ETV Bharat / state

ಡ್ರಗ್ ದಂಧೆ ಪ್ರಕರಣ: ಬಂಧಿತ ದರ್ಶನ್​ ಲಮಾಣಿಗೆ ಸಿಸಿಬಿ ಡ್ರಿಲ್​ - ಸಿಸಿಬಿಯಿಂದ ಡ್ರಗ್ ಪ್ರಕರಣದ ಆರೋಪಿಯ ವಿಚಾರಣೆ

ಡ್ರಗ್ ದಂಧೆ ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್​ ಲಮಾಣಿಯನ್ನು ಸಿಸಿಬಿ ವಿಚಾರಣೆಗೆ ಒಳಪಡಿಸಿದ್ದು, ಮಹತ್ವದ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ.

Bengaluru Drug link case Update
ಬೆಂಗಳೂರು ಡ್ರಗ್ ದಂಧೆ ಪ್ರಕರಣ ಅಪ್ಡೇಟ್
author img

By

Published : Nov 11, 2020, 3:37 PM IST

ಬೆಂಗಳೂರು : ಡ್ರಗ್ಸ್​ ಜಾಲ ನಂಟು ಆರೋಪ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್​ ಲಮಾಣಿಯ ವಿಚಾರಣೆಯನ್ನು ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ವಿಚಾರಣೆ ವೇಳೆ ಪ್ರಕರಣದ ಪ್ರಮುಖ ಆರೋಪಿ ಹೇಮಂತ್​ ಜೊತೆ ದರ್ಶನ್ ನಂಟು ಹೊಂದಿರುವ ವಿಚಾರ ಬೆಳಕಿಗೆ ಬಂದಿದೆ.

ಖುದ್ದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಆರೋಪಿಯ ವಿಚಾರಣೆ ನಡೆಸುತ್ತಿದ್ದು, ವಿಚಾರಣೆ ವೇಳೆ ಸದಾಶಿವನಗರದ ಬಳಿ ಇರುವ ಸುನೀಶ್ ಎಂಬಾತನ ಮನೆಯಲ್ಲಿ ಹೈಫೈ ಪಾರ್ಟಿ ನಡೆಯುತ್ತಿದ್ದ ಬಗ್ಗೆ ಆರೋಪಿ ಬಾಯ್ಬಿಟ್ಟಿದ್ದಾನೆ. ಅಲ್ಲದೇ, ಸಿಬಿಐ ಕಚೇರಿ ಸಮೀಪದ ಎಸ್​ಬಿಐ ಬಳಿಯಿರುವ ಅರ್ನವ್ ಗೌಡನ ಮನೆಗೆ ಡ್ರಗ್ ಸರಬರಜಾಗುತ್ತಿದ್ದ ಬಗ್ಗೆ ಸುಳಿವು ನೀಡಿದ್ದಾನೆ.

ಚಾಮರಾಜಪೇಟೆಯಲ್ಲಿ ವಿದೇಶಿ ಪೋಸ್ಟ್ ಆಫೀಸ್ ಇದ್ದು, ಪಾರ್ಸೆಲ್ ತಡವಾದರೆ ಪ್ರಮುಖ ಆರೋಪಿ ಹೇಮಂತ್ ಖುದ್ದು ಪೋಸ್ಟ್ ಆಫೀಸ್​ಗೆ ಹೋಗಿ ವಿಚಾರಿಸುತ್ತಿದ್ದ. ಇದರಿಂದ ಅನುಮಾನಗೊಂಡಿದ್ದ ಕಸ್ಟಮ್ ಅಧಿಕಾರಿಗಳು ನವೆಂಬರ್ 4 ರಂದು ಬಂದಿದ್ದ ಪೋಸ್ಟ್​ ತೆರೆದು ಪರಿಶೀಲನೆ ನಡೆಸಿದ್ದರು. ಈ ವೇಳೆ, 500 ಗ್ರಾಂ ಹೈಡ್ರೋ ಗಾಂಜಾ ಪತ್ತೆಯಾಗಿದೆ. ಕೂಡಲೇ ಸಿಸಿಬಿಗೆ ಮಾಹಿತಿ ನೀಡಿ, ನಂತರ ಪಾರ್ಸೆಲ್ ಬಂದಿದೆ ಎಂದು ಆರೋಪಿ ಹೇಮಂತ್​ಗೆ ಮಾಹಿತಿ ನೀಡಿದ್ದರು. ಈ ವೇಳೆ, ಆರೋಪಿಗಳಾದ ಹೇಮಂತ್ ಮತ್ತು ಸುಜಯ್ ಸ್ಥಳಕ್ಕೆ ಬಂದಿದ್ದರು. ಸುಜಯ್​ನ್ನು ಹಿಡಿಯುವಾಗ, ಹೇಮಂತ್ ತಪ್ಪಿಸಿಕೊಂಡಿದ್ದ. ಬಳಿಕ ಆರೋಪಿಗೆ ಮಾಜಿ ಸಚಿವರ ಪುತ್ರ ದರ್ಶನ್ ಲಮಾಣಿ ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ವಿಚಾರ ಗೊತ್ತಾಗಿತ್ತು.

