ಬೆಂಗಳೂರು : ನಗರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಮತ್ತೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ ಹೊಸದಾಗಿ 3,442 ಪ್ರಕರಣಗಳು ವರದಿಯಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು?
ಬೊಮ್ಮನಹಳ್ಳಿ 369, ದಾಸರಹಳ್ಳಿ 88, ಬೆಂಗಳೂರು ಪೂರ್ವ 420, ಮಹಾದೇವಪುರ 571 , ಆರ್.ಆರ್ ನಗರ 244, ಬೆಂಗಳೂರು ದಕ್ಷಿಣ 276, ಬೆಂಗಳೂರು ಪಶ್ಚಿಮ 247, ಯಲಹಂಕದಲ್ಲಿ 227 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ನಿನ್ನೆ ನಗರದಲ್ಲಿ 3,992 ಪ್ರಕರಣಗಳು ಪತ್ತೆಯಾಗಿತ್ತು. 242 ಮಂದಿ ಮೃತಪಟ್ಟಿದ್ದರು. ಸದ್ಯ, ನಗರದಲ್ಲಿ 1,46,043 ಸಕ್ರಿಯ ಪ್ರಕರಣಗಳಿವೆ. ಮೇ 30 ರಂದು 44,197 ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಪಾಸಿಟಿವಿಟಿ ಪ್ರಮಾಣ ಶೇ. 26.34 ರಷ್ಟು ಇದ್ದು, ಮರಣ ಪ್ರಮಾಣ ಶೇ. 1.76 ರಷ್ಟು ಇದೆ.
ಓದಿ : ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಿಸಿಎಂ ಕಾರಜೋಳ