ETV Bharat / state

ರಮಾಡ ರೆಸಾರ್ಟ್ ತಲುಪಿದ ಬಿಜೆಪಿ ಶಾಸಕರು: ಬಿಗಿ ಪೊಲೀಸ್ ಭದ್ರತೆ - Police Security

ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ಶಾಸಕರು ಯಲಹಂಕದ ಹೊನ್ನೇನಹಳ್ಳಿಯಲ್ಲಿರುವ ರಮಾಡ ರೆಸಾರ್ಟ್ ತಲುಪಿದ್ದಾರೆ. 82 ಶಾಸಕರು ಹಾಗೂ ಇನ್ನುಳಿದ ಬಿಜೆಪಿ ಶಾಸಕರು ಸಾಯಿಲೀಲಾ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ.

ರಮಾಡ ರೆಸಾರ್ಟ್ ತಲುಪಿದ ಬಿ.ಜೆ.ಪಿ ಶಾಸಕರು
author img

By

Published : Jul 12, 2019, 8:47 PM IST

ಬೆಂಗಳೂರು: ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ಶಾಸಕರು ಯಲಹಂಕದ ಹೊನ್ನೆನಹಳ್ಳಿಯಲ್ಲಿರುವ ರಮಾಡ ರೆಸಾರ್ಟ್‌ಗೆ ಬಂದಿಳಿದಿದ್ದು, ಇನ್ನು ಮೂರು ದಿನಗಳ ಕಾಲ ಶಾಸಕರು ಇಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ರಮಾಡ ರೆಸಾರ್ಟ್ ತಲುಪಿದ ಬಿ.ಜೆ.ಪಿ ಶಾಸಕರು: ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆ

ರಮಾಡ ಹೋಟೆಲ್​ಗೆ 82 ಶಾಸಕರ ದಂಡು:

ವಿ. ಸೊಮಣ್ಣ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಸುರಪುರ ಶಾಸಕ ರಾಜುಗೌಡ ಕಾರಿನಲ್ಲಿ ಬಂದರು. ಸಂಜೆ 7ಗಂಟೆ ಸುಮಾರಿಗೆ ಆಗಮಿಸಿದ ಮೊದಲ ಬಸ್​ನಲ್ಲಿ 25ಕ್ಕೂ ಹೆಚ್ಚು ಶಾಸಕರು ಆಗಮಿಸಿದರು. ರೆಸಾರ್ಟ್ ಒಳಗೆ ರಾಜಕೀಯ ಮುಖಂಡರನ್ನು ಹೊರತುಪಡಿಸಿ, ಯಾರೊಬ್ಬರಿಗೂ ಪ್ರವೇಶವಿಲ್ಲ. ಆಪ್ತರಿಗೂ ನೋ ಎಂಟ್ರಿ. ರಮಾಡ ರೆಸಾರ್ಟ್ ಸುತ್ತಮುತ್ತ ಬಿಜೆಪಿ ಮುಖಂಡರು ಲವಲವಿಕೆಯಿಂದ ಓಡಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡುಬಂತು. ಇನ್ನುಳಿದ ಬಿಜೆಪಿ ಶಾಸಕರನ್ನು ಸಾಯಿಲೀಲಾ ಹೋಟೆಲ್​ನಲ್ಲಿ ಉಳಿಸಲಾಗಿದೆ.

ಬಿಜೆಪಿ ಮುಖಂಡರಿಗೆ ಹಾಗೂ ಶಾಸಕರುಗಳ ಆಪ್ತರಿಗೆ ಶಾಮಿಯಾನ, ಚೇರ್ ವ್ಯವಸ್ಥೆ ಮಾಡಲಾಗಿದೆ. ಇನ್ನು ರೆಸಾರ್ಟ್ ಸುತ್ತಮುತ್ತ ಎಸ್.ಆರ್.ವಿಶ್ವನಾಥ್ ಬೆಂಬಲಿಗರು ಹದ್ದಿನ ಕಣ್ಣಿಟ್ಟಿದ್ದು ಎಲ್ಲಾ ಕಡೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಿಕ್ಕಿರಿದು ಸೇರಿರುವ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ. ಇನ್ನು ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ.

ಸುಪ್ರೀಂಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜಿನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್​ನಲ್ಲಿ ಬಿಜೆಪಿ ಹಿಡಿದಿಟ್ಟುಕೊಂಡಿದೆ.

