ETV Bharat / state

ಭಾಷಾ ಸಾಮರಸ್ಯ ಕದಡುತ್ತಿರುವ ಬಿಜೆಪಿ ಸರ್ಕಾರ: ಆಮ್ ಆದ್ಮಿ ಪಕ್ಷ ಖಂಡನೆ - Sharad Khadri, the party's chief spokesman

ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರುವುದು ತರವಲ್ಲ. ಪದೇ ಪದೇ ನಮ್ಮ ಒಕ್ಕೂಟ ವ್ಯವಸ್ಥೆಗೆ ಮತ್ತು ಭಾಷಾ ಸಮಾನತೆಗೆ ಕೇಂದ್ರ ಸರ್ಕಾರ ಧಕ್ಕೆ ಉಂಟುಮಾಡುತ್ತಲೇ ಇದೆ. ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿರುವ ಶಿವಮೊಗ್ಗ ಜಿಲ್ಲೆಯಲ್ಲೇ ಕನ್ನಡ ಭಾಷೆ ಬಳಸದೆ ಇರುವುದು ಅಪರಾಧ. ಕನ್ನಡದ ನೆಲದಲ್ಲಿ ಹಿಂದಿ ಹೇರಿಕೆ ಮಾಡಿ ಕನ್ನಡಕ್ಕೆ ಅವಮಾನ ಎಸಗಿರುವ ಭಾರತೀಯ ಜನತಾ ಪಕ್ಷದ ಈ ಸರ್ವಾಧಿಕಾರಿ ನಡೆಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳುವ ಮೂಲಕ ಬಿಜೆಪಿ ನಡೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.

Aam Aadmi Party
ಆಮ್ ಆದ್ಮಿ ಪಕ್ಷ ಖಂಡನೆ
author img

By

Published : Jan 18, 2021, 3:30 PM IST

Updated : Jan 18, 2021, 4:00 PM IST

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶಂಕುಸ್ಥಾಪಿಸಿದ ಭದ್ರಾವತಿಯ ಆರ್‌ಎಎಫ್‌ ಘಟಕದ ಅಡಿಗಲ್ಲಿನಲ್ಲಿ ಹಿಂದಿ, ಆಂಗ್ಲ ಭಾಷೆ ಮಾತ್ರ ಬಳಸಿ, ಕನ್ನಡವನ್ನು ನಿರ್ಲಕ್ಷಿಸಿ ಅವಮಾನ ಮಾಡಲಾಗಿದೆ. ಕನ್ನಡದ ಅಡಿಗಲ್ಲು ಹಾಕದೆ ಇರುವುದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಮುಂದಿನ 15 ದಿನಗಳ ಒಳಗೆ ಸರ್ಕಾರವೇ ಮುಂದೆ ನಿಂತು ಕನ್ನಡದ ಅಡಿಗಲ್ಲು ಸ್ಥಾಪಿಸದಿದ್ದರೆ ಆಮ್ ಆದ್ಮಿ ಪಕ್ಷ ಮುಂದೆ ನಿಂತು ಫಲಕ ಸ್ಥಾಪಿಸುತ್ತದೆ ಎಂದು ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಎಚ್ಚರಿಕೆ ನೀಡಿದ್ದಾರೆ.

ಆಮ್ ಆದ್ಮಿ ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ಅವಮಾನ ಮಾಡಿರುವುದು ತರವಲ್ಲ. ಪದೇ ಪದೇ ನಮ್ಮ ಒಕ್ಕೂಟ ವ್ಯವಸ್ಥೆಗೆ ಮತ್ತು ಭಾಷಾ ಸಮಾನತೆಗೆ ಕೇಂದ್ರ ಸರ್ಕಾರ ಧಕ್ಕೆ ಉಂಟುಮಾಡುತ್ತಲೇ ಇದೆ ಎಂದರು.

ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಹುಟ್ಟಿರುವ ಶಿವಮೊಗ್ಗ ಜಿಲ್ಲೆಯಲ್ಲೇ ಕನ್ನಡ ಭಾಷೆ ಬಳಸದಿರುವುದು ಅಪರಾಧ. ಕನ್ನಡದ ನೆಲದಲ್ಲಿ ಹಿಂದಿ ಹೇರಿಕೆ ಮಾಡಿ ಕನ್ನಡಕ್ಕೆ ಅವಮಾನ ಎಸಗಿರುವ ಭಾರತೀಯ ಜನತಾ ಪಕ್ಷದ ಈ ಸರ್ವಾಧಿಕಾರಿ ನಡೆಯನ್ನು ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ. ಗೃಹ ಸಚಿವ ಅಮಿತ್ ಶಾ ಅವರು ಎಲ್ಲೇ ಹೋದರು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಇವರೇನು ಎಲ್ಲಾ ಕಾನೂನುಗಳಿಗೆ ಅತೀತರೇ ಎಂದು ಪ್ರಶ್ನಿಸಿದರು.

ಓದಿ:ಉದ್ಧವ್​ ಠಾಕ್ರೆ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ: ಹೆಚ್​ಡಿಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು "ಕರ್ನಾಟಕ ಆಕ್ರಮಿತ ಪ್ರದೇಶ" ಎಂದು ತಲೆಕೆಟ್ಟ ಹೇಳಿಕೆ ನೀಡಿ, ಶಾಂತಿಯಿಂದ ಇರುವ ಕನ್ನಡಿಗರು ಹಾಗು ಮರಾಠಿಗರ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಚಾನಕ್ ಆಗಿ ಮುಖ್ಯಮಂತ್ರಿ ಹುದ್ದೆ ಗಿಟ್ಟಿಸಿಕೊಂಡಿರುವ ಉದ್ಧವ್ ಠಾಕ್ರೆ ಅವರೆ ದೆಹಲಿ ಮಾದರಿಯಲ್ಲಿ ನಿಮ್ಮ ಮಹಾರಾಷ್ಟ್ರ ಅಭಿವೃದ್ಧಿ ಮಾಡಿ, ಕರ್ನಾಟಕಕ್ಕಿಂತ ಹಿಂದುಳಿದಿರುವ ನೀವು ನಿಮ್ಮ ರಾಜ್ಯದ ಅಭಿವೃದ್ಧಿ ಕಡೆ ಮೊದಲು ಗಮನಕೊಡಿ ಎಂದು ಕಿಡಿಕಾರಿದರು.

Last Updated : Jan 18, 2021, 4:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.