ETV Bharat / state

ಅಧಿಕಾರದಲ್ಲಿದ್ದವರಿಗೆ ಸತ್ಯ ಹೇಳುವುದೇ ದೊಡ್ಡ ಸವಾಲು : ಸಿಎಂ ಬಸವರಾಜ ಬೊಮ್ಮಾಯಿ - ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ದುಡಿಮೆಯಲ್ಲಿ ಆರ್ಥಿಕತೆ ಇದೆಯೇ ಹೊರತು ದುಡ್ಡಿನಲ್ಲಿ ಆರ್ಥಿಕತೆ ಅಲ್ಲ. ಬಸವಣ್ಣ ಹೇಳಿದ್ದು ಅದನ್ನೇ, ಕಾಯಕವೇ ಕೈಲಾಸ ಎಂದರೆ ಪೂಜೆ ಅಲ್ಲ, ದುಡಿಮೆಯಿಂದ ಸ್ವರ್ಗವನ್ನೇ ಸೃಷ್ಟಿಸಬಹುದು. ಗಾಂಧೀಜಿ ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿದ್ದರು. ಬದಲಾವಣೆ ಬಯಸಿದ್ದರು. ಇಂದಿನ ದಿನಗಳಲ್ಲಿ ಸುಳ್ಳು ಹೇಳುವ ಜನರೆ ಹೆಚ್ಚು. ಸುಳ್ಳು ಹೇಳಿ ಕರುಣೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನಾವು ಸತ್ಯವನ್ನು ಅವಲಂಬಿಸಬೇಕಿದೆ ಎಂದು ಅಭಿಪ್ರಾಯಪಟ್ಟರು..

CM Bommai
ಸಿಎಂ ಬೊಮ್ಮಾಯಿ
author img

By

Published : Oct 2, 2021, 5:11 PM IST

ಬೆಂಗಳೂರು : ಇಂದಿನ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವವರು ಸತ್ಯ ಹೇಳುವುದೇ ದೊಡ್ಡ ಸವಾಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಬರೆದಿರುವ ಮೈ ಎಕ್ಸಪೆರಿಮೆಂಟ್ ವಿತ್ ಟ್ರುತ್ ಪುಸ್ತಕವನ್ನು ಓದಿದ್ದೇನೆ. ಗಾಂಧೀಜಿ ಸತ್ಯದ ಕುರಿತು ಸಾಕಷ್ಟು ಹೇಳಿದ್ದಾರೆ.

ಆದರೆ, ಇಂದಿನ ದಿನಗಳಲ್ಲಿ ಸತ್ಯ ಹೇಳುವುದೇ ಕಷ್ಟವಾಗಿದೆ. ಅಧಿಕಾರದಲ್ಲಿರುವವರಿಗೆ ಸತ್ಯ ಹೇಳುವುದು ದೊಡ್ಡ ಸವಾಲಾಗಿದೆ. ಪವರ್ ಪಾಲಿಟಿಕ್ಸ್ ಮಾಡುವ ಜನರಿಗೆ ಸತ್ಯದ ಜೊತೆಗಿನ ಸಂಬಂಧವೂ ಕಡಿಮೆ ಎಂದು ಪ್ರಸ್ತುತ ರಾಜಕಾರಣವನ್ನು ವಿಶ್ಲೇಷಿಸಿದರು.

ಗಾಂಧಿ ಓರ್ವ ವ್ಯಕ್ತಿಯಾಗಿರಲಿಲ್ಲ, ದೇಶದ ನೈತಿಕ ಶಕ್ತಿಯಾಗಿದ್ದರು. ದೇಶದ ಜನಸಂಖ್ಯೆಯನ್ನು ಸಂಪನ್ಮೂಲ ಎಂದೇ ಭಾವಿಸಿದ್ದರು. ಆದರೆ, ದೇಶದ ಜನರಲ್ಲಿ ನಾಗರಿಕ ಜವಾಬ್ದಾರಿಯ ಅರಿವಿನ ಕೊರತೆ ಇದೆ. ಹಿಂದೆ ಜನ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟರು. ಆದರೀಗ ಪ್ರಾಣ ಕೊಡುವುದು ಬೇಕಿಲ್ಲ. ದೇಶದ ಒಳಿತಿಗಾಗಿ ಬದುಕುವುದೇ ನಿಜವಾದ ದೇಶ ಭಕ್ತಿ. ಇತರರಿಗಾಗಿ ಬದುಕುವುದೇ ಜೀವನದ ಆಶಯ ಎಂದು ಗಾಂಧಿ ಚಿಂತನೆಗಳನ್ನು ಸ್ಮರಿಸಿದರು.

ದುಡಿಮೆಯಲ್ಲಿ ಆರ್ಥಿಕತೆ ಇದೆಯೇ ಹೊರತು ದುಡ್ಡಿನಲ್ಲಿ ಆರ್ಥಿಕತೆ ಅಲ್ಲ. ಬಸವಣ್ಣ ಹೇಳಿದ್ದು ಅದನ್ನೇ, ಕಾಯಕವೇ ಕೈಲಾಸ ಎಂದರೆ ಪೂಜೆ ಅಲ್ಲ, ದುಡಿಮೆಯಿಂದ ಸ್ವರ್ಗವನ್ನೇ ಸೃಷ್ಟಿಸಬಹುದು. ಗಾಂಧೀಜಿ ಪರಿವರ್ತನೆಯಲ್ಲಿ ನಂಬಿಕೆ ಇಟ್ಟಿದ್ದರು. ಬದಲಾವಣೆ ಬಯಸಿದ್ದರು. ಇಂದಿನ ದಿನಗಳಲ್ಲಿ ಸುಳ್ಳು ಹೇಳುವ ಜನರೆ ಹೆಚ್ಚು. ಸುಳ್ಳು ಹೇಳಿ ಕರುಣೆ ಗಿಟ್ಟಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ನಾವು ಸತ್ಯವನ್ನು ಅವಲಂಬಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಕಲಾಕೃತಿಗಳ ವೀಕ್ಷಣೆ : ಚಿತ್ರಕಲಾ ಪರಿಷತ್ತಿನಲ್ಲಿ ಗಾಂಧಿ ತತ್ವಗಳನ್ನು ಬಿಂಬಿಸುವ ಕಲಾಕೃತಿಗಳ ಪ್ರದರ್ಶನ ಆಯೋಜಿಸಲಾಗಿತ್ತು. ಈ ಪ್ರದರ್ಶನಕ್ಕೆ ಸಿಎಂ ಬೊಮ್ಮಾಯಿ ಚಾಲನೆ ನೀಡಿ, ಕಲಾಕೃತಿಗಳನ್ನು ವೀಕ್ಷಿಸಿದರು.

ಇದನ್ನೂ ಓದಿ: Triple Murder Case.. ಆರೋಪಿ ಹೆಡೆಮುರಿ ಕಟ್ಟಿದ ರಾಯಚೂರು ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.