ETV Bharat / state

ಬೆಂಗಳೂರಿನಲ್ಲಿ ಭೀಕರ ಅಪಘಾತ..ಪತ್ನಿ, ಮಗು ಮೇಲೆ ಹರಿದ ಲಾರಿ.. ಸಹಾಯಕ್ಕೆ ಅಂಗಲಾಚಿದರೂ ಯಾರೂ ಬರಲೇ ಇಲ್ಲ! - ಬೆಂಗಳೂರಿನಲ್ಲಿ ಅಪಘಾತ

ವೇಗವಾಗಿ ಬಂದ ಟಿಪ್ಪರ್ ಹಿಂಬದಿಯಿಂದ ಬೈಕ್​ಗೆ ಡಿಕಿ ಹೊಡೆದಿದೆ. ಪರಿಣಾಮ ಕೆಳಬಿದ್ದ ತಾಯಿ, ಮಗುವಿನ ಮೇಲೆ ಟಿಪ್ಪರ್ ಹರಿದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮ್ಮನಿಗೆ ಹೆಣ್ಣು ಗೊತ್ತು ಮಾಡಲು ಹೊರಟಿದ್ದ ವೇಳೆ ಅಪಘಾತ

author img

By

Published : Oct 25, 2021, 3:23 PM IST

Updated : Oct 25, 2021, 5:26 PM IST

ಬೆಂಗಳೂರು: ರಾಯಲ್ ಎನ್‌ಫೀಲ್ಡ್ ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗು ಸಾವನ್ನಪ್ಪಿದ ಘಟನೆ ಮಾರತ್ ಹಳ್ಳಿ ಹೊರವರ್ತುಲ ರಸ್ತೆ ಬಳಿ ನಡೆದಿದೆ.

ಕೆ.ಆರ್‌‌.ಪುರ‌ ನಿವಾಸಿಯಾಗಿರುವ ಶಿವಕುಮಾರ್ ತಮ್ಮನಿಗಾಗಿ ನೋಡಿದ್ದ ಹುಡುಗಿಯನ್ನು ಗೊತ್ತುಪಡಿಸಲು ಕುಟುಂಬದ ಜೊತೆ ಬೈಕ್​ನಲ್ಲಿ ಇಂದು ಬೆಳಗ್ಗೆ ಧರ್ಮಪುರಿಗೆ ಹೊರಟಿದ್ದರು. ಈ ವೇಳೆ ಮಾರತ್​ ಹಳ್ಳಿ ಹೊರವರ್ತುಲ ರಸ್ತೆ ಬಳಿ ಹಿಂಬದಿಯಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ಶಿವಕುಮಾರ್ ಎಡಭಾಗದಲ್ಲಿ ಬಿದ್ದಿದ್ದಾರೆ. ಹಿಂಬದಿ ಸವಾರರಾಗಿದ್ದ ಪತ್ನಿ ಶ್ರೀದೇವಿ ಹಾಗೂ ಒಂದು ವರ್ಷದ ಗಂಡು ಮಗು ದೀಕ್ಷಿತ್ ರಸ್ತೆ ಬಲಭಾಗದಲ್ಲಿ ಬಿದ್ದಿದ್ದಾರೆ. ಈ ವೇಳೆ ಅವರ ತಲೆ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಭೀಕರ ಅಪಘಾತ

ಇದರಿಂದ ವಿಚಲಿತನಾದ ಟಿಪ್ಪರ್​ ಚಾಲಕ ಕ್ಷರ್ಣಾರ್ಧದಲ್ಲೆ ಎಸ್ಕೇಪ್ ಆಗಿದ್ದಾನೆ. ಶಿವಕುಮಾರ್​ ತೀವ್ರವಾಗಿ ಗಾಯಗೊಂಡಿದ್ದು, ಘಟನೆಯಲ್ಲಿ ಅವರ ಮೊಬೈಲ್​ ಸಹ ಕಳ್ಳತನವಾಗಿದೆ. ಅಪಘಾತದ ಭೀಕರತೆಯನ್ನು ನೋಡಿದ ಶಿವಕುಮಾರ್​ ಆಘಾತಕ್ಕೊಳಗಾಗಿ ಏನು ಮಾಡಬೇಕೆಂದು ತೋಚದೆ ಅಲ್ಲೇ ರೋದಿಸುತ್ತಿದ್ದರು. ಅಲ್ಲಿದ್ದ ಸ್ಥಳೀಯರು ಕೂಡ ಸಹಾಯಕ್ಕೆ ಹೋಗುವ ಮನಸ್ಸು ಮಾಡಲಿಲ್ಲ.

ಶಿವಕುಮಾರ್ ಮೂಲತಃ ತಮಿಳುನಾಡಿನ ಧರ್ಮಪುರಿ ಮೂಲದವರಾಗಿದ್ದಾರೆ‌.‌ ಟಿಪ್ಪರ್ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದರಿಂದ ನಿಯಂತ್ರಣ ಕಳೆದುಕೊಂಡು ಬೈಕ್​ಗೆ ಗುದ್ದಿದ್ದಾನೆ ಎನ್ನಲಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಅಲ್ಲದೇ ಶಿವಕುಮಾರ್​ ಅವರ ಪತ್ನಿ ಮತ್ತು ಮಗುವಿನ ಮೃತದೇಹಗಳನ್ನು ಬೌರಿಂಗ್ ಆಸ್ಪತ್ರೆಗೆ ರವಾನಿಸಿದ್ದಾರೆ.

ಘಟನೆಗ ಕಾರಣರಾದ ಟಿಪ್ಪರ್ ಚಾಲಕ ನಾಪತ್ತೆಯಾಗಿದ್ದು, ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಗರ ಪೂರ್ವ ವಿಭಾಗದ ಡಿಸಿಪಿ ಶಾಂತರಾಜು ತಿಳಿಸಿದ್ದಾರೆ.

Last Updated : Oct 25, 2021, 5:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.