ಬೆಂಗಳೂರು: ಪಕ್ಕದ ಮನೆಯಲ್ಲಿ ಕೋಳಿಗಳು ಕೂಗುವುದರಿಂದ ನಿದ್ದೆ ಮಾಡಲು ತೊಂದರೆಯಾಗುತ್ತಿದೆ ಎಂದು ಇಲ್ಲೊಬ್ಬ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ಸಮಸ್ಯೆ ಬಗೆಹರಿಸುವುದಾಗಿ ಟ್ವೀಟ್ ಮೂಲಕ ವ್ಯಕ್ತಿಗೆ ತಿಳಿಸಿದ್ದಾರೆ.
- — Nemo (@Nemo_2ETR) December 16, 2022 " class="align-text-top noRightClick twitterSection" data="
— Nemo (@Nemo_2ETR) December 16, 2022
">— Nemo (@Nemo_2ETR) December 16, 2022
ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿಗಳು, ಬಾತುಕೋಳಿಗಳ ಸಾಕಾಣಿಕೆ ಮಾಡಲಾಗುತ್ತದೆ. ಇದರಿಂದ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗ್ತಿದೆಯಂತೆ. 'ಮನೆಯಲ್ಲಿ 2 ತಿಂಗಳ ಹಸುಗೂಸಿದೆ, ಪಕ್ಕದ ಮನೆಯ ಕೋಳಿಗಳು ರಾತ್ರಿಯಿಡೀ ಕೂಗುವುದರಿಂದ ನಿದ್ದೆ ಸಾಧ್ಯವಾಗುತ್ತಿಲ್ಲ' ಎಂದಿರುವ ವ್ಯಕ್ತಿ ಸಮಸ್ಯೆ ಬಗೆಹರಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಈ ಗಿರಿರಾಜ ಕೋಳಿ ಬೆಲೆ 50 ಸಾವಿರ ರೂ...!