ಬೆಂಗಳೂರು: ಶಾಸಕ ಭೈರತಿ ಬಸವರಾಜ್ಗೆ ಪೊಲೀಸರು ಭರ್ಜರಿ ಗಿಫ್ಟ್ ನೀಡಿದ್ದಾರೆಂದು ಆರೋಪ ಕೇಳಿಬಂದಿದ್ದು, ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಭೈರತಿ ಬಸವರಾಜ್ ಹುಟ್ಟುಹಬ್ಬ ಹಿನ್ನೆಲೆ ಕೆ.ಆರ್. ಪುರಂ, ರಾಮಮೂರ್ತಿನಗರ, ಪೂರ್ವ ವಿಭಾಗ ಹಾಗೂ ವೈಟ್ ಫೀಲ್ಡ್ ಪೊಲೀಸರು 53 ಕೆಜಿ ಕೇಕ್ ತಯಾರಿಸಿ, ಬೆಳ್ಳಿಗದೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗ್ತಿದೆ.
ಶಾಸಕ ಭೈರತಿ ಬಸವರಾಜುಗೆ ಪೊಲೀಸರು ಜೈಕಾರ ಹಾಕಿ ಸ್ವಾಮಿನಿಷ್ಠೆ ತೋರಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದ್ರೆ ಈ ಬಗ್ಗೆ ನಿಖರ ಮಾಹಿತಿ ತಿಳಿದುಬರಬೇಕಿದೆ.