ಬೆಂಗಳೂರು: ಕೊರೊನಾ ಅಬ್ಬರ ಜೋರಾಗಿರುವ ಕಾರಣ ನಾಳೆಯಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆ ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದ್ದು, ಅದಕ್ಕಾಗಿ ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ ಪ್ರಕಟಗೊಂಡಿವೆ.
ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರ ಸಂಪೂರ್ಣವಾಗಿ ಬಂದ್ ಆಗಲಿದ್ದು, ಮಾಲ್, ಶಾಪಿಂಗ್ ಮಾಲ್ ತೆರೆಯುವಂತಿಲ್ಲ. ಬಾರ್-ವೈನ್ ಶಾಪ್ ಬಂದ್ ಆಗಲಿವೆ.
ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಪ್ರಕಾರ, ಆರೋಗ್ಯ, ವೈದ್ಯಕೀಯ ಸೇವೆ ಲಭ್ಯವಿರಲಿದೆ. ಬ್ಯಾಂಕ್, ಎಟಿಎಂ, ಪೆಟ್ರೋಲ್ ಪಂಪ್ ಕಾರ್ಯ ನಿರ್ವಹಣೆ ಮಾಡಲಿವೆ. ವಾಣಿಜ್ಯ, ಖಾಸಗಿ ಸಂಸ್ಥೆ ಸಂಪೂರ್ಣವಾಗಿ ಮುಚ್ಚಲಿವೆ. ಹೊಟೇಲ್ ಬಂದ್ ಆಗಲಿದ್ದು, ಪಾರ್ಸೆಲ್ಗಳಿಗೆ ಅವಕಾಶ ಸಿಗಲಿದೆ. ರಾಜ್ಯ ಸರ್ಕಾರದ ಕಚೇರಿ ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು ಮುಚ್ಚಲಿವೆ.
ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಪ್ರಯಾಣ ಅನುಮತಿ ಇರಲಿದ್ದು, ಹೊಸ ವಿಮಾನ, ರೈಲು ಸಂಚಾರಕ್ಕೆ ಅವಕಾಶ ನೀಡಿಲ್ಲ. ಶಾಲೆ- ಕಾಲೇಜ್, ಶಿಕ್ಷಣ/ಕೋಚಿಂಗ್ ಸಂಸ್ಥೆಗಳು ಬಂದ್ ಆಗಲಿದ್ದು, ರೆಸ್ಟೋರೆಂಟ್ ಸಂಪೂರ್ಣವಾಗಿ ಮುಚ್ಚಲಿವೆ.ಸಿನಿಮಾ ಮಂದಿರ, ಶಾಪಿಂಗ್ ಮಾಲ್, ಜಿಮ್, ಸ್ಟೇಡಿಯಂಗಳು, ಮನರಂಜನಾ ಉದ್ಯಾನಗಳು, ರಂಗಮಂದಿರ, ಬಾರ್ಗಳು, ಧಾರ್ಮಿಕ ಸ್ಥಳಗಳು ಬಂದ್ ಆಗಲಿವೆ.