ETV Bharat / state

4G ಯಿಂದ 5Gಗೆ ಅಪ್ಡೇಟ್ ಮಾಡ್ತೀವಿ ಎಂದು ನಿಮ್ಮ ಖಾತೆಗೆ ಕನ್ನ ಹಾಕಬಹುದು ಹುಷಾರ್

ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.

Crime Division DCP Dr Sharanappa
ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ
author img

By

Published : Oct 10, 2022, 4:08 PM IST

ಬೆಂಗಳೂರು: ಒಂದು ಕಡೆ ದೇಶದಲ್ಲಿ ಮೊಬೈಲ್ ನೆಟ್​ವರ್ಕ್ 4G ಯಿಂದ 5Gಗೆ ಅಪ್​ಡೇಟ್ ಆಗುತ್ತಿದೆ. ಈಗಾಗಲೇ ಕೆಲವೊಂದು ಆಯ್ದಾ ನಗರದಲ್ಲಿ ಪ್ರಾಯೋಗಿಕವಾಗಿ 5G ನೆಟ್​ವರ್ಕ್ ಕೆಲಸ ಮಾಡುತ್ತಿದೆ. ಈ ಮಧ್ಯೆ ಜನ ಕೂಡ 4Gಯಿಂದ 5Gಗೆ ತಮ್ಮ ನೆಟ್​ವರ್ಕ್ ಅಪ್ಡೇಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೆ ಬಂಡವಾಳ‌ ಮಾಡಿಕೊಂಡಿರುವ ಸೈಬರ್ ಖದೀಮರು ಅಪ್​ಡೇಟ್ ಹೆಸರಲ್ಲಿ ಸುಲಿಗೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಸೈಬರ್ ವಂಚಕರ ತಂಡ 5G ವಂಚನೆಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಸೈಬರ್ ಕ್ರೈಂ ಪೊಲೀಸ್ ಹಾಗೂ ಸಿಸಿಬಿ ಹೊಸ ವಂಚನೆ ತಡೆಯಲು ಜಾಗೃತಿ ಮೂಡಿಸುತ್ತಿದೆ.

ಕಾಲ್​ ಸೆಂಟರ್​ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗುತ್ತಿರುವ ವಂಚಕರ ಗ್ಯಾಂಗ್ ಏರ್​ಟೆಲ್, ಜಿಯೋ ಸೇರಿದಂತೆ ಹಲವು ನೆಟ್​ವರ್ಕ್​ಗಳಿಂದ ನಿಮ್ಮ ಸಿಮ್ ಅಪ್​ಡೇಟ್​ ಮಾಡುತ್ತೇವೆ ಎಂದು ಕರೆ ಮಾಡುತ್ತಾರೆ. ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.

ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ

ಈ ಕಾರಣದಿಂದ ಸಿಸಿಬಿ ಮತ್ತು ಸೆನ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅಪ್​ಡೇಟ್ ಇದ್ದರೂ ಅದನ್ನು ಸಂಬಂಧಪಟ್ಟ ನೆಟ್​ವರ್ಕ್ ಕಚೇರಿಗಳಲ್ಲಿ ಮಾಡಿಸಿ, ಸುಖಾಸುಮ್ಮನೆ ಒಟಿಪಿ ಹೇಳಿ ಪೇಚಿಗೆ ಸಿಲುಕದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ಕರೆ ಬಂದರೆ ಅಥವಾ ವಂಚನೆಯಾದರೆ ತಕ್ಷಣ 122ಗೆ ಕರೆ ಮಾಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಭುವನೇಶ್ವರದಲ್ಲಿ ಸಿಮ್ ಬಾಕ್ಸ್ ದಂಧೆ: ಪತ್ತೆ ಹಚ್ಚಿದ ಸೈಬರ್ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.