ETV Bharat / state

ಸಿಎಂ ವಿರುದ್ಧ 'ಕಲೆಕ್ಷನ್ ಮಾಸ್ಟರ್' ಪೋಸ್ಟರ್ ರಿಲೀಸ್ ಮಾಡಿದ ಬಿಜೆಪಿ: ಡಿಸಿಎಂ ವಿರುದ್ಧವೂ ಮುಂದುವರೆದ ಟೀಕೆ - ​ ETV Bharat Karnataka

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ವ್ಯಂಗ್ಯವಾದ ಪೋಸ್ಟರ್​ಗಳನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಳ್ಳುವ ಮೂಲಕ ಕಾಂಗ್ರೆಸ್​ ವಿರುದ್ಧ ಬಿಜೆಪಿ ಸಾಲು ಸಾಲು ಆರೋಪಗಳನ್ನು ಮಾಡಿದೆ.

ಬಿಜೆಪಿ
ಬಿಜೆಪಿ
author img

By ETV Bharat Karnataka Team

Published : Oct 16, 2023, 10:42 PM IST

Updated : Oct 17, 2023, 5:59 PM IST

ಬೆಂಗಳೂರು : ಕಲೆಕ್ಷನ್ ಮಾಸ್ಟರ್ ಎನ್ನುವ ಬರಹವುಳ್ಳ ಸೂಟ್ ಕೇಸ್ ಕೈಯಲ್ಲಿ ಹಿಡಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಅಕ್ಕಪಕ್ಕದಲ್ಲಿ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಫೋಟೋಗಳುಳ್ಳ ಪೋಸ್ಟರ್ ಅನ್ನು ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪ್ರಕಟಿಸಿ ಎಟಿಎಂ ಸರ್ಕಾರ ಎಂದು ಟೀಕಿಸಿದೆ.

ಸ್ವಾಭಿಮಾನಿ ಕನ್ನಡಿಗರ ಸ್ವಾವಲಂಬನೆಯ ದುಡಿಮೆಯ ತೆರಿಗೆ ಹಣವನ್ನು ಪಂಚ ರಾಜ್ಯಗಳ ಚುನಾವಣೆಗೆ ಹಂಚುತ್ತಿರುವ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವ್ಯಂಗ್ಯಚಿತ್ರ ಪ್ರಕಟಿಸಿದೆ. ಅಲ್ಲದೆ, ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರ ಎಂದು ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಕೈಹಾಕಿ ನಿಂತಿರುವ ಫೋಟೋಗಳನ್ನು ಐದು ನೂರು ರೂ.ಗಳ ನೋಟಿನ ಫೋಟೋಗಳಿಂದ ರಚಿಸಿ ಪ್ರಕಟಿಸಿದೆ. ಅದಕ್ಕೆ ಕಲೆಕ್ಷನ್ ಮಾಸ್ಟರ್ ಎನ್ನುವ ತಲೆ ಬರಹ ನೀಡಿದೆ‌.

ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ಗೆ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ತೆಲಂಗಾಣ ಕಾಂಗ್ರೆಸ್‌ಗೆ 300 ಕೋಟಿ ರೂ, ಮಿಜೋರಾಂ ಕಾಂಗ್ರೆಸ್‌ಗೆ 100 ಕೋಟಿ ರೂ. ಛತ್ತಿಸ್‌ಗಢ‌ ಕಾಂಗ್ರೆಸ್‌ಗೆ 200 ಕೋಟಿ ರೂ. ರಾಜಸ್ಥಾನ‌ ಕಾಂಗ್ರೆಸ್‌ಗೆ 200 ಕೋಟಿ ರೂ. ಮಧ್ಯಪ್ರದೇಶ‌ ಕಾಂಗ್ರೆಸ್‌ಗೆ 200 ಕೋಟಿ ರೂ. ಕಮಿಷನ್, ಕಲೆಕ್ಷನ್ ಮೂಲಕ ಸಾವಿರ ಕೋಟಿ ಟಾರ್ಗೆಟ್ ಮಾಡಿ ಸಂಗ್ರಹಿಸುತ್ತಿರುವ ಕಾಂಗ್ರೆಸ್ ಹಣ ಹಂಚುವ ಮುನ್ನವೇ ಸಿಕ್ಕಿ ಬಿದ್ದಿದೆ ಎಂದು ವಾಗ್ದಾಳಿ ನಡೆಸಿದೆ.

