ETV Bharat / state

ವರ್ಗಾವಣೆ ಆಗುವ ಪೊಲೀಸ್ ಅಧಿಕಾರಿಗಳಿಗೆ ಶಾಕ್ ಕೊಟ್ಟ ಪ್ರವೀಣ್ ಸೂದ್

author img

By

Published : Oct 29, 2020, 11:31 AM IST

ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಆಗುವ ಅಧಿಕಾರಿಗಳು ಇನ್ನು ಮುಂದೆ ತಮ್ಮ ಜೊತೆಗೆ ಸರ್ಕಾರಿ ವಾಹನವನ್ನು ಕೊಂಡೊಯ್ಯುವಂತಿಲ್ಲ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶಿಸಿದ್ದಾರೆ.

DG and IGP praveen sood
ಪ್ರವೀಣ್ ಸೂದ್

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆಗೊಳ್ಳುವ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಖಡಕ್‌ ಆದೇಶ ಹೊರಡಿಸಿದ್ದಾರೆ.

ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಆಗುವ ಅಧಿಕಾರಿಗಳು ಇನ್ನು ಮುಂದೆ ತಮ್ಮ ಜೊತೆಗೆ ಸರ್ಕಾರಿ ವಾಹನವನ್ನು ಕೊಂಡೊಯ್ಯುವಂತಿಲ್ಲ. ಸರ್ಕಾರ ಸೂಚಿಸಿರುವ ಸ್ಥಳಕ್ಕೆ ಸೇವೆಗೆಂದು ತೆರಳುವಾಗ ಸರ್ಕಾರಿ ವಾಹನಗಳನ್ನು ವರ್ಗಾವಣೆಯಾಗುವ ಸ್ಥಳಕ್ಕೆ ಕೆಲ ಅಧಿಕಾರಿಗಳು ತಮ್ಮ ಜೊತೆಗೆನೆ ಕೊಂಡೊಯ್ಯುತ್ತಿದ್ದರು. ಹೀಗಾಗಿ ಈ ವಿಚಾರ ಡಿಜಿ ಗಮನಕ್ಕೆ ಬಂದಿತ್ತು.

praveen sood gave shock to transferring police officers
ಆದೇಶದ ಪ್ರತಿ

ಇದು ಪೊಲೀಸ್ ಇಲಾಖೆಯಲ್ಲಿನ ಶಿಸ್ತಿನ ನಡೆಯಲ್ಲ, ಆದ್ದರಿಂದ ವರ್ಗಾವಣೆಯಾದ ಬಳಿಕ ಸರ್ಕಾರಿ ವಾಹನಗಳನ್ನು ಕೊಂಡೊಯ್ಯಬಾರದು. ತಾವು‌ ನಿಯೋಜನೆಯಾಗುವ ಸ್ಥಳದಲ್ಲಿನ ವಾಹನಗಳ ಸೌಲಭ್ಯ ಪಡೆಯಬೇಕು. ಇದನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಒಂದು ವೇಳೆ ಪಾಲನೆ ಮಾಡದೇ ಇದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.