗಿ ಟಕೆಟ್ ಬೇಕು ಎನ್ನುವವರು ಜನರ ಬಳಿ ಇದ್ದು ಕೆಲಸ ಮಾಡಿ, ಕಾರ್ಯಕರ್ತರ ವಿಶ್ವಾಸಗಳಿಸಿಕೊಳ್ಳಿ ಎಂದು ತಿಳಿಸಿದ್ದಾರೆ. ಇದರಿಂದ ಆತಂಕಕ್ಕೆ ಸಿಲುಕಿರುವ ಕೆಲ ಶಾಸಕರು ಕ್ಷೇತ್ರಗಳಲ್ಲೇ ಬೀಡುಬಿಟ್ಟು ಕೆಲಸ ಮಾಡಲು ಶುರುಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಹಿರಿಯರ ಕ್ಷೇತ್ರ ಬದಲಾವಣೆ ಪ್ರಯೋಗವಿಲ್ಲ: ಇನ್ನು ಈ ಬಾರಿ ಹೊಸ ಪ್ರಯೋಗವೊಂದಕ್ಕೆ ಬಿಜೆಪಿ ಮುಂದಾಗಿತ್ತು. ಸತತವಾಗಿ ಗೆಲ್ಲುತ್ತಲೇ ಬಂದಿರುವ ಹಿರಿಯ ಶಾಸಕ ಕ್ಷೇತ್ರ ಬದಲಾವಣೆ ಮಾಡುವ ಚಿಂತನೆ ನಡೆಸಿತ್ತು. ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಹೊಸಬರಿಗೆ ನೀಡಿ ಪಕ್ಷಕ್ಕೆ ನೆಲೆ ಇಲ್ಲದ ಕಡೆ ಪ್ರಭಾವಿ ನಾಯಕರಿಗೆ ಟಿಕೆಟ್ ನೀಡಿ ಆ ಮೂಲಕ ಹೆಚ್ಚಿನ ಸ್ಥಾನ ಗೆಲ್ಲುವ ಚಿಂತನೆ ನಡೆಸಿತ್ತು.

ಆದರೆ ಇದೀಗ ಈ ಪ್ರಯತ್ನ ಬೇಡ ಎಂದು ವರಿಷ್ಠರು ನಿರ್ಧರಿಸಿದ್ದಾರೆ. ರಾಜ್ಯಕ್ಕೆ ಗಟ್ಟಿ ನಾಯಕತ್ವ ಸಿಗದ ಸಮಯದಲ್ಲಿ ಇಂತಹ ಪ್ರಯೋಗ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರಬಹುದು ಎನ್ನಲಾಗಿದೆ. ಈ ಕುರಿತು ಪಕ್ಷದ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮಾಹಿತಿ ನೀಡಿದ್ದು, ಈ ಬಾರಿ ಯಾರಿಗೂ ಕ್ಷೇತ್ರಗಳನ್ನೂ ಬದಲಾವಣೆ ಮಾಡುವುದಿಲ್ಲ, ಅಂತಹ ಪ್ರಸ್ತಾಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ರಾಜ್ಯ ವಿಧಾನಸಭೆ ಚುನಾವಣೆಗೆ ಬಿಆರ್​ಎಸ್​ ಸ್ಪರ್ಧಿಸಲ್ಲ.. ಜೆಡಿಎಸ್​ಗೆ ಬೆಂಬಲ: ಹೆಚ್​ಡಿ ಕುಮಾರಸ್ವಾಮಿ

Last Updated : Oct 6, 2022, 6:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.