ETV Bharat / state

ಯತ್ನಾಳ್‌ ಅವರನ್ನು ನಿಮ್ಹಾನ್ಸ್​ಗೆ ಸೇರಿಸಬೇಕು: ರೇಣುಕಾಚಾರ್ಯ

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೋವಿಡ್​ ವೇಳೆ ಭಾರಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಶಾಸಕ ಯತ್ನಾಳ್, ದಾಖಲೆ ಇದ್ದರೆ ನೀಡಲಿ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ
author img

By ETV Bharat Karnataka Team

Published : Dec 28, 2023, 5:55 PM IST

ಯತ್ನಾಳ್​ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ

ಬೆಂಗಳೂರು: ಕೋವಿಡ್​ ಸಂದರ್ಭದಲ್ಲಿ 40 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರ ಹೇಳಿಕೆ ಈ ವರ್ಷದ ಅತ್ಯಂತ ದೊಡ್ಡ ಕಾಮಿಡಿ. ಯತ್ನಾಳರನ್ನು ನಿಮ್ಹಾನ್ಸ್​ ಆಸ್ಪತ್ರೆಗೆ ಸೇರಿಸಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಪ್ರಶ್ನಾತೀತ ನಾಯಕ. ಅವರ ವಿರುದ್ಧ ಯತ್ನಾಳ್ ಮಾತನಾಡಿದ್ದಾರೆ. ಯತ್ನಾಳ್ ಪ್ರಭಾವಿ ಸಚಿವರ ಜೊತೆ ಮ್ಯಾಚ್ ಫಿಕ್ಸ್ ಮಾಡಿಕೊಂಡಿದ್ದಾರೆ, ಇದು ಯಾರಿಗೂ‌ ಗೊತ್ತಿಲ್ಲವೇ?, ಕೋವಿಡ್​ ಸಂದರ್ಭದಲ್ಲಿ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದರು. ಅದಿವೇಶನದಲ್ಲಿ ಸುದೀರ್ಘ ಚರ್ಚೆಯಾಗಿತ್ತು. 2,000 ಕೋಟಿ ರೂ ಮಾತ್ರ ಬಿಡುಗಡೆಯಾಗಿತ್ತು. ಆದರೆ 40 ಸಾವಿರ ಕೋಟಿ ಅಂತ ಆರೋಪ ಮಾಡುತ್ತಿದ್ದಾರೆ. ಅದರ ಬಗ್ಗೆ ದಾಖಲೆ ಇದ್ದರೆ ಕೊಡಲಿ ಎಂದರು.

ಯತ್ನಾಳ್ ಹೇಳಿಕೆಯಿಂದ ನೋವಾಗಿದೆ: ಯತ್ನಾಳ್ ಬಗ್ಗೆ ನಾನು ಇಲ್ಲಿ ಮಾತನಾಡಲ್ಲ. ನನಗೆ ಮನಸ್ಸಿಗೆ ನೋವಾಗಿದೆ. ಪಕ್ಷದಲ್ಲೇ ಇದ್ದು ಈ ರೀತಿ ಹೇಳೋದು ಸರಿಯಲ್ಲ. ನಾವೆಲ್ಲ ಪಕ್ಷ ಕಟ್ಟಲು ಶ್ರಮಿಸಿದ್ದೇವೆ. ನಾನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೇನೆ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದರು.

ಯತ್ನಾಳ್​ ಹೇಳಿಕೆ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ

ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ: ಯಡಿಯೂರಪ್ಪ ವಿರುದ್ಧ ಯತ್ನಾಳ್ ಹೇಳಿಕೆಯನ್ನು ನಾನೂ ಕೂಡಾ ಒಪ್ಪಲ್ಲ. ಈ ವಿಚಾರವಾಗಿ ಹೈಕಮಾಂಡ್ ಬಳಿ ಮಾತಾಡಬಹುದಿತ್ತು. ಅದರ ಬದಲು ಅವರು ಬೀದಿಯಲ್ಲಿ ಮಾತಾಡಿರೋದು ಸರಿಯಲ್ಲ. ಅವರ ಮನಸ್ಸಿಲ್ಲಿ ಏನಿದೆ ಅಂತ ಗೊತ್ತಿಲ್ಲ. ಕೇಂದ್ರದ ಬಿಜೆಪಿ ನಾಯಕರು ನೋಡಿಕೊಳ್ಳುತ್ತಾರೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

