ಬೆಂಗಳೂರು: ಐಟಿ-ಬಿಟಿ ಸಿಟಿಯೆಂದೇ ಖ್ಯಾತವಾಗಿರುವ ಬೆಂಗಳೂರು, ಸ್ಮಾರ್ಟ್ ಸಿಟೀಸ್ ಮಿಷನ್ ಅಡಿಯಲ್ಲಿ, ಕೋವಿಡ್ ನಿರ್ವಹಣೆಗೆಂದು ಸಿದ್ಧಪಡಿಸಿದ "ಇಂಡೆಕ್ಸ್" ಅಪ್ಲಿಕೇಶನ್ಗೆ ಬಹುಮಾನ ದೊರೆತಿದೆ. ನವದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್ ಸಿಟಿ ಮಿಷನ್ನ 6ನೇ ಆವೃತ್ತಿಯಡಿ ಈ ಬಹುಮಾನ ಬೆಂಗಳೂರು ಪಾಲಿಗೆ ಲಭಿಸಿದೆ.
ಐಸಿಎಂಆರ್ನಿಂದ ಕೋವಿಡ್ ಪಾಸಿಟಿವ್ ಪ್ರಕರಣಗಳ ಮಾಹಿತಿ ಪಡೆದು ತಕ್ಷಣವೇ ವಲಯವಾರು ಕಮಾಂಡ್ ಸೆಂಟರ್ಗಳಿಗೆ ಹಾಗೂ ಎಲ್ಲಾ ಫೀಲ್ಡ್ ತಂಡಗಳಿಗೆ ಮಾಹಿತಿ ನೀಡಿ ಕೋವಿಡ್ ಸೋಂಕಿತರಿಗೆ ಸಂಬಂಧಿಸಿದಂತೆ ಕಾರ್ಯಪ್ರವೃತ್ತರಾಗಲು ಈ ಆ್ಯಪ್ ಸಹಾಯಕವಾಗುತ್ತಿದೆ. 24 ಗಂಟೆಗಳ ಕೆಲಸವನ್ನು ತಕ್ಷಣವೇ ಪೂರೈಸಲು ಇದು ನೆರವಾಗುತ್ತಿದೆ.
ಈ ಆ್ಯಪ್ನ್ನು 2020ರ ಜೂನ್ ತಿಂಗಳಲ್ಲಿ ಅಭಿವೃದ್ಧಿ ಪಡಿಸಲಾಯಿತು. ಇದರಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ಮಾಹಿತಿಯನ್ನು 15 ದಿನದೊಳಗೆ ಸೇರ್ಪಡೆಗೊಳಿಸಲಾಯಿತು. ಸೋಂಕಿತರ ಮರಣ ಪ್ರಮಾಣ ಕಡಿಮೆ ಮಾಡಿ ಬೆಂಗಳೂರನ್ನು ಕೋವಿಡ್ ವಿರುದ್ಧ ಸುರಕ್ಷಿತವಾಗಿಡುವ ಉದ್ದೇಶದಿಂದ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಡೇಟಾ ಸೈಂಟಿಸ್ಟ್ಗಳ ನೆರವಿನಿಂದ ಈ ಆ್ಯಪ್ನ್ನು ಅಭಿವೃದ್ಧಿ ಪಡಿಸಲಾಗಿದೆ.
ಇದನ್ನೂ ಓದಿ: ISAC Award 2020: ಇಂದೋರ್ ಮತ್ತು ಸೂರತ್ ನಗರಗಳಿಗೆ ಪ್ರಶಸ್ತಿ