ETV Bharat / state

ಬೆಂಗಳೂರಿನಲ್ಲಿ ಕುಖ್ಯಾತ ರೌಡಿಶೀಟರ್ ಬರ್ಬರ ಹತ್ಯೆ - ಈಟಿವಿ ಭಾರತ ಕನ್ನಡ

ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಮಂಗಳವಾರ ಸಂಜೆ ರೌಡಿಶೀಟರ್‌ವೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ರೌಡಿಶೀಟರ್ ಕಪಿಲ್​ ಹತ್ಯೆ
ರೌಡಿಶೀಟರ್ ಕಪಿಲ್​ ಹತ್ಯೆ
author img

By

Published : Jul 12, 2023, 6:49 AM IST

Updated : Jul 12, 2023, 11:33 AM IST

ಬೆಂಗಳೂರು: ರೌಡಿಶೀಟರ್‌ವೊಬ್ಬನನ್ನು​ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಘಟನೆ ನಿನ್ನೆ ಸಂಜೆ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಡಿಮಾರ್ಟ್ ಕಟ್ಟಡದ ಬಳಿ ನಡೆದಿದೆ. ಕಪಿಲ್ ಎಂಬಾತ ಹತ್ಯೆಯಾದ ರೌಡಿಶೀಟರ್. ಡಿ.ಜೆ. ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗೆ ಶೋಧ ಕೈಗೊಂಡಿದ್ದಾರೆ.

ವಿವರ: ಕಪಿಲ್ 2014ರ ಅಕ್ಟೋಬರ್‌ನಲ್ಲಿ ಬಿಟಿಎಂ ಲೇಔಟ್‌ನ ಜೈ ಭೀಮ್ ನಗರದ ಬಳಿ ನಡೆದಿದ್ದ ನಕ್ರಾ ಬಾಬುವಿನ ಕೊಲೆ ಕೇಸ್‌ನಲ್ಲಿ ಆರೋಪಿ. ಸ್ನೇಹಿತ ರಾಜ್ ಕಮಲ್ ನಿವಾಸದ ಸಮೀಪ ಆತನ ಕುಟುಂಬದವರ ಕಣ್ಣೆದುರೇ ಬಾಬುವಿನ ಹತ್ಯೆಯಾಗಿತ್ತು. ಅದೇ ವರ್ಷದ ಜೂನ್ ತಿಂಗಳಿನಲ್ಲಿ ಹೊಸೂರು ಚೆಕ್‌ ಪೋಸ್ಟ್ ಬಳಿ ನಡೆದಿದ್ದ ಕವಳ ವಿಜಯ್ ಕುಮಾರ್​ನ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿತ್ತು ಎಂದು ಪೊಲೀಸರು ಹೇಳಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ಕಪಿಲ್, ಶರವಣ, ವಿನಯ್, ರಂಜಿತ್, ಜೇಮ್ಸ್ ಮತ್ತು ಶ್ಯಾಮ್ ಎಂಬಾತನನ್ನು ಮಡಿವಾಳ ಪೊಲೀಸರು ಬಂಧಿಸಿದ್ದರು. ಹಾಗಾಗಿ ನಿನ್ನೆ ನಡೆದ ಕೊಲೆ ಸೇಡಿನ ಕೃತ್ಯ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಜಯಪುರದಲ್ಲೂ ಇಂಥದ್ದೇ ಘಟನೆ..: ವಿಜಯಪುರ ಜಿಲ್ಲೆಯ ಆಲಮೇಲ ಸಮೀಪದ ದೇವರನಾವದಗಿ ಗ್ರಾಮದಲ್ಲಿ ಮಂಗಳವಾರ ಹಾಡಹಗಲೇ ನಡುರಸ್ತೆಯಲ್ಲಿ ರೌಡಿಶೀಟರ್​​ ಹತ್ಯೆ ನಡೆದಿತ್ತು. ಮಾಳಪ್ಪ ಯಮನಪ್ಪ ಮೇತ್ರಿ (40) ಕೊಲೆಯಾದ ರೌಡಿಶೀಟರ್​ ಎಂದು ಗುರುತಿಸಲಾಗಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ತಲೆಗೆ ಹಲ್ಲೆ ಮಾಡಿ ಹತ್ಯೆ ಮಾಡಿದ್ದು, ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಳಪ್ಪ ಮೇತ್ರಿ ವಿರುದ್ಧ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೇ ದ್ವೇಷಕ್ಕೆ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸ್​ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದೆಡೆ, ಕ್ಷುಲ್ಲಕ ಕಾರಣಕ್ಕೆ ತಂದೆಯನ್ನೇ ಮಗ ಕೊಂದ ಘಟನೆ ನಿನ್ನೆ ವಿಜಯಪುರದ ವೆಂಕಟೇಶ ನಗರದಲ್ಲಿ ನಡೆದಿದೆ. ರಮೇಶ ಕೂಡಿಗನವರ ಕೊಲೆಯಾದ ವ್ಯಕ್ತಿ. ಮಗ ಅಮಿತ್​ ಕೊಲೆಗೈದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ. ಅಲ್ಲದೇ ಹತ್ಯೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: Vijayapur crime: ಭೀಮಾತೀರದಲ್ಲಿ ರೌಡಿಶೀಟರ್ ಬರ್ಬರ​ ಹತ್ಯೆ.. ಹಳೇ ದ್ವೇಷಕ್ಕೆ ಕೊಲೆ ಶಂಕೆ

Last Updated : Jul 12, 2023, 11:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.