ETV Bharat / state

ಈಶ್ವರಪ್ಪ ಪುತ್ರನ ಕೈ ತಪ್ಪಿದ ಟಿಕೆಟ್: ಶಿವಮೊಗ್ಗಕ್ಕೆ ಚನ್ನಬಸಪ್ಪ, ಮಾನ್ವಿಗೆ ಬಿವಿ ನಾಯಕ್ ಹೆಸರು ಪ್ರಕಟ - ಬಿ ವಿ ನಾಯಕ್​

ಕಾಂಗ್ರೆಸ್​ನ ಮಾಜಿ ಸಂಸದ ಬಿ ವಿ ನಾಯಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅವರಿಗೀಗ ಬಿಜೆಪಿ ಮಾನ್ವಿ ಕ್ಷೇತ್ರದ ಟಿಕೆಟ್​ ನೀಡಿ ಕಾಂಗ್ರೆಸ್​ಗೆ ಶಾಕ್​ ನೀಡಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಹಾಗೂ ಅಂತಿಮ ಪಟ್ಟಿ.

ಹಳೆ ಬೇರು ಹೊಸ‌ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ‌. #BJPYeBharavase #DoubleEngineSarkara pic.twitter.com/6VLa19NiQf
— BJP Karnataka (@BJP4Karnataka) April 19, 2023

author img

By

Published : Apr 19, 2023, 11:27 PM IST

Updated : Apr 20, 2023, 10:16 AM IST

ಬೆಂಗಳೂರು: ಸಾಕಷ್ಟು ಕುತೂಹಲ ಕೆರಳಿಸಿದ್ದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಚನ್ನಬಸಪ್ಪ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ. ಮಾನ್ವಿ ಮೀಸಲು ಕ್ಷೇತ್ರಕ್ಕೆ ಬಿ ವಿ ನಾಯಕ್ ಅವರನ್ನು ಆಯ್ಕೆ ಮಾಡಿದೆ. ಈ ಮೂಲಕ ಎಲ್ಲಾ 224 ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರು ಪ್ರಕಟಿಸಿದೆ.

ಮೂರು ಪಟ್ಟಿಗಳ ಮೂಲಕ 222 ಕ್ಷೇತ್ರಕ್ಕೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದ ಬಿಜೆಪಿ ಬಾಕಿ ಉಳಿದಿದ್ದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ. ಕೆ.ಎಸ್ ಈಶ್ವರಪ್ಪ ಪ್ರತಿನಿಧಿಸುತ್ತಿದ್ದ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಸಾಕಷ್ಟು ಹಗ್ಗ ಜಗ್ಗಾಟ ನಡೆದಿದ್ದು, ರಾಜ್ಯ ಸಮಿತಿಯಿಂದ ಎರಡನೇ ಬಾರಿ ಅಭಿಪ್ರಾಯ ಪಡೆದು ಹೈಕಮಾಂಡ್ ಹೆಸರು ಪ್ರಕಟಿಸಿದೆ.

ಈಶ್ವರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಒತ್ತಡ ಇತ್ತು, ಆದರೆ ಇದಕ್ಕೆ ಒಪ್ಪದ ಹೈಕಮಾಂಡ್ ಈಶ್ವರಪ್ಪ ಕುಟುಂಬಕ್ಕೆ ಟಿಕೆಟ್ ಬೇಡ ಎನ್ನುವ ತೀರ್ಮಾನ ಪ್ರಕಟಿಸಿತ್ತು. ನಂತರ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ‌ ಅವರು ಈಶ್ವರಪ್ಪ ಪುತ್ರ ಕಾಂತೇಶ್ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಮಾತುಕತೆ ನಡೆಸಿದರು.

• ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಪಕ್ಷದ ಅಭ್ಯರ್ಥಿಗಳ ನಾಲ್ಕನೇ ಹಾಗೂ ಅಂತಿಮ ಪಟ್ಟಿ.

