ETV Bharat / state

ಹೊಸ ವರ್ಷದ ಸಂಭ್ರಮದಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ! ಬೆಸ್ಕಾಂ ಮನವಿ

ಹೊಸ ವರ್ಷದ ಆಚರಣೆಯ ವೇಳೆ ವಿದ್ಯುತ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದೆ.

bescom
ಬೆಸ್ಕಾಂ
author img

By ETV Bharat Karnataka Team

Published : Dec 31, 2023, 6:55 AM IST

ಬೆಂಗಳೂರು: 2024ರ ನೂತನ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಎಲ್ಲೆಡೆ ಜನರು ಸಜ್ಜಾಗುತ್ತಿದ್ದಾರೆ. ಆಚರಣೆಯ ಸಂದರ್ಭದಲ್ಲಿ ವಿದ್ಯುತ್ ಪರಿಕರಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಬೆಸ್ಕಾಂ ಸಾರ್ವಜನಿಕರಿಗೆ ಮನವಿ ಮಾಡಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಹೆಚ್ಚಾಗಿ ಜನ ಸೇರುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ​, ಕೋರಮಂಗಲ, ವೈಟ್‌ಫೀಲ್ಡ್ ಸೇರಿದಂತೆ ನಗರದ ಹಲವೆಡೆ ಪಬ್, ಕ್ಲಬ್‌ಗಳು, ಹೋಟೆಲ್​ಗಳು, ರೆಸ್ಟೊರೆಂಟ್​ಗಳಲ್ಲಿ ಪಾರ್ಟಿಗಳಿಗೆ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಇಂಥ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಲವು ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗುತ್ತಿದ್ದು, ಸಾರ್ವಜನಿಕರಿಗೆ ವಿದ್ಯುತ್ ಸುರಕ್ಷತೆಯ ನಿಯಮಾವಳಿಗಳನ್ನು ಪಾಲಿಸಲು ವಿನಂತಿಸಿದೆ.

ಇವುಗಳನ್ನು ಮಾಡಲೇಬೇಡಿ: ವಿದ್ಯುತ್ ಕಂಬಗಳ ಮೇಲೆ ಬ್ಯಾನರ್ ಅಥವಾ ಬಂಟಿಂಗ್​ಗಳನ್ನು ಕಟ್ಟಬಾರದು, ಬೆಸ್ಕಾಂನ ಯಾವುದೇ ಮೂಲಸೌಕರ್ಯಗಳಿಗೆ ಹಾನಿ ಮಾಡಬಾರದು, ವಿದ್ಯುತ್‌ ಕಂಬಗಳಿರುವ ಪಾದಚಾರಿ ಮಾರ್ಗಗಳಲ್ಲಿ ವಾಹನಗಳನ್ನು ಚಲಾಯಿಸಬಾರದು, ವಿದ್ಯುತ್‌ ಕಂಬಗಳು ಹಾಗೂ ಟ್ರಾನ್ಸ್‌ ಫಾರ್ಮರ್‌ಗಳಿರುವ ಸ್ಥಳಗಳಲ್ಲಿ ಕಸ-ಕಡ್ಡಿಗಳನ್ನು ಎಸೆಯಬಾರದು, ವಿದ್ಯುತ್‌ ಮೂಲಸೌಕರ್ಯಗಳ ಬಳಿ ಸಿಡಿಮದ್ದುಗಳನ್ನು ಸುಡಬಾರದು ಎಂದು ತಿಳಿಸಿದೆ.

ವಿದ್ಯುತ್ ಸ್ವಿಚ್​ಗಳು, ಅಲಂಕಾರಿಕಾ ವಿದ್ಯುತ್ ಬಲ್ಬ್​ಗಳು ಮತ್ತು ಲೈಟ್​ಗಳು ದುರಸ್ತಿಯಾದ ಸಂದರ್ಭದಲ್ಲಿ ಸಾರ್ವಜನಿಕರೇ ಖುದ್ದಾಗಿ ಅವುಗಳನ್ನು ದುರಸ್ತಿ ಮಾಡಲು ಪ್ರಯತ್ನಿಸದೇ, ಪರಿಣಿತ ಎಲೆಕ್ಟ್ರಿಷಿಯನ್​ಗಳ ಸಹಾಯ ಪಡೆಯಬೇಕು. ಯಾವುದೇ ಹೆಚ್.ಟಿ ಅಥವಾ ಎಲ್.ಟಿ ವಿದ್ಯುತ್ ಜಾಲಗಳ ಅಡಿಯಲ್ಲಿ ಹೊಸವರ್ಷದ ಪೆಂಡಲ್​ಗಳನ್ನು ನಿರ್ಮಿಸ ಕೂಡದು. ಯಾವುದಾದರೂ ವಿದ್ಯುತ್ ಮಾರ್ಗವು ತುಂಡಾಗಿದ್ದರೆ ಅಥವಾ ಹಾನಿಗೀಡಾಗಿದ್ದರೆ ತಕ್ಷಣ ಬೆಸ್ಕಾಂ ಸಹಾಯವಾಣಿ 1912ಕ್ಕೆ ಕರೆಮಾಡಿ ತಿಳಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದೆ.

ಇನ್ನೊಂದೆಡೆ, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೈಂಟ್ ಮಾರ್ಕ್ಸ್ ರಸ್ತೆ, ಮತ್ತು ಚರ್ಚ್ ​ಸ್ಟ್ರೀಟ್​ನಲ್ಲಿ ಸೆಲೆಬ್ರೇಷನ್​ಗಾಗಿ ಜಮಾವಣೆಗೊಳ್ಳುವುದರಿಂದ ಬೆಂಗಳೂರು ಸಂಚಾರಿ ಪೊಲೀಸರು ಕೆಲವು ಅಗತ್ಯ ಸೂಚನೆಗಳನ್ನು ಹೊರಡಿಸಿದ್ದಾರೆ. ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 3ಗಂಟೆಯವರೆಗೂ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್‌ವರೆಗೆ ಮತ್ತು ಬ್ರಿಗೇಡ್ ರಸ್ತೆಯ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಒಪೇರಾ ಜಂಕ್ಷನ್‌ವರೆಗೆ, ಚರ್ಚ್ ಸ್ಟ್ರೀಟ್‌ನ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಹೊಸ ವರ್ಷಾಚರಣೆ ; ಎಂಜಿ ರೋಡ್, ಬ್ರಿಗೇಡ್ ರೋಡ್​ಗೆ ಆಗಮಿಸುವವರಿಗೆ‌ ಪೊಲೀಸರ ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.