ETV Bharat / state

ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಕಠಿಣವಾದ ಹಿನ್ನೆಲೆ: ಸತ್ಯಾಸತ್ಯತೆ ತಿಳಿಯಲು ಸಮಿತಿ ರಚನೆ - puc board

ಪಿಯುಸಿ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಕ್ಲಿಷ್ಟಕರವಾಗಿ ನೀಡಲಾಗಿತ್ತು ಎಂದು ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿ ಪಿಯುಸಿ ಬೋರ್ಡ್​ಗೆ ಕರೆ ಮಾಡಿದ್ದರ ಹಿನ್ನೆಲೆಯಲ್ಲಿ ಸಮಿತಿ ರಚನೆ ಮಾಡಿ ಸತ್ಯಾಸತ್ಯತೆಯನ್ನು ತಿಳಿಯಲಾಗುವುದು ಎಂದು ನಿರ್ದೇಶಕ ಜಾಫರ್ ತಿಳಿಸಿದರು.

ಪಿಯುಸಿ ಬೋರ್ಡ್
author img

By

Published : Mar 16, 2019, 11:38 AM IST

ಬೆಂಗಳೂರು : ಪಿಯುಸಿ ಜೀವಶಾಸ್ತ್ರ ಪ್ರಶ್ನೆ ಪತ್ರಿಕೆ ಕ್ಲಿಷ್ಟಕರವಾಗಿ ನೀಡಲಾಗಿತ್ತು ಎಂದು ವಿದ್ಯಾರ್ಥಿಗಳು ಸಹಾಯವಾಣಿ ಮೂಲಕ ಪಿಯು ಬೋರ್ಡ್​ಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ‌ಸತ್ಯಾಸತ್ಯತೆತಿಳಿಯಲು ಸಮಿತಿ ರಚನೆ ಮಾಡಿದೆ.

ಗುರುವಾರ ಪಿಯುಸಿ ವಿದ್ಯಾರ್ಥಿಗಳಿಗೆ ಜೀವಶಾಸ್ತ್ರ ವಿಷಯದ ಪರೀಕ್ಷೆ ನಡೆದಿತ್ತು. ಪ್ರಶ್ನೆ ಪತ್ರಿಕೆ ಕಠಿಣವಾಗಿತ್ತು ಎಂದು ವಿದ್ಯಾರ್ಥಿಗಳು ಸಹಾಯವಾಣಿ ಮೂಲಕ ಪಿಯುಸಿ ಬೋರ್ಡ್​ಗೆ ದೂರು ನೀಡಿದ್ದರು. ಈ ಸಂಬಂಧ ಪಿಯು ಪರೀಕ್ಷಾ ಬೋರ್ಡ್​ ಪ್ರಶ್ನೆ ಪತ್ರಿಕೆಯ ಸತ್ಯಾಸತ್ಯತೆಯನ್ನು ತಿಳಿಯಲು 3 ಸದಸ್ಯರ ಸಮಿತಿ ರಚನೆ ಮಾಡಿ ವರದಿ ನೀಡುವಂತೆ ತಜ್ಞರಿಗೆ ಸೂಚನೆ ನೀಡಿದೆ.

ಪ್ರಶ್ನೆಗಳು ಪಠ್ಯದ ಒಳಗೆ ನೀಡಲಾಗಿದೆಯಾ ಅಥವಾ ಪಠ್ಯ ಬಿಟ್ಟು ನೀಡಲಾಗಿದೆಯಾ ಪರಿಶೀಲನೆ ಮಾಡಲಾಗುತ್ತೆ. ಸಮಿತಿಯ ವರದಿ ಬಂದ ಬಳಿಕ ಗ್ರೇಸ್ ಮಾರ್ಕ್ಸ್ ಬಗ್ಗೆ ನಿರ್ಧಾರ ಮಾಡಲಾಗುವುದು. ಪಠ್ಯದ ಒಳಗೆ ಪ್ರಶ್ನೆಗಳು ಕೇಳಿದ್ದರೆ ಗ್ರೇಸ್ ಮಾರ್ಕ್ಸ್ ಕೊಡುವ ಅವಶ್ಯಕತೆ ಇರೋದಿಲ್ಲ. ಈ ಬಗ್ಗೆ ಶೀಘ್ರವೇ ನಿರ್ಧಾರ ಮಾಡಲಾಗುವುದು ಎಂದು ಪಿಯುಸಿ ಬೋರ್ಡ್ ನಿರ್ದೇಶಕ ಜಾಫರ್ ಮಾಹಿತಿ ನೀಡಿದ್ದಾರೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.