ಬೆಂಗಳೂರು: ಸೋನಿಯಾ ಗಾಂಧಿಯವರೇ ನಮ್ಮ ತಾಯಿ, ರಾಹುಲ್ ಗಾಂಧಿ ನಮ್ಮ ಸಹೋದರ. ಅವರ ಜೊತೆ ನಾವು ಇದ್ದೇವೆ. ಆತಂಕ ಬೇಡ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ರೇಸ್ ಕೋರ್ಸ್ದಲ್ಲಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯಲ್ಲಿ ಮಾಧ್ಯಮದವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಾತನಾಡಿದರು.
ನಿಮ್ಗೂ ಒಳ್ಳೆಯ ಕಾಲ ಬರುತ್ತೆ. ದೇಶಕ್ಕೆ ಗಾಂಧಿ ಕುಟುಂಬ ಗುಲಾಮರು ಹೌದು. ಭಾರತಾಂಭೆ ಕೆಲಸ ಮಾಡಿದ್ದು ಗಾಂಧಿ ಕುಟುಂಬ. ಅವರು ಹೇಳ್ತಿದ್ದರಲ್ಲ ನಾವು ಗುಲಾಮರು ಅಂತ, ಅದು ನಿಜ. ನಾವು ಭಾರತಾಂಬೆಯ ಕೆಲಸ ಮಾಡ್ತಿದ್ದೇವೆ, ಜನರ ಸೇವೆ ಮಾಡ್ತಿದ್ದೇವೆ, ಭಾರತ ತಾಯಿ ಸೇವೆ ಮಾಡ್ತಿದ್ದೇವೆ. ಭಾರತ ತಾಯಿ ಮಕ್ಕಳಾದ ನಾವು ಭಾರತದ ಕೆಲಸ ಮಾಡಿತ್ತಿದ್ದೇವೆ ಎಂದು ಟಾಂಗ್ ಕೊಟ್ಟರು.
ಈ ದೇಶದಲ್ಲಿ ಇಡಿ ಮತ್ತು ಸಿಬಿಐನಂತ ತನಿಖಾ ಸಂಸ್ಥೆಗಳ ದುರ್ಬಳಕೆ ನಡೆಯುತ್ತಿದೆ. ಸಾವಿರಾರು ಪ್ರತಿಪಕ್ಷದ ನಾಯಕರ ಬಾಯಿಯನ್ನು ಮುಚ್ಚಲು ಹೊರಟಿದ್ದಾರೆ. ಬಿಜೆಪಿಯವರು ಒಬ್ಬರ ಮೇಲೆ ಕ್ರಮ ಕೈಗೊಂಡಿಲ್ಲ. ಅವರ ಪಕ್ಷದ ಒಬ್ಬರನ್ನೂ ಅರೆಸ್ಟ್ ಮಾಡಿಲ್ಲ, ವಿಚಾರಣೆ ಸಹ ಮಾಡಿಲ್ಲ. ಸೋನಿಯಾ ಗಾಂಧಿಯವರು ಈಗ ವಿಚಾರಣೆ ಎದರಿಸುತ್ತಿದ್ದಾರೆ. ಅವರ ಜೊತೆಗೆ ಕಾಂಗ್ರೆಸ್ ಪಕ್ಷ ಇದೆ. ನ್ಯಾಷನಲ್ ಹೆರಾಲ್ಡ್ಅನ್ನು ಸೋನಿಯಾ ಗಾಂಧಿ ಸ್ವಂತ ಆಸ್ತಿಯಂದು ಹೇಳಿಲ್ಲ. ನಮ್ಮ ನಾಯಕರಿಗೆ ಕಿರುಕುಳ ಕೊಟ್ಟು ಜೈಲಿಗೆ ಹಾಕಲಿ. ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿದ್ದ ಮಹಿಳೆಗೆ ಕಿರುಕುಳ ಕೊಡ್ತಿದ್ದಾರೆ. ಯಾವ ಆಸ್ತಿ ಮಾಡಿಕೊಂಡಿದ್ದಾರೆ?.. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದರು.
ಸಂವಿಧಾನದ ತಂದು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಪ್ರಜಾಪ್ರಭುತ್ವ ಕಾರಣದಿಂದ ನೀವು ಪಿಎಂ ಆಗಿದ್ದೀರಾ. ಕಟ್ಟಿದ ಸಂಸ್ಥೆಗಳನ್ನ ಒಡೆದು ಹಾಕುತ್ತೀದ್ದೀರಾ. ಇವಾಗ ಪ್ರತಿಭಟನೆ ಮಾಡ್ತಿರೋರು ಜೈಲಿಗೆ ಹೋಗಿ ಬಂದವ್ರು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಡಿಕೆಶಿ, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಅವನು ಯಾವಾನಾದ್ರು ಏನಾದರೂ ಮಾತಾಡಿಕೊಳ್ಳಲಿ. ಮಹಾತ್ಮ ಗಾಂಧೀಜಿ ಜೈಲಿಗೆ ಹೋಗವ್ರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಹೋಗವ್ರೆ, ನೆಹರು ಹೋಗವ್ರೆ. ನಾವು ಏನು ಮಂಚಕ್ಕಾಗಿ ಜೈಲಿಗೆ ಹೋಗಿದ್ವಾ..? ಅಥವಾ ಇನ್ನೊಂದಕ್ಕೆ ಹೋಗಿದ್ವಾ..? ಎಂದು ಪ್ರಶ್ನಿಸಿದರು.
ಓದಿ: ಸೋನಿಯಾ ವಿಚಾರಣೆಗೆ ಕಾಂಗ್ರೆಸ್ ವಿರೋಧ: ರಾಹುಲ್ ಧರಣಿ, ಡಿಕೆಸು ಪೊಲೀಸ್ ವಶಕ್ಕೆ