ETV Bharat / state

ಕಾಂಗ್ರೆಸ್​​-ಜೆಡಿಎಸ್​ನ ಘಟಾನುಘಟಿಗಳೇ ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕಟೀಲ್

ಕಾಂಗ್ರೆಸ್, ಜೆಡಿಎಸ್​​ನಲ್ಲಿ ತಳಮಳ ಶುರುವಾಗಿದೆ. ಕಾಂಗ್ರೆಸ್​​ನಲ್ಲಿ ಹತ್ತಾರು ವರ್ಷ ಕೆಲಸ ಮಾಡಿದವರು, ಕಾಂಗ್ರೆಸ್ ಗೂಂಡಾಗುರಿಯಿಂದ ಬೇಸತ್ತು ಬಿಜೆಪಿ ಸೇರಿದರು. ಇಂದು ಜನತಾ ದಳದಲ್ಲಿ ಕೆಲಸ‌ ಮಾಡಿದ್ದವರು ಕುಟುಂಬ ರಾಜಕಾರಣದಿಂದ ಬೇಸತ್ತು ಬಿಜೆಪಿ ಸೇರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

bjp-naleen-kumar-kateel-talks-on-bypolls
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
author img

By

Published : Oct 21, 2020, 1:06 PM IST

ಬೆಂಗಳೂರು: ಕೇವಲ ಕಾರ್ಪೊರೇಟರ್​ಗಳು ಮಾತ್ರವಲ್ಲ, ಮುಂದಿನ ದಿನಗಳಲ್ಕಿ ಕಾಂಗ್ರೆಸ್, ಜೆಡಿಎಸ್​​​​ನ ಘಟಾನುಘಟಿ ನಾಯಕರೇ ಬಿಜೆಪಿ ಕದ ತಟ್ಟಲಿದ್ದಾರೆ. ಕೆಲ ನಾಯಕರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಮಚಂದ್ರ ಬಿಟಿಎಂ ಲೇಔಟ್ ಮಾಜಿ ಸದಸ್ಯ ದೇವದಾಸ್, ಸ್ವತಂತ್ರ ಸದಸ್ಯರಾಗಿದ್ದ ಚಂದ್ರಪ್ಪ ರೆಡ್ಡಿ, ದೊಮ್ಮಲೂರು ಪಾಲಿಕೆ ಸದಸ್ಯ ಲಕ್ಷ್ಮಿನಾರಾಯಣ, ಗಾಂಧಿನಗರ ಮಾಜಿ ಸದಸ್ಯ ಬಿ.ಟಿ.ಎಸ್ ನಾಗರಾಜ್, ಮಂಜುಳಾ ಮಂಜುನಾಥ ಬಾಬು, ಲಗ್ಗೆರೆ ಮಂಜುನಾಥ್, ನಾರಾಯಣಸ್ವಾಮಿ, ಮಂಜುಳಾ ನಾರಾಯಣಸ್ವಾಮಿ ಸೇರಿದಂತೆ ಜೆಡಿಎಸ್​ನ ಹಲವು ಮುಖಂಡರು ಬಿಜೆಪಿ ಸೇರಿದರು. ನಗರ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೆಡಿಎಸ್ ತೊರೆದು ಬಂದವರನ್ನು ಬಿಜೆಪಿಗೆ ಬರಮಾಡಿಕೊಂಡರು.

ಕಾಂಗ್ರೆಸ್​​-ಜೆಡಿಎಸ್​ನ ಘಟಾನುಘಟಿಗಳೇ ಬಿಜೆಪಿ ಸಂಪರ್ಕದಲ್ಲಿದ್ದಾರೆ: ಕಟೀಲ್ ಹೊಸ ಬಾಂಬ್​​

ನಂತರ ಮಾತನಾಡಿದ ಕಟೀಲ್, ಚುನಾವಣಾ ಅಖಾಡದ ಬಿಸಿ ಏರುತ್ತಿದೆ, ವಾತಾವರಣ ಬಿಸಿಯಾಗುತ್ತಿದ್ದಂತೆ, ಕಾಂಗ್ರೆಸ್, ಜೆಡಿಎಸ್​​ನಲ್ಲಿ ತಳಮಳ ಶುರುವಾಗಿದೆ. ಕಾಂಗ್ರೆಸ್​​ನಲ್ಲಿ ಹತ್ತಾರು ವರ್ಷ ಕೆಲಸ ಮಾಡಿದವರು, ಕಾಂಗ್ರೆಸ್ ಗೂಂಡಾಗುರಿಯಿಂದ ಬೇಸತ್ತು ಬಿಜೆಪಿ ಸೇರಿದರು. ಜನತಾ ದಳದಲ್ಲಿ ಕೆಲಸ‌ ಮಾಡಿದ್ದವರು ಕುಟುಂಬ ರಾಜಕಾರಣದಿಂದ ಬೇಸತ್ತು ಬಿಜೆಪಿ ಸೇರಿದ್ದಾರೆ ಎಂದರು.