25 ಲಕ್ಷ ಕೊಡ್ಲೇಬೇಕು ಅಬಕಾರಿ ನೀತಿ : ಅಧಿಕಾರಕ್ಕೆ ಬಂದ ಒಂದೇ ವಾರದಲ್ಲಿ ಕೋಟಿ ಕೋಟಿ ರೂ.ಗೆ ಅಬಕಾರಿ ಹುದ್ದೆಗಳನ್ನು ಸೇಲ್‌ಗೆ ಇಟ್ಟಿದ್ದ ಲೂಟಿಕೋರ ರಾಜ್ಯ ಕಾಂಗ್ರೆಸ್ ಸರ್ಕಾರ, ಅಬಕಾರಿ ಇಲಾಖೆಯನ್ನು ಭ್ರಷ್ಟಾಚಾರದ ಹೆಬ್ಬಾಗಿಲು ಮಾಡಿಕೊಂಡಿದೆ. ಲೈಸೆನ್ಸ್‌ ಟ್ರಾನ್ಸ್‌ಫರ್‌, ಲೈಸೆನ್ಸ್‌ ಶಿಫ್ಟಿಂಗ್‌ಗೆ ಲಕ್ಷ ಲಕ್ಷ ಹಣಕ್ಕೆ ಅಧಿಕಾರಿಗಳು ರಾಜಾರೋಷವಾಗಿ ಕೈ ಚಾಚುತ್ತಿರುವುದು ಎಟಿಎಂ ಸರ್ಕಾರಕ್ಕಾಗಿಯೇ. ರಾಜ್ಯದಲ್ಲಿ ಈ ಪರಿ ಭ್ರಷ್ಟಾಚಾರವನ್ನು ನೋಡಿದರೆ, ನೀವು ತಿನ್ನಿ ನಮಗೂ ಕೊಡಿ ಎನ್ನುವ ಅನಧಿಕೃತ ಆದೇಶವನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೊರಡಿಸಿದಂತಿದೆ ಎಂದು ಬಿಜೆಪಿ ಆರೋಪಿಸಿದೆ.

ಕಾಂಗ್ರೆಸ್‌ ಬಂದಿದೆ, ಲೂಟಿಗೆ ಇಳಿದಿದೆ. ಮೊದಲ ಹಂತದಲ್ಲಿ ಹೈಕಮಾಂಡ್‌ ನೀಡಿರುವ 1000 ಕೋಟಿ ರೂ. ಟಾರ್ಗೆಟ್‌ಗೆ ಸಿದ್ದರಾಮಯ್ಯ ಅವರ ಸರ್ಕಾರ ಪ್ರತಿಯಾಗಿ ಸಚಿವರ ಇಲಾಖೆಗಳಿಗೆ ಟಾರ್ಗೆಟ್​ ಕೊಟ್ಟಿದೆ ಎಂದು ಆರೋಪಿಸಿದೆ.

