ETV Bharat / state

ಮಾಧುಸ್ವಾಮಿ ಸುತ್ತ ಕನಕ ವೃತ್ತ ನಾಮಕರಣ ವಿವಾದ: ಕೆ.ಆರ್​.ಪೇಟೆ ಉಸ್ತುವಾರಿ ಅಶ್ವತ್ಥ್ ನಾರಾಯಣ್ ಹೆಗಲಿಗೆ

ಕನಕ ಗುರುಪೀಠದ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ ಆರೋಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಸಿಲುಕಿದ್ದು, ಕೆ.ಆರ್.ಪೇಟೆ ಚುನಾವಣಾ ಉಸ್ತುವಾರಿಯನ್ನ ಮಾಧುಸ್ವಾಮಿ ಬದಲು ಡಿಸಿಎಂ ಅಶ್ವತ್ಥ್ ನಾರಾಯಣ ಅವರಿಗೆ ವಹಿಸಲಾಗಿದೆ.

ಕೆ.ಆರ್​.ಪೇಟೆ ಉಸ್ತುವಾರಿ
author img

By

Published : Nov 21, 2019, 1:59 PM IST

ಬೆಂಗಳೂರು: ಕನಕ ವೃತ್ತ ನಾಮಕರಣ ವಿವಾದಕ್ಕೆ ಸಿಲುಕಿದ ಪರಿಣಾಮ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಉಸ್ತುವಾರಿ ಜವಾಬ್ದಾರಿಯನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಬದಲು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರಿಗೆ ವಹಿಸಲಾಗಿದೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾಧುಸ್ವಾಮಿ ವಿಷಯ ಪ್ರಸ್ತಾಪವಾಗಿದೆ. ಕೆ.ಆರ್. ಪೇಟೆಯ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ವಿಷಯ ಸಂಬಂಧ ಕನಕ ಗುರುಪೀಠದ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ ಆರೋಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಸಿಲುಕಿದ್ದು, ವಿವಾದದ ನಂತರ ಕ್ಷಮೆ ಕೇಳಿಲ್ಲ.

ಸ್ವತಃ ಸಿಎಂ ಯಡಿಯೂರಪ್ಪ ಮಾಧುಸ್ವಾಮಿ ಅವರ ಪರ ಕ್ಷಮೆ ಕೇಳಬೇಕಾಯಿತು. ಇದರಿಂದಾಗಿ ಕ್ಷೇತ್ರದಲ್ಲಿ ಮಾಧುಸ್ವಾಮಿ ಅವರ ಉಸ್ತುವಾರಿಯಲ್ಲಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ ಹೆಚ್ಚಿದೆ. ಕುರುಬ ಸಮುದಾಯ ಮಾಧುಸ್ವಾಮಿ ವಿರುದ್ಧ ನಿಂತಿದ್ದು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಿಕೊಂಡಂತಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗ್ತಿದೆ.

ಸಾಕಷ್ಟು ಚರ್ಚೆ ಬಳಿಕ ಕ್ಷೇತ್ರದ ಉಸ್ತುವಾರಿ ಬದಲಿಸಲು ನಿರ್ಧರಿಸಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಅವರನ್ನು ಹೊಸಕೋಟೆ ಬದಲು ಕೆ.ಆರ್.ಪೇಟೆ ಉಸ್ತುವಾರಿಯನ್ನಾಗಿ ಬದಲಾವಣೆ ಮಾಡಲಾಗಿದೆ.

ಸದ್ಯ ಕೆ.ಆರ್. ಪೇಟೆ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿ ತಂಡದಲ್ಲಿದ್ದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ, ಹಾಸನ ಶಾಸಕ ಪ್ರೀತಂಗೌಡ ಡಿಸಿಎಂ ಅಶ್ವತ್ಥ್ ನಾರಾಯಣ ತಂಡದಲ್ಲಿ ಕೂಡ ಮುಂದುವರೆದಿದ್ದು, ಮಾಧುಸ್ವಾಮಿ ಅವರನ್ನು ಕೈಬಿಡಲಾಗಿದೆ.

