ಬೆಂಗಳೂರು: ರಾಜ್ಯ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ಆಯೋಜನೆಯ ಸಂಬಂಧ ಬಿಜೆಪಿ ಸಾಕಷ್ಟು ಗೊಂದಲಕ್ಕೆ ಸಿಲುಕಿದೆ. ಪದೇ ಪದೇ ದಿನಾಂಕದಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಭಾನುವಾರಕ್ಕೆ ನಿಗದಿ ಮಾಡಿದ್ದ ದಿನಾಂಕವನ್ನು ಇದೀಗ ಮತ್ತೆ ಶನಿವಾರಕ್ಕೆ ಮರುನಿಗದಿಗೊಳಿಸಿ ಬದಲಾಯಿಸಲಾಗಿದೆ.
-
'ಜನಸ್ಪಂದನ' - ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ' ಸಮಾವೇಶವು 10 ಸೆಪ್ಟೆಂಬರ್ 2022 ರಂದು ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.#ಜನಸ್ಪಂದನ #JanaSpandana pic.twitter.com/mQUmVVhtCx
— BJP Karnataka (@BJP4Karnataka) September 8, 2022 " class="align-text-top noRightClick twitterSection" data="
">'ಜನಸ್ಪಂದನ' - ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ' ಸಮಾವೇಶವು 10 ಸೆಪ್ಟೆಂಬರ್ 2022 ರಂದು ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.#ಜನಸ್ಪಂದನ #JanaSpandana pic.twitter.com/mQUmVVhtCx
— BJP Karnataka (@BJP4Karnataka) September 8, 2022'ಜನಸ್ಪಂದನ' - ರಾಜ್ಯ ಸರ್ಕಾರದ ಮೂರು ವರ್ಷಗಳ ಸಾಧನೆಯ ಅನಾವರಣ' ಸಮಾವೇಶವು 10 ಸೆಪ್ಟೆಂಬರ್ 2022 ರಂದು ಬಿಜೆಪಿ ದೊಡ್ಡಬಳ್ಳಾಪುರದಲ್ಲಿ ನಡೆಯಲಿದೆ.#ಜನಸ್ಪಂದನ #JanaSpandana pic.twitter.com/mQUmVVhtCx
— BJP Karnataka (@BJP4Karnataka) September 8, 2022
ಸಚಿವ ಉಮೇಶ್ ಕತ್ತಿ ಅಕಾಲಿಕ ನಿಧನದ ಕಾರಣ ದೊಡ್ಡಬಳ್ಳಾಪುರದಲ್ಲಿ ನಡೆಸಲು ಉದ್ದೇಶಿಸಿದ್ದ ‘ಜನೋತ್ಸವ’ವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಳೆದ ರಾತ್ರಿಯಷ್ಟೇ ಪ್ರಕಟಿಸಿದ್ದರು. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಗಿತ್ತು. ಇದಾದ ನಂತರ, ಸರಿರಾತ್ರಿ ಮತ್ತೆ ನಿರ್ಧಾರ ಬದಲಿಸಿರುವ ರಾಜ್ಯ ಬಿಜೆಪಿ ನಾಯಕರು ಸಮಾವೇಶವನ್ನು ಭಾನುವಾರದ ಬದಲು ಶನಿವಾರವೇ ನಡೆಸುವ ತೀರ್ಮಾನ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಸತತ ಮೂರನೇ ಬಾರಿ ಸರ್ಕಾರದ ಜನೋತ್ಸವ ಮುಂದೂಡಿಕೆ: ಮುಂದಿನ ದಿನಾಂಕ ನಿಗದಿ