ಹಳೆ ಬೇರು ಹೊಸ‌ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ‌. #BJPYeBharavase #DoubleEngineSarkara pic.twitter.com/6VLa19NiQf

— BJP Karnataka (@BJP4Karnataka) April 19, 2023 " class="align-text-top noRightClick twitterSection" data=" ">

ಪಕ್ಷದ ನಾಯಕರು ಕೂಡ ಕಚೇರಿಗೆ ಕರೆಸಿಕೊಂಡು ಮನವೊಲಿಕೆ ಮಾಡಿದರು. ನಂತರ ಆಯನೂರು ಮಂಜುನಾಥ್ ಟಿಕೆಟ್ ಗೆ ಯತ್ನಿಸಿದರು. ಆದರೆ ಯುವ ಮುಖಕ್ಕೆ ಅವಕಾಶ ನೀಡಬೇಕು ಎನ್ನುವ ಕಾರಣಕ್ಕೆ ಸಂಘದ ಹಿನ್ನಲೆಯಲ್ಲಿ, ಸಂಘಟನಾತ್ಮಕ ಚಾತುರ್ಯ ಹೊಂದಿದ ಚನ್ನಬಸಪ್ಪಗೆ ಹೈಕಮಾಂಡ್ ಟಿಕೆಟ್ ನೀಡಿದೆ. ಈ ಮೂಲಕ ಈಶ್ವರಪ್ಪ ಅವರ ಕುಟುಂಬವನ್ನು ಚುನಾವಣೆಯಿಂದ ದೂರ ಇಡಲಾಗಿದೆ, ಇನ್ನು ಕುತೂಹಲಕ್ಕೆ ಕಾರಣವಾಗಿದ್ದ ಮಾನ್ವಿ ಕ್ಷೇತ್ರದ ಟಿಕೆಟ್​ ಅನ್ನು ಇವತ್ತಷ್ಟೇ ಬಿಜೆಪಿಗೆ ಸೇರ್ಪಡೆಗೊಂಡ ಬಿ ವಿ ನಾಯಕ್​ ಅವರಿಗೆ ನೀಡಲಾಗಿದೆ.

ಕಾಂಗ್ರೆಸ್​ನ ಮಾಜಿ ಸಂಸದ ಬಿ ವಿ ನಾಯಕ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅವರಿಗೀಗ ಬಿಜೆಪಿ ಮಾನ್ವಿ ಕ್ಷೇತ್ರದ ಟಿಕೆಟ್​ ನೀಡಿ ಕಾಂಗ್ರೆಸ್​ಗೆ ಶಾಕ್​ ನೀಡಿದೆ. ಮಾನ್ವಿ ಕ್ಷೇತ್ರಕ್ಕೆ ಐದಾರು ಜನ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಯಾರಿಗೆ ಟಿಕೆಟ್ ನೀಡಿದರೆ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರದಲ್ಲಿ ಅಳೆದು ತೂಗಿ ಕಡೆಗೆ ಬಿವಿ ನಾಯಕ್ ಗೆ ಟಿಕೆಟ್ ನೀಡಿದೆ. ಆ ಮೂಲಕ ಎಲ್ಲಾ 224 ಕ್ಷೇತ್ರ ಗಳಿಗೂ ಅಭ್ಯರ್ಥಿಗಳ ಪ್ರಕಟ ಮುಗಿದಂತಾಗಿದೆ. ಈ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.

ಇಂದು ಪ್ರಕಟವಾದ ಎರಡು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿದ್ದು ಹೊಸ ಮುಖಕ್ಕೆ ಮಣೆ ಹಾಕಲಾಗಿದೆ. ಶಿವಮೊಗ್ಗ ಹಾಲಿ ಶಾಸಕರ ಬದಲು ಯುವ ಮುಖಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಮೂಲಕ ಬಿಜೆಪಿ 224 ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದಂತಾಗಿದೆ. ಈ ಬಗ್ಗೆ ಟ್ವೀಟ್​ ಮಾಡಿರುವ ಬಿಜೆಪಿ ರಾಜ್ಯ ಘಟಕ ಹಳೆ ಬೇರು ಹೊಸ‌ ಚಿಗುರಿನ ಈ ಶಕ್ತಿ ಭವಿಷ್ಯದ ದಿಕ್ಸೂಚಿ‌ ಎಂದು ಟ್ವೀಟ್​ ಮಾಡಿದೆ.

ಇದನ್ನು ಓದಿ:ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಸಿಂಹಪಾಲು: ಜಾತಿವಾರು ಟಿಕೆಟ್ ಹಂಚಿಕೆ ಹೀಗಿದೆ..

Last Updated : Apr 20, 2023, 10:16 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.