ETV Bharat / state

ಕೊರೊನಾ ಶಂಕಿತನಲ್ಲದಿದ್ದರೂ ಜನ ಗಾಬರಿ: ಆ್ಯಂಬುಲೆನ್ಸ್ ಕರೆಸಿ ಚಿಕಿತ್ಸೆಗೆ ಕಳಿಸಿಯೇ‌ ಬಿಟ್ಟರು - corona virus

ಕೊರೊನಾ ವೈರಸ್ ಭೀತಿಯಲ್ಲೇ ದಿನ ದೂಡಿತ್ತಿರುವ ಜನ ಯಾರಾದರೂ ಕೆಮ್ಮಿದ್ರೆ ಸಾಕು ಕೊರೊನಾ ಇರಬಹುದು ಎಂದುಕೊಂಡು ಸುಮ್​​ ಸುಮ್ನೆ ಗಾಬರಿಯಾಗುತ್ತಿರುವ ದೃಶ್ಯ ಕಂಡು ಬರುತ್ತಿದೆ.

bengaluru people panic about corona
ಕೊರೊನಾ ಭೀತಿ
author img

By

Published : Mar 28, 2020, 5:28 PM IST

ಬೆಂಗಳೂರು: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದ್ದು, ಇದೀಗ ಯಾರಾದರೂ ಸ್ವಲ್ಪ ಕೆಮ್ಮಿದ್ರು ಸಾಕು ಜನ ಗಾಬರಿಯಾಗ್ತಿದ್ದಾರೆ.

ಕೊರೊನಾ ಭೀತಿ

ಮತ್ತೊಂದು ಕಡೆ ಹೋಂ ಕ್ವಾರಂಟೈನ್ ನಲ್ಲಿರಬೇಕಾದವರು ಊರೂರು ಸುತ್ತುತ್ತಿದ್ದು, ಆತಂಕ ಇನ್ನೂ ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಕೊರೊನಾ ಶಂಕಿತನಲ್ಲದಿದ್ದರೂ ವ್ಯಕ್ತಿಯೋರ್ವನ ಓಡಾಟ ನೋಡಿ ಗಾಬರಿಯಾದ ಜನರು ಚಿಕಿತ್ಸೆಗೆ ಕಳಿಸಿರುವ ಘಟನೆ ನಡೆದಿದೆ.

ನಗರದ ಕಾಟನ್​​ಪೇಟೆಯ ಲಾಡ್ಜ್ ವೊಂದಲ್ಲಿ ಹೈದರಾಬಾದ್ ಮೂಲದ ವ್ಯಕ್ತಿಯೊಬ್ಬ ಎರಡು ತಿಂಗಳಿನಿಂದ ವಾಸವಾಗಿದ್ದಾನೆ. ನಿನ್ನೆ ಸ್ವಲ್ಪ ಕೆಮ್ಮು, ಸುಸ್ತು ಅಂತ ಅಂದಿದ್ದೇ ತಡ, ಅಲ್ಲಿನ ಸ್ಥಳೀಯರು ಪೊಲೀಸರಿಗೂ ಮಾಹಿತಿ, ಆ್ಯಂಬುಲೆನ್ಸ್​​ ಗೆ ಕರೆ ಮಾಡಿದ್ದಾರೆ. ನಂತರ ಆ್ಯಂಬುಲೆನ್ಸ್​​​​​ನಲ್ಲಿ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗಿದೆ. ನಂತರ ನೆಗೆಟಿವ್ ಅಂತ ವರದಿ ಬಂದ್ಮೇಲೆ ಮತ್ತೆ ವಾಪಸ್​ ಕಳಿಸಿದ್ದಾರೆ.. ಸದ್ಯ ಜನರು ಸ್ವತಃ ಜವಾಬ್ದಾರಿ ತಗೊಂಡಿರುವುದು ಸರಿ, ಆದರೆ ಸುಖಾಸುಮ್ನೆ ಗಾಬರಿಯಾಗೋದು ಬೇಡ ಅನ್ನೋದು ಅಂತಿದ್ದಾರೆ ಕೆಲ ಮಂದಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.