ETV Bharat / state

ಡಿಜಿಪಿ‌ ಅಲೋಕ್ ಮೋಹನ್​ಗೆ ದೂರು ನೀಡಿದ ಬಿಜೆಪಿ ನಿಯೋಗ - etv bharat kannada

ಬಿಜೆಪಿ ಕಾರ್ಯಕರ್ತರ ವಿರುದ್ಧ ಕ್ಷುಲ್ಲಕ ಕಾರಣ ನೀಡಿ ಪೊಲೀಸ್​ ಠಾಣೆಗಳಲ್ಲಿ ಪ್ರಕರಣಗಳು ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಎನ್​ ರವಿಕುಮಾರ್​ ಆರೋಪಿಸಿದ್ದಾರೆ.

ಎನ್​ ರವಿಕುಮಾರ್
ಎನ್​ ರವಿಕುಮಾರ್
author img

By ETV Bharat Karnataka Team

Published : Sep 6, 2023, 9:03 PM IST

ಬೆಂಗಳೂರು: ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ವಿರುದ್ದ ಕ್ಷುಲ್ಲಕ ಕಾರಣಗಳನ್ನ ನೀಡಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತಿದೆ. ಸರ್ಕಾರ ನಡೆ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮೇಲ್ಮನೆ ಸದಸ್ಯರಾಗಿರುವ ಎನ್.ರವಿಕುಮಾರ್ ನೇತೃತ್ವದ ನಿಯೋಗದ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ. ಶಾಸಕ ರವಿಸುಬ್ರಮಣ್ಯ, ಮುಖಂಡರಾದ ಭಾಸ್ಕರ್ ರಾವ್, ವಿವೇಕರೆಡ್ಡಿ ನೇತೃತ್ವದಲ್ಲಿ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ತೆರಳಿ ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ‌ ರವಿಕುಮಾರ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನ ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪ ಹೊರಿಸಿ ಪ್ರಕರಣ ದಾಖಲಿಸಿಕೊಂಡು ಬಂಧಿಸುತ್ತಿದೆ. ಬಿಜೆಪಿಯ ಸಾಮಾಜಿಕ‌ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಕಾರ್ಯಕರ್ತರನ್ನ ರಾತ್ರೋ ರಾತ್ರಿ ಮಫ್ತಿಯಲ್ಲಿ ಮನೆಯಲ್ಲಿ ತೆರಳಿ ಪೊಲೀಸರು ಬಂಧಿಸುತ್ತಿದ್ದಾರೆ. ಕ್ಷುಲ್ಲಕ ಕಾರಣಗಳನ್ನ ನೀಡಿ ಅವರ ವಿರುದ್ಧ ಗಂಭೀರ ಅಪರಾಧ ಎಂಬಂತೆ ಪ್ರಕರಣ ದಾಖಲಿಸುತ್ತಿದ್ದಾರೆ. ಅಲ್ಲದೇ ವಿಚಾರಣೆ ‌ನೆಪದಲ್ಲಿ ಪೊಲೀಸ್ ಠಾಣೆಯಲ್ಲಿ ಎರಡು ಮೂರು ದಿನಗಳ ಕೂರಿಸಿ ಎಫ್ಐಆರ್ ದಾಖಲಿಸದೇ ಕಿರುಕುಳ ನೀಡುತ್ತಿದ್ದಾರೆ.

ತುಮಕೂರು, ಹಾಸನ ಹಾಗೂ ಚಿತ್ತಾಪುರ ಸೇರಿದಂತೆ ಬಿಜೆಪಿಯಲ್ಲಿ ಕೆಲಸ ಮಾಡುವವರನ್ನು ಸುಖಾಸುಮ್ಮನೆ ಠಾಣೆಗೆ ಕರೆದು ಅವರ ವಿರುದ್ಧ ಕೇಸ್ ಗಳನ್ನ ದಾಖಲಿಸಲಾಗುತ್ತಿದೆ. ಅನಗತ್ಯ ಕಿರುಕುಳ, ವಿಚಾರಣೆ ‌ಎಂದೇಳಿ‌ ಕರೆಯಿಸಿಕೊಂಡು ಅವರನ್ನ ಹೆದರಿಸಲಾಗುತ್ತಿದೆ. ತಪ್ಪು ಮಾಡಿದ್ದರೆ ಕಾನೂನಾತ್ಮಕವಾಗಿ ಕೆಲಸ ಮಾಡಲಿ. ಅದರಲ್ಲಿ‌ ನಮ್ಮ ಅಭ್ಯಂತರವಿಲ್ಲ. ಇಲ್ಲಿ ಪೊಲೀಸರ ವಿರುದ್ಧ ದೂರುತ್ತಿಲ್ಲ. ಕಾಂಗ್ರೆಸ್ ನಾಯಕರು ಫೋನ್​ ಮಾಡಿಸಿ ಪೊಲೀಸರ ಮೇಲೆ‌ ಒತ್ತಡ ಹಾಕಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಡಿಜಿ ಅವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದು, ಸಂವಿಧಾನ ಬದ್ದವಾಗಿ ಕಾರ್ಯನಿರ್ವಹಿಸುವಂತೆ ಸುತ್ತೋಲೆ ಹೊರಡಿಸುವ ಬಗ್ಗೆ ಭರವಸೆ ನೀಡಿರುವುದಾಗಿ ತಿಳಿಸಿದರು. ಹಾಗೆ ನಮ್ಮ ಕಾರ್ಯಕರ್ತರಿಗೂ ಹೇಳ ಬಯಸುವುದು ಇಷ್ಟೇ ನಮ್ಮೆಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸರ್ಕಾರ ಯಾವುದೇ ತಪ್ಪುಗಳನ್ನು ಮಾಡಿದಲ್ಲಿ ಖಂಡಿಸಬೇಕು. ನಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಪಯೋಗಿಸಬೇಕು. ಈ ಬಗ್ಗೆ ಈಗಾಗಲೇ ಕಾರ್ಯಕರ್ತರಿಗೆ ತಿಳಿಸಿಲಾಗಿದೆ ಎಂದು ಬಿಜೆಪಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್​ ರವಿಕುಮಾರ್​ ಹೇಳಿದರು.

ಇದನ್ನೂ ಓದಿ: ರೈತ ದುಡ್ಡಿಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಎನ್ನುವುದು ಅಮಾನವೀಯ: ಬಸವರಾಜ ಬೊಮ್ಮಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.