ಡಾರ್ಕ್ ವೆಬ್ ಮೂಲಕ ಡ್ರಗ್ಸ್ ದಂಧೆ:

ಡಾರ್ಕ್ ವೆಬ್ ಒಂದು ಸಾಮಾಜಿಕ ಮಾಧ್ಯಮವಾಗಿದ್ದು, ಡ್ರಗ್ಸ್, ವೇಶ್ಯಾವಾಟಿಕೆ, ಹವಾಲಾ ಹೀಗೆ ಹಲವು ಅಕ್ರಮ ಚಟುವಟಿಕೆಗಳು ಇಲ್ಲಿ ‌ನಡೆಯುತ್ತದೆ. ಡಾರ್ಕ್ ವೆಬ್​ಗೆ ಲಾಗಿನ್ ಆಗುವ ವ್ಯಕ್ತಿಯ ಐಪಿ ಅಡ್ರೆಸ್ ಹುಡುಕಲು ಕಷ್ಟವಾಗುತ್ತದೆ. ಹೀಗಾಗಿ, ವಿದೇಶಿ ಡ್ರಗ್ ಪೆಡ್ಲರ್​ಗಳನ್ನ ಸಂಪರ್ಕಿಸಿ ಪೋಸ್ಟ್ ಮೂಲಕ ಡ್ರಗ್ ತರಿಸುತ್ತಿದ್ದರು. ಪಾರ್ಸಲ್ ಟ್ರ್ಯಾಕ್ ನಂಬರ್ ಇಟ್ಟುಕೊಂಡು ಸಂಬಂಧಪಟ್ಟ ವಿದೇಶಿ ಅಂಚೆ ಕಚೇರಿಗೆ ಹೋಗಿ ಪಾರ್ಸೆಲ್ ಪಡೆಯುತ್ತಿದ್ದರು. ಒಂದು ವೇಳೆ, ಪೊಲೀಸರು ಆರೋಪಿಗಳು ಕೊಟ್ಟ ಅಡ್ರೆಸ್​ಗೆ ಹೋದರೆ, ವಿಳಾಸ ಇರಬಾರದೆಂದು ಪ್ಲಾನ್​ ಮಾಡಿ, ಪಾರ್ಸಲ್ ಬಂದ ತಕ್ಷಣ ಬಿಟ್ ಕಾಯಿನ್​ ಮೂಲಕ ಹಣ ಪಾವತಿಸುತ್ತಿದ್ದರು.

ಸದ್ಯ, ಮಾಜಿ ಸಚಿವರ ಪುತ್ರನ ವಿಚಾರಣೆ ಮುಂದುವರೆದಿದೆ. ದರ್ಶನ್ ತನ್ನ ಸಹೋದರಿ ಮನೆಯಲ್ಲಿ ನೆಲೆಸಿದ್ದ ವಿಚಾರ ಬೆಳಕಿಗೆ ಬಂದಿದೆ. ಪದವಿ ಮುಗಿಸಿ ಎಲ್​ಎಲ್​ಬಿಗೆ ಸೇರಲು ದರ್ಶನ್ ಅರ್ಜಿ ಹಾಕಿದ್ದ. ಆದರೆ, ಕೊರೊನಾ ಕಾರಣದಿಂದ ತರಗತಿಗಳು ನಡೆಯದ ಹಿನ್ನೆಲೆ, ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಬಂಧಿತರಾಗಿರುವ ಆರೋಪಿಗಳಿಂದ ಮತ್ತಷ್ಟು ಮಾಹಿತಿ ಕಲೆ ಹಾಕಿ ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.