ETV Bharat / state

ಗುಣಮಟ್ಟದ ಹೆಲ್ಮೆಟ್ ಖರೀದಿಗೆ ಬೈಕ್​​​​ ಸವಾರರ ಹಿಂದೇಟು.. ಎಗ್ಗಿಲ್ಲದೆ ಸಾಗಿದೆ ನಕಲಿ ಹೆಲ್ಮೆಟ್ ವಹಿವಾಟು​.. - Bangalore Traffic Police

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ ಜನರು ಪೊಲೀಸರ ದಂಡ ತಪ್ಪಿಸಿಕೊಳ್ಳುವ ನೆಪದಲ್ಲಿ ಮಾತ್ರ ಹೆಲ್ಮೆಟ್ ಬಳಕೆಗೆ ಮುಂದಾಗುತ್ತಿದ್ದಾರೆ. ಗುಣಮಟ್ಟದ ಹೆಲ್ಮೆಟ್ ಬಳಕೆ ಮಾಡದೆ ನಕಲಿ ಹೆಲ್ಮೆಟ್​​​ಗಳ ಮೊರೆ ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ..

Bike riders hesitate to buy high-quality helmets
ಗುಣಮಟ್ಟದ ಹೆಲ್ಮೆಟ್ ಖರೀದಿಗೆ ಬೈಕ್​​​​ ಸವಾರರ ಹಿಂದೇಟು: ಎಗ್ಗಿಲ್ಲದೆ ಸಾಗಿದೆ ನಕಲಿ ಹೆಲ್ಮೆಟ್​ಗಳ ವಹಿವಾಟು​
author img

By

Published : Jul 15, 2020, 6:38 PM IST

ಬೆಂಗಳೂರು : ಲಕ್ಷಾಂತರ ರೂಪಾಯಿ ನೀಡಿ ಬೈಕ್ ಖರೀದಿ ಮಾಡುವ ಸವಾರರು ಗುಣಮಟ್ಟದ ಹೆಲ್ಮೆಟ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಕಳಪೆ ಹಾಗೂ ನಕಲಿ ಹೆಲ್ಮೆಟ್​ಗೆ ಜೋತುಬಿದ್ದು ಮುಂದಾಗುವ ಅಪಘಾತಕ್ಕೆ ತಾವೇ ಆಹ್ವಾನ ನೀಡುತ್ತಿದ್ದಾರೆ.

ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. 2012ರಲ್ಲಿ 41.50 ಲಕ್ಷ ವಾಹನಗಳಿದ್ರೆ, ಈ ಪೈಕಿ ₹50 ಲಕ್ಷ ದ್ವಿಚಕ್ರವಾಹನಗಳಿದ್ದವು. ವಾಹನಗಳ ಸಂಖ್ಯೆ ಸದ್ಯ ₹80 ಲಕ್ಷಕ್ಕೆ ಏರಿದ್ದು ಬಹುತೇಕ ಬೈಕ್​​ಗಳದ್ದೇ ಸಿಂಹಪಾಲಿದೆ. ಸಾವಿರಾರು ರೂ. ನೀಡಿ ದ್ವಿಚಕ್ರ ವಾಹನ ಖರೀದಿಸುವ ಸವಾರರು ಉತ್ತಮ ದರ್ಜೆ ಹೆಲ್ಮೆಟ್ ಖರೀದಿಗೆ ಹಿಂದು-ಮುಂದು ನೋಡುತ್ತಿದ್ದಾರೆ.

ಈ ನಡುವೆ ನಕಲಿ ಹೆಲ್ಮೆಟ್​ ಹಾವಳಿ ಅಧಿಕವಾಗುತ್ತಿದ್ದು, ಜನರು ಸಹ ನಕಲಿ ಹೆಲ್ಮೆಟ್ ಬಳಕೆಗೆ ಮುಂದಾಗುವುದು ಹೆಚ್ಚುತ್ತಲೇ ಇದೆ. ರಸ್ತೆ ಅಪಘಾತ ನಿಯಂತ್ರಣ ಹಿನ್ನೆಲೆ ನಗರ ಪೊಲೀಸ್ ಕಳೆದ 3 ವರ್ಷಗಳ ಹಿಂದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಜಾರಿಗೊಳಿಸಿತ್ತು. ಇದರಂತೆ ಹೆಲ್ಮೆಟ್ ಧರಿಸದ ಸವಾರರ ವಿರುದ್ಧ ಈ ವರ್ಷದ ಅಂತ್ಯಕ್ಕೆ 7.73 ಲಕ್ಷ ಕೇಸ್ ದಾಖಲಾಗಿದೆ. 2018 ಹಾಗೂ 2019ರಲ್ಲಿ ಕ್ರಮವಾಗಿ 16,28,260 ಹಾಗೂ 20,35,519 ಸವಾರರ ವಿರುದ್ಧ ಕೇಸ್ ದಾಖಲಾಗಿವೆ.

