ಬೆಂಗಳೂರು: ನಗರದಲ್ಲಿಂದು ಹೊಸದಾಗಿ 1,297 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಬೊಮ್ಮನಹಳ್ಳಿಯಲ್ಲಿ 130, ದಾಸರಹಳ್ಳಿ 60, ಬೆಂಗಳೂರು ಪೂರ್ವ 173, ಮಹಾದೇವಪುರ 184, ಆರ್.ಆರ್. ನಗರ 96, ಬೆಂಗಳೂರು ದಕ್ಷಿಣ 131, ಬೆಂಗಳೂರು ಪಶ್ಚಿಮ 96 ಹಾಗೂ ಯಲಹಂಕದ 59 ಜನರಲ್ಲಿ ಸೋಂಕು ಪತ್ತೆಯಾಗಿದೆ.
ನಿನ್ನೆ ( ಜೂನ್ 14ರಂದು) ನಗರದಲ್ಲಿ 1,470 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದವು. 12 ಮಂದಿ ಸೋಂಕಿತರು ಮೃತಪಟ್ಟಿದ್ದರು. ಪ್ರಸ್ತುತ 85,044 ಸಕ್ರಿಯ ಪ್ರಕರಣಗಳಿವೆ. ಜೂನ್ 13ರಂದು 48,224 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ನಿನ್ನೆ 303 ಮಂದಿ ತೀವ್ರ ನಿಗಾ ಘಟಕದಲ್ಲಿ ಹಾಗೂ 440 ಮಂದಿ ಐಸಿಯು+ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇದುವರೆಗೆ ನಗರದ 27,150 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಪ್ರಸ್ತುತ ಪಾಸಿಟಿವಿಟಿ ದರ ಶೇ. 3.02ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ ಶೇ. 1.88 ಇದೆ. ನಿನ್ನೆ ಒಟ್ಟು 16,459 ಹಾಸಿಗೆಗಳ ಪೈಕಿ 13,916 ಖಾಲಿ ಇದ್ದವು.
ಓದಿ : ಡಾ. ಅಶ್ವತ್ಥ ನಾರಾಯಣ್ ಫೌಂಡೇಶನ್‌ನಿಂದ ಮಲ್ಲೇಶ್ವರ ಕ್ಷೇತ್ರದಲ್ಲಿ 25,000 ಲಸಿಕೆ