ETV Bharat / state

ಸೇಫ್ ಸಿಟಿ ಯೋಜನೆಯಡಿ ಬಸ್‌ಗಳಲ್ಲಿ ಸೇಫ್ಟಿ ಐಲ್ಯಾಂಡ್ ಯಂತ್ರ ಅಳವಡಿಕೆ: ಮಹಿಳೆಯರಿಗಿದು ತಿಳಿದಿರಲಿ - etv bharat karnataka

ಬೆಂಗಳೂರು ಪೊಲೀಸರು ಸೇಫ್ಟಿ ಐಲ್ಯಾಂಡ್ ಯಂತ್ರದ ಬಗ್ಗೆ ಶಾಲಾ, ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಅರಿವು ಮೂಡಿಸಿದರು.

Etv Bharatbangalore-police-give-awareness-about-safety-island-to-womens
ಸೇಫ್ ಸಿಟಿ ಯೋಜನೆಯಡಿ ನಗರದೆಲ್ಲೆಡೆ ಸೇಫ್ಟಿ ಐಲ್ಯಾಂಡ್ ನಿರ್ಮಾಣ: ಬಿಎಂಟಿಸಿ ಬಸ್ ಹತ್ತಿ ಮಹಿಳಿಯರಿಗೆ ಜಾಗೃತಿ ಮೂಡಿಸಿದ ಪೊಲೀಸ್​ ಅಧಿಕಾರಿಗಳು
author img

By

Published : Jun 19, 2023, 7:44 PM IST

ಬೆಂಗಳೂರು: ಮಹಿಳೆಯರ ಸುರಕ್ಷತೆಗಾಗಿ ಹಾಗೂ ತೊಂದರೆಯಾದಾಗ ತುರ್ತಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಂದು ನಗರ ಪೊಲೀಸರು ಬಸ್ ನಿಲ್ದಾಣ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ತೆರಳಿ ಪೋಸ್ಟರ್ ಹಿಡಿದು ಜಾಗೃತಿ ಮೂಡಿಸಿದರು. ಸೇಫ್ ಸಿಟಿ ಯೋಜನೆಯಡಿ ಮಹಿಳೆಯರ ಸುರಕ್ಷತೆ ಹಾಗೂ ಅಪಾಯ ಸಂದರ್ಭದಲ್ಲಿ‌ ನೆರವಾಗಲು ನಗರದೆಲ್ಲೆಡೆ ನಿರ್ಮಿಸಲಾಗಿರುವ ಸೇಫ್ಟಿ ಐಲ್ಯಾಂಡ್ ಯಂತ್ರದ ಬಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಅರಿವು ಮೂಡಿಸಲಾಯಿತು.

ಇನ್ಸ್​ಪೆಕ್ಟರ್​ಗಳು ಹಾಗೂ ಮೇಲಾಧಿಕಾರಿಗಳು ಸಾರ್ವಜನಿಕರಿಗೆ ಸೇಫ್ಟಿ ಐಲ್ಯಾಂಡ್ ಬಗ್ಗೆ ಮಾಹಿತಿ ನೀಡಿದರು‌. ಅಲ್ಲದೆ ಖುದ್ದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಶಿವಾಜಿನಗರ ನಿಲ್ದಾಣಕ್ಕೆ ಹೋಗಿ ಬಸ್ ಹತ್ತಿ ಮಹಿಳಾ ಪ್ರಯಾಣಿಕರಿಗೆ ಜಾಗೃತಿ ಮೂಡಿಸಿದರು. ಸುರಕ್ಷತೆ ದೃಷ್ಟಿಯಿಂದ ರೂಪಿಸಲಾಗಿರುವ ಕರ್ನಾಟಕ ಪೊಲೀಸ್ ಆ್ಯಪ್ ಅ​ನ್ನು ತಮ್ಮ‌ ಮೊಬೈಲ್​ನಲ್ಲಿ ಇನ್​ಸ್ಟಾಲ್ ಮಾಡಿಕೊಳ್ಳುವಂತೆ ಮ‌ನವಿ ಮಾಡಿದರು‌.‌ ವಾಟ್ಸಾಪ್, ಟ್ವಿಟರ್, ಫೇಸ್​ಬುಕ್ ಮುಖಾಂತರವೂ ತಮಗೆ ಅಪಾಯವಾದಾಗ ತಮ್ಮ ನೆರವಿಗೆ ಬರಲಿದ್ದೇವೆ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

Poster on Safety Island Machine
ಸೇಫ್ಟಿ ಐಲ್ಯಾಂಡ್ ಯಂತ್ರದ ಕುರಿತ ಭಿತ್ತಿಪತ್ರ

ಏನಿದು ಸೇಫ್ಟಿ ಐಲ್ಯಾಂಡ್ ಯಂತ್ರ?: ಇಂದಿನ ಆಧುನಿಕ ಯುಗದಲ್ಲಿ ಪುರುಷ ಅಥವಾ ಮಹಿಳೆಯರು ಎಂಬ ಬೇಧಬಾವವಿಲ್ಲದೆ ಪಾಳಿಯಲ್ಲಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಮಧ್ಯರಾತ್ರಿಯಾದರೂ ನಗರದಲ್ಲಿ ವಾಹನ ಸಂಚಾರ ಕಡಿಮೆಯಾಗುವುದೇ ಇಲ್ಲ. ನಿರ್ಜನ ಪ್ರದೇಶಗಳಲ್ಲಿ ಒಂಟಿಯಾಗಿ ಕೆಲ ಸಂದರ್ಭಗಳಲ್ಲಿ ಓಡಾಡುವಾಗ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆದ ಉದಾಹರಣೆ ಸಾಕಷ್ಟಿವೆ.