ಗುತ್ತಿಗೆದಾರರ ಮೂಲಕ ಭರ್ಜರಿ ಕಲೆಕ್ಷನ್‌ ಮಾಡುವ ಸಲುವಾಗಿಯೇ, ಈ ಹಿಂದೆ ಕಾಂಗ್ರೆಸ್‌, ತನ್ನ ಆಪ್ತ ಗುತ್ತಿಗೆದಾರರನ್ನು ಛೂ ಬಿಟ್ಟು ಬಿಜೆಪಿ ಸರ್ಕಾರದ ವಿರುದ್ದ ನಿರಂತರ ಸುಳ್ಳು ಆರೋಪಗಳನ್ನು ಮಾಡಿತ್ತು. ಈ ದೇಶದಲ್ಲಿ ಒಂದು ರೂಪಾಯಿ ಬಿಡುಗಡೆಯಾದರೆ, ಅದರಲ್ಲಿ ಬಡವರಿಗೆ ತಲುಪುವುದು ಕೇವಲ 15 ಪೈಸೆ ಎಂದು ಹೇಳಿದ್ದ ರಾಜೀವ್‌ ಗಾಂಧಿಯವರ ಮಾತನ್ನು ಅಕ್ಷರಶಃ ಪಾಲಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ವಿಧಾನಸೌಧದಲ್ಲಿ ಬಿಡುಗಡೆಯಾಗುವ ಪ್ರತಿ ಒಂದು ರೂಪಾಯಿಯಲ್ಲಿ, 80 ಪೈಸೆಯನ್ನು ತಮ್ಮ ಹೈಕಮಾಂಡ್‌ ಹಾಗೂ ಪಂಚ ರಾಜ್ಯಗಳ ಚುನಾವಣಾ ಫಂಡಿಂಗ್‌ಗೆ ಎತ್ತಿಡುತ್ತಿದೆ ಎಂದು ಬಿಜೆಪಿ ಆಪಾದಿಸಿದೆ.

  • ಸಮಗ್ರ ಭ್ರಷ್ಟಾಚಾರಕ್ಕಾಗಿ ವಿಧಾನಸೌಧವನ್ನು ಭ್ರಷ್ಟಾಚಾರದ ಹೆಡ್ ಆಫೀಸ್ ಮಾಡಿಕೊಂಡು ಪಂಚರಾಜ್ಯ ಚುನಾವಣೆಗೆ ಭರಪೂರ ಫಂಡಿಂಗ್ ಮಾಡುವ ಹೊಣೆ ಹೊತ್ತಿರುವ ಕರ್ನಾಟಕದ ಕಲೆಕ್ಷನ್ ಮಾಸ್ಟರ್ಸ್ ಇವರೇ…#CongressLootsKarnataka #EightyPercentSarkara #ATMSarkara pic.twitter.com/226nqL9Kk0

    — BJP Karnataka (@BJP4Karnataka) October 16, 2023 " class="align-text-top noRightClick twitterSection" data=" ">

ಕಾಂಗ್ರೆಸ್‌ ಕೃಪಾಪೋಷಿತ ಗುತ್ತಿಗೆದಾರರು, ಬಿಲ್ಡರ್‌ಗಳ ಬಳಿ ಕಾಂಗ್ರೆಸ್‌ ಇಟ್ಟಿರುವ ಠೇವಣಿಯ ಪ್ರತಿಯೊಂದು ಉಗ್ರಾಣವೂ ಎಟಿಎಂ ಸರ್ಕಾರದ ಕರಾಳ ಕಲೆಕ್ಷನ್ ದಂಧೆಯ ಪ್ರತಿಬಿಂಬ ಎಂದಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ಅವರದ್ದು ಕರ್ನಾಟಕ ಕಂಡ ಅತಿಭ್ರಷ್ಟ ಸರ್ಕಾರ ಎಂಬುದನ್ನು ಈಗ ಸಿಕ್ಕಿರುವ ಸರಾಸರಿ 40 ಕೋಟಿಯ ಪ್ರತಿ ನೋಟುಗಳೂ ಕೂಗಿ ಹೇಳುತ್ತಿವೆ ಎಂದು ಬಿಜೆಪಿ ಆಪಾದನೆ ಮಾಡಿದೆ.

ಇದನ್ನೂ ಓದಿ: "ಐಟಿ ರೇಡ್​ನಲ್ಲಿ ಸಿಕ್ಕ ಹಣ ಎಸ್​ಎಸ್​ಟಿ ಟ್ಯಾಕ್ಸ್​​ಗೆ ಸೇರಿದ್ದು": ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಆರೋಪ

Last Updated : Oct 17, 2023, 5:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.