ಕರವೇ ಅಧ್ಯಕ್ಷ‌ ನಾರಾಯಣ ಗೌಡ ಬಂಧನವನ್ನು ಈಶ್ವರಪ್ಪ ‌ಖಂಡಿಸಿದರು. ಈ‌ ಹಿಂದೆಯೇ ‌ಅವರು‌ ಬೋರ್ಡ್ ತೆರವಿಗೆ ಹೇಳಿದ್ದರು. ಬಿಜೆಪಿ ಹಿಂಸೆ ಒಪ್ಪಲ್ಲ. ರಾಜ್ಯ ಸರ್ಕಾರವೇ ಇಂಗ್ಲಿಷ್ ಬೋರ್ಡ್ ಹಾಕಿರುವವರನ್ನ‌ು ಕರೆಸಿ ತೆಗೆಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದರು. ಇದೇ ವೇಳೆ, ಸಂಸದ ಡಿ.ವಿ.ಸದಾನಂದ ಗೌಡ ಮರು ಸ್ಪರ್ಧೆಗೆ ಒತ್ತಾಯದ ಬಗ್ಗೆ ಗೊತ್ತಿಲ್ಲ ಎಂದರು.

ಯತ್ನಾಳ್ ಕೋವಿಡ್ ಅಕ್ರಮ ಆರೋಪ ಮಾಡಿದ್ದಾರೆ. ಕೋವಿಡ್​ಗಾಗಿ ಏನೇ ಖರೀದಿ ಮಾಡಬೇಕಾದ್ರೂ ಟಾಸ್ಕ್ ಫೋರ್ಸ್ ನಿರ್ಧಾರ ಮಾಡ್ತಿತ್ತು. ಖರೀದಿಯಲ್ಲಿ ಒಂದು ರೂಪಾಯಿ ಕೂಡ ಅಕ್ರಮ ಆಗಿಲ್ಲ. ಯತ್ನಾಳ್ ಅವರಿಗೆ ಮಾಹಿತಿ ಕೊರತೆ ಇದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದರು.

ಇಷ್ಟು ದಿನ ಯಾಕೆ ಸುಮ್ಮನಿದ್ದರು?: ಕೋವಿಡ್​ ಸಂದರ್ಭದಲ್ಲಿ ಅಕ್ರಮ ಆಗಿದೆ ಅಂದಿದ್ದರೆ ಇಷ್ಟು ದಿನ ಯಾಕೆ ಅವರು ಸುಮ್ಮನಿದ್ರು?, ಈಗ ಮನಸ್ಸಿಗೆ ಬಂದಿದ್ದು, ತೋಚಿದ್ದು ಮಾತಾಡೋದು ಸರಿಯಲ್ಲ. ನಾನು ನನ್ನ ಕೆಲಸ ಮಾಡ್ತಿದ್ದೀನಿ, ಬಿಜೆಪಿಯಲ್ಲಿದೀನಿ, ಬಿಜೆಪಿ ಕೆಲಸ ಮಾಡ್ತಿದೀನಿ. ನನಗೆ ಯತ್ನಾಳ್ ಬುದ್ಧಿ ಹೇಳುವ ಅಗತ್ಯವಿಲ್ಲ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿರುಗೇಟು ನೀಡಿದರು.

ಇದನ್ನೂ ಓದಿ: 'ಚಾಮರಾಜನಗರದಿಂದ ಖರ್ಗೆ ಸ್ಪರ್ಧಿಸಿದರೆ ಲಕ್ಷ ಮತಗಳ ಲೀಡ್​​ನಿಂದ ಗೆಲ್ಲಿಸುತ್ತೇನೆ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.