ಈ ವಿಷಯವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಅನಗತ್ಯವಾಗಿ ಕನಕ ವಿವಾದಕ್ಕೆ ಸಿಲುಕಿ ಮೊದಲ‌ ಹಂತವಾಗಿ ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಮಾಧುಸ್ವಾಮಿ ಕಳೆದುಕೊಳ್ಳುವಂತಾgಇದೆ.

Intro:

ಬೆಂಗಳೂರು: ಕನಕ ವೃತ್ತ ನಾಮಕರಣ ವಿವಾದಕ್ಕೆ ಸಿಲುಕಿದ ಪರಿಣಾಮ ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಉಸ್ತುವಾರಿ ಸ್ಥಾನವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಕಳೆದುಕೊಂಡಿದ್ದು, ಉಪ ಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಾಧುಸ್ವಾಮಿ ವಿಷಯ ಪ್ರಸ್ತಾಪವಾಗಿದೆ.ಕೆ.ಆರ್ ಪೇಟೆಯ ಹುಳಿಯಾರು ವೃತ್ತಕ್ಕೆ ಕನಕ ವೃತ್ತ ಎಂದು ನಾಮಕರಣ ಮಾಡುವ ವಿಷಯ ಸಂಬಂಧ ಕನಕ ಗುರುಪೀಠದ ಶ್ರೀಗಳ ಬಗ್ಗೆ ಲಘುವಾಗಿ ಮಾತನಾಡಿದ ಆರೋಪಕ್ಕೆ ಕಾನೂನು ಸಚಿವ ಮಾಧುಸ್ವಾಮಿ ಸಿಲುಕಿದ್ದು, ವಿವಾದದ ನಂತರ ಕ್ಷಮೆ ಕೇಳಲಿಲ್ಲ, ಸ್ವತಃ ಸಿಎಂ ಮಾಧುಸ್ವಾಮಿ ಅವರ ಪರ ಕ್ಷಮೆ ಕೇಳಬೇಕಾಯಿತು ಇದರಿಂದಾಗಿ ಕ್ಷೇತ್ರದಲ್ಲಿ ಮಾಧುಸ್ವಾಮಿ ಅವರ ಉಸ್ತುವಾರಿಯಲ್ಲಿ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹಿನ್ನಡೆ ಸಾಧ್ಯತೆ ಹೆಚ್ಚಿದೆ, ಕುರುಬ ಸಮುದಾಯ ಮಾಧುಸ್ವಾಮಿ ವಿರುದ್ಧ ನಿಂತಿದ್ದು ಅನಗತ್ಯವಾಗಿ ಸಮಸ್ಯೆ ಸೃಷ್ಟಿಸಿಕೊಂಡಂತಾಗಲಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಸಾಕಷ್ಟು ಚರ್ಚೆ ಬಳಿಕ ಕ್ಷೇತ್ರದ ಉಸ್ತುವಾರಿ ಬದಲಿಸಲು ನಿರ್ಧರಿಸಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ಡಿಸಿಎಂ ಡಾ.ಅಶ್ವತ್ಥನಾರಾಯಣ್ ಅವರನ್ನು ಹೊಸಕೋಟೆ ಬದಲು ಕೆ.ಆರ್.ಪೇಟೆ ಉಸ್ತುವಾರಿಯನ್ನಾಗಿ ಬದಲಾವಣೆ ಮಾಡಲಾಗಿದೆ.

ಸಧ್ಯ ಕೆ.ಆರ್.ಪೇಟೆ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿ ತಂಡದಲ್ಲಿ ಇದ್ದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ,ಹಾಸನ ಶಾಸಕ ಪ್ರೀತಂಗೌಡ ಡಿಸಿಎಂ ಅಶ್ವತ್ಥನಾರಾಯಣ್ ತಂಡದಲ್ಲಿ ಕೂಡ ಮುಂದುವರೆದಿದ್ದು ಮಾಧುಸ್ವಾಮಿ ಅವರನ್ನು ಕೈಬಿಡಲಾಗಿದೆ.

ಈ ವಿಷಯವನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಅನಗತ್ಯವಾಗಿ ಕನಕ ವಿವಾದಕ್ಕೆ ಸಿಲುಕಿ ಮೊದಲ‌ ಹಂತವಾಗಿ ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿಯನ್ನು ಸಚಿವ ಮಾಧುಸ್ವಾಮಿ ಕಳೆದುಕೊಳ್ಳುವಂತಾಯಿತು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.