ಇದನ್ನೂ ಓದಿ: ಮಹಿಳೆಯರಿಗೆ ಫ್ರೀ ಬಸ್ 'ಶಕ್ತಿ ಯೋಜನೆ': 15 ದಿನ‌ಗಳಲ್ಲಿ ಕೆಲವು ಬದಲಾವಣೆ- ಸಚಿವ ರಾಮಲಿಂಗ ರೆಡ್ಡಿ

ಸರಗಳ್ಳತನ, ದರೋಡೆ ಸೇರಿದಂತೆ ವಿವಿಧ ರೀತಿಯ ಅಪರಾಧಗಳು ರಾತ್ರಿ ವೇಳೆ ಹೆಚ್ಚಾಗುತ್ತಿವೆ. ಇವೆಲ್ಲ ಗಮನದಲ್ಲಿಸಿಕೊಂಡು ಸೇಫ್ ಸಿಟಿ ಪ್ರಾಜೆಕ್ಟ್ ನಡಿ ನಗರದ 30 ಕಡೆಗಳಲ್ಲಿ ಸೇಫ್ಟಿ ಐಲ್ಯಾಂಡ್‌ಗಳನ್ನು ನಿರ್ಮಿಸಲಾಗಿದೆ. ನೀಲಿ ಬಣ್ಣದಲ್ಲಿರುವ ಎಮರ್ಜೆನ್ಸಿ ಯಂತ್ರದಲ್ಲಿ ಮಹಿಳೆಯರಿಗೆ ತೊಂದರೆಯಾದಾಗ ರೆಡ್ ಬಟನ್ ಒತ್ತಿದರೆ ಸಾಕು ನೇರವಾಗಿ ಕಮಾಂಡ್ ಸೆಂಟರ್​ಗೆ ಮಾಹಿತಿ ರವಾನೆಯಾಗಿ ಆಲಾರಂ ಮಾಡುತ್ತದೆ.

ಇದಕ್ಕೂ ಮುನ್ನ ಯಂತ್ರದ ಕ್ಯಾಮರಾ ಓಪನ್ ಆಗಲಿದೆ. ಆನ್ ಆಗುತ್ತಿದಂತೆ ಕಮಾಂಡ್ ಸೆಂಟರ್ ಸಿಬ್ಬಂದಿ ತಕ್ಷಣವೇ ಪ್ರತಿಕ್ರಿಯಿಸಲಿದ್ದು ಸ್ಥಳೀಯ ಪೊಲೀಸ್ ಠಾಣೆಗಳ ಬಗ್ಗೆ ಮಾಹಿತಿ ನೀಡಿ ನೆರವಿಗೆ ಧಾವಿಸಲಿದ್ದಾರೆ. ಐಲ್ಯಾಂಡ್​ನಲ್ಲಿ ನೇರವಾಗಿ ವಿಡಿಯೊ ದಾಖಲಿಸುವ ವ್ಯವಸ್ಥೆಯಿದೆ.‌ ಏಳು ನಿಮಿಷ ಅಂತರದಲ್ಲಿ ಹೊಯ್ಸಳ ಪೊಲೀಸರು ಸ್ಥಳಕ್ಕೆ ಆಗಮಿಸಲಿದ್ದಾರೆ. ಇದು ನೊಂದ‌ ಮಹಿಳೆಯರಿಗೆ ಸಹಕಾರವಾಗಲಿದೆ.

ಎಂ.ಜಿ.ರಸ್ತೆ, ಉಪ್ಪಾರಪೇಟೆ, ಚಾಮರಾಜಪೇಟೆ, ಇಂದಿರಾನಗರ ಸೇರಿದಂತೆ ನಗರದ ವಿವಿಧ 30 ಕಡೆಗಳಲ್ಲಿ ಐಲ್ಯಾಂಡ್ ಯಂತ್ರ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಐಲ್ಯಾಂಡ್ ಯಂತ್ರಗಳನ್ನು ಅಳವಡಿಸುವ ಕೆಲಸವಾಗಲಿದೆ‌ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Guarantee scheme: ಗೃಹ ಜ್ಯೋತಿ ಯೋಜನೆಗೆ ಮೊದಲ ದಿನ 55 ಸಾವಿರ ಗ್ರಾಹಕರ ನೋಂದಣಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.