ETV Bharat / state

ನಕಲಿ ಭದ್ರತೆ ನೀಡಿದ್ದ ಆರೋಪಿ ವಿರುದ್ಧ ಬೆಂಗಳೂರು ಸಿಟಿ ಕೋರ್ಟ್​ನಿಂದ ದೂರು - ನಕಲಿ ಭದ್ರತೆ

ನಕಲಿ ಭದ್ರತೆ ನೀಡಿದ ಆರೋಪಿ ವಿರುದ್ಧ ನಗರ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ದೂರು ನೀಡಿದೆ.

ಬೆಂಗಳೂರು ಕೋರ್ಟ್
ಬೆಂಗಳೂರು ಕೋರ್ಟ್
author img

By

Published : Oct 22, 2022, 9:27 PM IST

ಬೆಂಗಳೂರು: ನಕಲಿ ಭದ್ರತೆ ನೀಡಿರುವ ಕೆ.ಜಿ.ನಾಗಭೂಷಣ್​ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ನಗರ ಸಿಟಿ ಸಿವಿಲ್ ಮತ್ತು ಸೆಷನ್ಸ್​​ ನ್ಯಾಯಾಲಯದ ಸಹಾಯಕ ರಿಜಿಸ್ಟ್ರಾರ್​ ಅವರು ಹಲಸೂರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಕೋಣನಗುಂಟೆ ಗ್ರಾಮದ ಕೆ.ಜಿ.ನಾಗಭೂಷಣ್ ಅವರ ವಿರುದ್ಧ ಎನ್ಐಎ ವಿಶೇಷ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೂರು ನೀಡಲಾಗಿದೆ. ಭಯೋತ್ಪಾದನಾ ಆರೋಪದಲ್ಲಿ ಬಂಧಿಯಾಗಿರುವ ಕೋಲಾರದ ರಹಮತ್ ನಗರದ ನಿವಾಸಿ ಸಲೀಂ ಖಾನ್ ಎಂಬುವರಿಗೆ ಕರ್ನಾಟಕ ಹೈಕೋರ್ಟ್ 2 ಲಕ್ಷ ರೂಪಾಯಿ ಮೌಲ್ಯದ ಭದ್ರತೆ ಒಳಗೊಂಡು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಪ್ರಕರಣದಲ್ಲಿ ಷರತ್ತುಗಳ ಭಾಗವಾಗಿ ಸಲೀಂ ಖಾನ್ ಪರವಾಗಿ ನಾಗಭೂಷಣ್ ಅವರು ಭದ್ರತೆ ನೀಡಿದ್ದರು. 10 ಲಕ್ಷ ರೂಪಾಯಿ ಬೆಲೆ ಬಾಳುವ ಸರ್ವೇ ನಂ. 158/3ರಲ್ಲಿ 13 ಗುಂಟೆ ಜಮೀನನ್ನು ಭದ್ರತೆಯಾಗಿ ನೀಡಿದ್ದರು.

ಈ ಜಮೀನಿನ ಖಾತೆಯ ಕುರಿತಂತೆ ನೈಜತೆಯನ್ನು ಪರಿಶೀಲಿಸುವಂತೆ ಮುಳಬಾಗಿಲಿನ ಸಬ್ ರಿಜಿಸ್ಟ್ರಾರ್ ಅವರಿಗೆ ನ್ಯಾಯಾಲಯವು ಪತ್ರ ಬರೆದಿತ್ತು. ಇದನ್ನು ಪರಿಶೀಲಿಸಿದ್ದ ಸಬ್ ರಿಜಿಸ್ಟ್ರಾರ್ ಅವರು ನಾಗಭೂಷಣ್ ಅವರು ಮತ್ತೊಂದು ನ್ಯಾಯಾಲಯದಲ್ಲಿ ಬೇರೊಬ್ಬರು ಆರೋಪಿಗೆ ಇದೇ ಜಮೀನಿನ ಭದ್ರತೆ ನೀಡಿದ್ದಾರೆ ಎಂದು ವರದಿ ಸಲ್ಲಿಸಿದ್ದರು.

ಈ ಮಾಹಿತಿಯನ್ನು ದಾಖಲಿಸಿಕೊಂಡಿದ್ದ ನ್ಯಾಯಾಲಯ, ನಕಲಿ ಶ್ಯೂರಿಟಿದಾರರು ಈ ಹಿಂದೆ ನಡೆದ ಘಟನೆಯ ಮಾಹಿತಿಯನ್ನು ಮರೆಮಾಚಿ ಸರ್ಕಾರವನ್ನು ದಾರಿ ತಪ್ಪಿಸಲು ಪ್ರಯತ್ನಿಸಿದ್ದಾರೆ. ಅಲ್ಲದೇ, ಕಾನೂನು ಪ್ರಕ್ರಿಯೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹೀಗಾಗಿ, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ವಿವರಿಸಿದ್ದಾರೆ.

(ಓದಿ: 10,889 ಮಸೀದಿ ಸೇರಿ ರಾಜ್ಯದಲ್ಲಿ ಒಟ್ಟು 17,850 ಧ್ವನಿವರ್ಧಕಗಳ ಬಳಕೆಗೆ ಗೃಹ ಇಲಾಖೆ ಅನುಮತಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.