Intro:
ರಮಡ ರೆಸಾರ್ಟ್ ತಲುಪಿದ ಬಿ.ಜೆ.ಪಿ ಶಾಸಕರು: ರೆಸಾರ್ಟ್ ಸುತ್ತಮುತ್ತ ಪೊಲೀಸ್ ಭದ್ರತೆ

ಬೆಂಗಳೂರು: ರಿವರ್ಸ್ ಆಪರೇಷನ್ ಭೀತಿಯಲ್ಲಿರುವ ಬಿಜೆಪಿ ಶಾಸಕರು ಯಲಹಂಕದ ಹೊನ್ನೆನಹಳ್ಳಿಯಲ್ಲಿರುವ ರಮಡ ರೆಸಾರ್ಟ್ ಗೆ ಬಂದಿಳಿದಿದ್ದು, ಇನ್ನು ಮೂರುದಿನಗಳ ಕಾಲ ಶಾಸಕರುಗಳು ವಾಸ್ತವ್ಯ ಹೂಡಲಿದ್ದಾರೆ.

ರಮಾಡ ಹೋಟೆಲ್ ಗೆ ಶಾಸಕರು ನಾಯಕರ‌ ದಂಡು,ವಿ. ಸೊಮಣ್ಣ, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಸುರಪುರ ಶಾಸಕ ರಾಜುಗೌಡ ಕಾರಿನಲ್ಲಿ ಬಂದರು. ಇನ್ನುಳಿದಂತೆ, ಸಂಜೆ 7ಗಂಟೆ ಸುಮಾರಿಗೆ ಆಗಮಿಸಿದ ಮೊದಲ ಬಸ್ ನಲ್ಲಿ 25ಕ್ಕೂ ಹೆಚ್ಚು ಶಾಸಕರ ದಂಡು ಬಂದಿಳಿದರು. ರೆಸಾರ್ಟ್ ಒಳಗೆ ರಾಜಕೀಯ ಮುಖಂಡರನ್ನು ಹೊರತುಪಡಿಸಿ, ಯಾರೊಬ್ಬರನ್ನು ನೋ ಎಂಟ್ರೀ, ಆಪ್ತರಿಗೂ ನೋ ಎಂಟ್ರೀ. ರಮಡ ರೆಸಾರ್ಟ್ ನ ಸುತ್ತಮುತ್ತ ಸಂಭ್ರಮವೋ ಸಂಭ್ರಮ ಬಿಜೆಪಿ ಮುಖಂಡರು ಲವಲವಿಕೆಯಿಂದ ಓಡಾಡುತ್ತಿದ್ದು ಹಬ್ಬದ ವಾತಾವರಣ ನಿರ್ಮಾಣವಾಗಿದೆ.

Body:ಬಿಜೆಪಿ ಮುಖಂಡರಿಗೆ ಹಾಗೂ ಶಾಸಕರುಗಳ ಆಪ್ತರಿಗೆ ಶಾಮಿಯಾನ ಚೇರ್ ವ್ಯವಸ್ಥೆ ಮಾಡಲಾಗಿದ್ದು. ಸಕಲ ಸಿದ್ದತೆ ಮಾಡಲಾಗಿದೆ. ಇನ್ನು ರೆಸಾರ್ಟ್ ಸುತ್ತಮುತ್ತಲೂ ಎಸ್.ಆರ್.ವಿಶ್ವನಾಥ್ ಬೆಂಬಲಿಗರು ಹದ್ದಿನಕಣ್ಣಿಟ್ಟುದ್ದು ಎಲ್ಲಾಕಡೆ ಬಿಜೆಪಿ ಕಾರ್ಯಕರ್ತರು ಹಾಗೂ ಸ್ವಯಂಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಿಕ್ಕಿರಿದು ಸೇರಿರುವ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲೇ ಬಿಡಾರ ಹೂಡಿದ್ದಾರೆ.ಇನ್ನು ಸ್ಥಳದಲ್ಲಿ ಬೀಡುಬಿಟ್ಟಿರುವ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕೈಗೊಂಡಿದ್ದಾರೆ.

Conclusion:ಸುಪ್ರೀಂ ಕೋರ್ಟ್ ಆದೇಶ, ಅತೃಪ್ತ ಶಾಸಕರ ರಾಜೀನಾಮೆ ಗೊಂದಲ, ರಾಜಕೀಯ ಅಸ್ಥಿರತೆ ನಡುವೆ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಪ್ರೇರಣೆಯಿಂದ ಮೈತ್ರಿ ಸರ್ಕಾರಕ್ಕೆ ಇರುವ ವಿಶ್ವಾಸ ಮತ ಸಾಬೀತುಪಡಿಸುತ್ತೇನೆ ಎಂದು ಹೇಳಿರುವುದರಿಂದ ಅಧಿವೇಶನಕ್ಕಾಗಿ ಆಗಮಿಸಿರುವ ಶಾಸಕರನ್ನು ರೆಸಾರ್ಟ್​ ನಲ್ಲಿ. ತನ್ನ ಶಾಸಕರನ್ನು ಹಿಡಿದಿಟ್ಟುಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.