ಅದೇ ರೀತಿ ಹಿಂಬದಿ ಸವಾರರ ವಿರುದ್ಧ ಮೇ ತಿಂಗಳವರೆಗೂ 4,58,410 ಕೇಸ್ ದಾಖಲಾಗಿವೆ. ದೆಹಲಿ, ಫರೀದಾಬಾದ್‌ ಸೇರಿದಂತೆ ದೇಶದಲ್ಲಿರುವ ವಿವಿಧ ಹೆಲ್ಮೆಟ್ ಕಂಪನಿಗಳಿಂದ ನಗರಕ್ಕೆ ಹೆಲ್ಮೆಟ್​​​ಗಳು ಬರುತ್ತವೆ. ನಿಯಮಗಳ ಪ್ರಕಾರ ಹೆಲ್ಮೆಟ್​​​ಗೆ ಐಎಸ್ಐ ಅಥವಾ ಬಿಎಸ್ಐ ಮಾರ್ಕ್ ಇರಬೇಕು. ಗುಣಮಟ್ಟದ ಹೆಲ್ಮೆಟ್ ತೂಕ 900 ಗ್ರಾಂ. ಇರಬೇಕಿದೆ. ಇಂತಹ ಹೆಲ್ಮೆಟ್​ ಧರಿಸುವುದರಿಂದ ಅಪಘಾತ ಸಂದರ್ಭಗಳಲ್ಲಿ ಜೀವಹಾನಿ ಪ್ರಮಾಣ ತಗ್ಗಿಸಬಹುದಾಗಿದೆ. ಬಹುತೇಕ ಸವಾರರು ಕಳಪೆ ಮಟ್ಟದ ಹಾಗೂ ಕಡಿಮೆ ಬೆಲೆಯ ಹೆಲ್ಮೆಟ್ ಖರೀದಿ ಮಾಡುತ್ತಿದ್ದಾರೆ.

ಹಣ ಉಳಿಸಲು ಹೋಗಿ ಜೀವವನ್ನೇ ಕಳೆದುಕೊಳ್ಳುವ ಪ್ರಮೆಯಗಳು ನಡೆಯುತ್ತಿವೆ. 2018ರ ಸಾಲಿನಲ್ಲಿ ದೇಶದಲ್ಲಿ ಹೆಲ್ಮೆಟ್ ಧರಿಸದೆ 43,800 ಬೈಕ್ ಸವಾರರು ರಸ್ತೆ ಅಪಘಾತದಲ್ಲಿ ಸಾವನನ್ನಪ್ಪಿದ್ದರು. ಈ ಪೈಕಿ 15,360 ಮಂದಿ ಹಿಂಬದಿ ಸವಾರರು ಮೃತಪಟ್ಟಿದ್ದರು. ರಸ್ತೆ ಅಪಘಾತ ಪ್ರಮಾಣ ತಗ್ಗಿಸಲು 2017ರಲ್ಲಿ ನಗರ ಪೊಲೀಸರು ನಕಲಿ ಹೆಲ್ಮೆಟ್ ವಿರುದ್ಧ ನಿಷೇಧಕ್ಕೆ‌ ಮುಂದಾಗಿದ್ದರು. ಕಡ್ಡಾಯವಾಗಿ ಐಎಸ್ಐ ಹಾಗೂ ಬಿಎಸ್ಐ ಗುರುತಿರುವ ಹೆಲ್ಮೆಟ್ ಧರಿಸಬೇಕೆಂಬ‌ ನಿಯಮ‌ ಜಾರಿ ತಂದಿದ್ದರು.

ಆದರೆ, ಕಾನೂನು ಸಮಸ್ಯೆಯಿಂದಾಗಿ ಜಾರಿಯಾಗಿದ್ದ ನಿಯಮ ಅನುಷ್ಠಾನಕ್ಕೆ ತರಲು ಸಾಧ್ಯವಾಗಿರಲಿಲ್ಲ. ಸುರಕ್ಷತೆಯ ದೃಷ್ಟಿಯಿಂದ ಗುಣಮಟ್ಟದ ಹೆಲ್ಮೆಟ್ ಧರಿಸುವ ಕುರಿತಂತೆ ನಿರಂತರವಾಗಿ ಸವಾರರಿಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.