ಈಗ ನಾವು ಪರಿವರ್ತನೆ ಯುಗದಲ್ಲಿದ್ದೇವೆ, ಬಿಜೆಪಿಗೆ ಶಕ್ತಿ ಇಲ್ಲದ ಕಡೆಯೂ ಜನ ಬಿಜೆಪಿಗೆ ಬರುತ್ತಿದ್ದಾರೆ, ಎಲ್ಲೆಡೆ ಬಿಜೆಪಿ ಪರ ವಾತಾವರಣ ಇದೆ, ಕೇವಲ ಕಾರ್ಪೊರೇಟರ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್​ನ ಘಟಾನುಘಟಿಗಳೇ ಬಿಜೆಪಿ ಸೇರಲಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಬಹುಮತ ಇದ್ದರೂ ಅಭಿವೃದ್ಧಿ ಮಂತ್ರ ತೆಗೆದುಕೊಳ್ಳಲಿಲ್ಲ. ಬ್ರಿಟೀಷರ ರೀತಿ ಒಡೆದಾಳುವ ನೀತಿ ಅನುಸರಿಸಿ ರಾಜಕೀಯಕ್ಕೆ ಮುಂದಾದರು. ಟಿಪ್ಪು ಜಯಂತಿ ಆಚರಣೆ, ವೀರಶೈವ ಲಿಂಗಾಯುತ ಧರ್ಮ ಮಾಡಲು ಹೊರಟರು. ನಿರಂತರ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಾಗ ಕ್ರಮ ತೆಗೆದುಕೊಳ್ಳಲಿಲ್ಲ, ರಾಷ್ಟ್ರ ವಿರೋಧಿ ಎಸ್​​​ಡಿಪಿಐ ಕಾರ್ಯಕರ್ತರನ್ನು ಬಿಡುಗಡೆ ಮಾಡಿದರು ಎಂದು ಕಿಡಿಕಾರಿದರು.

ಈಗಲೂ ಡಿ.ಜೆ.ಹಳ್ಳಿ ಪ್ರಕರಣದಲ್ಲಿ ರಾಜಕೀಯ ಕಾರಣ ಸ್ಪಷ್ಟವಾಗಿದೆ. ಹಿಂದೂ, ಮುಸ್ಲಿಂ ಗಲಾಟೆ ಅಲ್ಲ, ಡಿಕೆಶಿ, ಸಿದ್ದರಾಮಯ್ಯ ಗಲಭೆ ಎಂದು ಹೇಳಲಾಗುತ್ತಿದೆ, ಶಾಸಕನ ಮನೆಗೆ ಬೆಂಕಿ ಹಾಕಿದರೂ ವಿರೋಧಿಸದ ನೀಚ ಮಟ್ಟಕ್ಕೆ ಇವರು ಇಳಿದಿದ್ದಾರೆ. ಬರೀ ಶಾಸಕ ಅಖಂಡ ಮನೆಗೆ ಬೆಂಕಿ ಅಲ್ಲ, ಕಾಂಗ್ರೆಸ್ ಅಧಿಕಾರ ಇಲ್ಲದಾಗ ರಾಜ್ಯಕ್ಕೆ ಬೆಂಕಿ ಹಾಕಲಿದೆ ಹಾಗಾಗಿ ಕಾಂಗ್ರೆಸ್ ಮುಖಂಡರು ಆ ಪಕ್ಷಕ್ಕೆ ಧಿಕ್ಕಾರ ಹಾಕಿ ಬಿಜೆಪಿಗೆ ಬರುತ್ತಿದ್ದಾರೆ ಎಂದರು.
ಹುಲಿಯಾ ಕಾಡಿಗೆ,ಬಂಡೆ ಛಿದ್ರ, ಬಿಜೆಪಿ ಭದ್ರ
ಕಾಂಗ್ರೆಸ್​​​​ನಲ್ಲಿ ಶಿರಾವನ್ನು ಒಬ್ಬರು ಆರ್.ಆರ್.ನಗರವನ್ನು ಮತ್ತೊಬ್ಬರು ಉಸ್ತುವಾರಿ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಬಿಜೆಪಿ ಪೈಪೋಟಿ ಅಲ್ಲ. ಶಿರಾ ಅಭ್ಯರ್ಥಿ ಸೋಲಿಸಲು ಆರ್.ಆರ್.ನಗರ ಉಸ್ತುವಾರಿ, ಆರ್.ಆರ್.ನಗರ ಅಭ್ಯರ್ಥಿ ಸೋಲಿಸಲು ಶಿರಾ ಉಸ್ತುವಾರಿ ಯತ್ನಿಸುತ್ತಿದ್ದಾರೆ. ಇಲ್ಲಿ ಬಂಡೆ, ಹುಲಿಯಾ, ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಹುಲಿಯಾ ಕಾಡಿಗೆ ಹೋಗುತ್ತದೆ, ಬಂಡೆ ಛಿದ್ರವಾಗಲಿದೆ, ಬಿಜೆಪಿ ಗೆದ್ದು ಭದ್ರವಾಗಲಿದೆ ಎಂದು ಕಟೀಲ್ ವ್ಯಂಗ್ಯವಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.