ಬೆಂಗಳೂರು: ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿ.ಎಂ.ಆರ್.ಸಿ.ಎಲ್ ಅತ್ಯುತ್ತಮ ನಗರ ಸಾರಿಗೆ ಶ್ರೇಷ್ಠತೆ ಪ್ರಶಸ್ತಿಗೆ ಪಾತ್ರವಾಗಿದೆ. ಕೊಚ್ಚಿಯಲ್ಲಿ ನಡೆದ ಅರ್ಬನ್ ಮೊಬಿಲಿಟಿ ಇಂಡಿಯಾ ಕಾನ್ಫರೆನ್ಸ್ ನಲ್ಲಿ ಅತ್ಯುತ್ತಮ ಪ್ರಯಾಣಿಕ ಸೇವೆ ಮತ್ತು ಗ್ರಾಹಕರಿಗೆ ತೃಪ್ತಿ ನೀಡುತ್ತಿದೆ ಎಂದು ನಗರ ಸಾರಿಗೆ ಶ್ರೇಷ್ಠತೆಯಲ್ಲಿ ಬಿಎಂಆರ್ಸಿಎಲ್ಗೆ ಪ್ರಶಸ್ತಿ ನೀಡಲಾಗಿದೆ.
ಅರ್ಬನ್ ಇನ್ಫ್ರಾಕಮ್ಯುನಿಕೇಶನ್ ಮತ್ತು ಪಿ.ಆರ್ ಕಂಪನಿ ಆಯೋಜಿಸಿದ್ದ ಎರಡನೇ ಆವೃತಿಯ ಕಾರ್ಯಕ್ರಮದಲ್ಲಿ ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಬಿ.ಎಂ.ಆರ್.ಸಿ.ಎಲ್ ಅರ್ಬನ್ ಇನ್ಫ್ರಾ ಪ್ರಶಸ್ತಿ ಪಡೆದುಕೊಂಡಿದ್ದು, ಕೈಗಾರಿಕಾ ವಿಭಾಗದಡಿಯಲ್ಲಿ ಅತ್ಯಂತ ನವೀನ ಅರ್ಬನ್ ಮೊಬಿಲಿಟಿ ಲೀಡರ್ ಪ್ರಶಸ್ತಿಯನ್ನು ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತೆ ವಿ ಮಂಜುಳಾ ಪಡೆದಿದ್ದಾರೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಂಸ್ಥೆೆಯು ರೈಲು ಮತ್ತು ಮೆಟ್ರೋ ಸಿಸ್ಟಮ್ಸ್ ಸ್ವದೇಶಿ ಆವಿಷ್ಕಾರದಲ್ಲಿ ಶ್ರೇಷ್ಠತೆಗಾಗಿ ಪ್ರಶಸ್ತಿ ಪಡೆದರೆ, ಹುಬ್ಬಳ್ಳಿ- ಧಾರವಾಡ ಬಸ್ ರಾಪಿಡ್ ಸಿಸ್ಟಮ್ಸ್ ಲಿಮಿಟೆಡ್ ಟ್ರಾನ್ಸಿಟ್ ಮತ್ತು ಮೊಬಿಲಿಟಿ ವಿಭಾಗದಲ್ಲಿ ಹೆಚ್ಚು ಆದ್ಯತೆಯ ಸಾರಿಗೆ ವ್ಯವಸ್ಥೆೆ ಪ್ರಶಸ್ತಿಯನ್ನು ಹಾಗೂ ನಗರ ಮೂಲಸೌಕರ್ಯ ವಿಭಾಗದ ಅಡಿಯಲ್ಲಿ ಡಲ್ಟ್ ನಗರಾಭಿವೃದ್ಧಿಗಾಗಿ ಅತ್ಯಂತ ಮೆಚ್ಚುಗೆ ಪಡೆದ ನಗರ ಯೋಜನಾ ಸಂಸ್ಥೆೆಯ ಪ್ರಶಸ್ತಿಯನ್ನು ಸಹ ಪಡೆದುಕೊಂಡಿದೆ.
ಓದಿ: ಬೆಳೆಗಳಿಗೆ ಸರಳವಾಗಿ ಔಷಧ ಸಿಂಪಡಿಸುವ ಯಂತ್ರ ಅಭಿವೃದ್ಧಿಪಡಿಸಿದ ಸನ್ರೈಸ್ ಆಗ್ರೋ ಇಂಡಿಯಾ...