ಬೆಂಗಳೂರು: ಮೈಸೂರು ರಸ್ತೆಯ ಮೇಲ್ಸೇತುವೆ ಕೆಳಗೆ ಕೆಸರಿನಿಂದ ಏಕಾಏಕಿ ಏಳೆಂಟು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ.
ಮೈಸೂರು ರಸ್ತೆ ಮೇಲ್ಸೇತುವೆ ರಸ್ತೆ ಬಳಿ ಎಂದಿನಂತೆ ಬೈಕ್ ಸವಾರರು ಹೋಗಿದ್ದಾರೆ. ಕೆಸರು ಇರುವುದನ್ನು ಅರಿಯದ ಬೈಕ್ ಸವಾರರು ನೋಡು ನೋಡುತ್ತಿದ್ದಂತೆ ಜಾರಿ ಬಿದ್ದಿದ್ದಾರೆ. ಇದೇ ರೀತಿ ಏಳೆಂಟು ಬೈಕ್ ಸವಾರರು ಬಿದ್ದಿದ್ದಾರೆ. ಈ ಸಂಬಂಧ ಸಂಚಾರಿ ಪೊಲೀಸರು ಸ್ಥಳದಲ್ಲಿ ಬ್ಯಾರಿಗೇಟ್ ಹಾಕಿ ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಈ ಬಗ್ಗೆ ಸಿಟಿ ಮಾರ್ಕೆಟ್ ಇನ್ಸ್ಪೆಕ್ಟರ್ ಮಾತನಾಡಿ, ಸಮೀಪದಲ್ಲೇ ಮಾರುಕಟ್ಟೆಯಲ್ಲಿ ಕೊತ್ತಂಬರಿ ಮಾರಾಟದ ಜಾಗವಿದ್ದು, ಇಲ್ಲಿಗೆ ಬರುವ ವಾಹನಗಳಿಂದಾಗುವ ಗಲೀಜು ಹಾಗೂ ಮಳೆ ಬಿದ್ದಿದ್ದರಿಂದ ರಸ್ತೆಯು ಕೆಸರಿನಂತಾಗಿದೆ ಎಂದು ತಿಳಿಸಿದ್ದಾರೆ.