ETV Bharat / state

ಗುತ್ತಿಗೆದಾರರ ಋಣ ತೀರಿಸಲು ಕಾಂಗ್ರೆಸ್​​-ಜೆಡಿಎಸ್​ ಮುಂದಾಗಿವೆ: ಬಿಜೆಪಿ ಆರೋಪ

author img

By

Published : Apr 27, 2019, 8:05 PM IST

ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತುರ್ತು ವಿಚಾರಗಳ ಚರ್ಚೆ ನಡೆಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಇಂದು ಮಾಸಿಕ ಕೌನ್ಸಿಲ್ ಸಭೆ ನಡೆಯಿತು. ಆದರೆ ತುರ್ತು ಕಾಮಗಾರಿ ಹೆಸರಲ್ಲಿ ಪಾಲಿಕೆ ಮೈತ್ರಿ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿವೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ಪಾಲಿಕೆ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪಾಲಿಕೆಯಲ್ಲಿ ಪಕ್ಷ-ಪಕ್ಷಗಳ ನಡುವೆ ಯೋಜನೆ, ಕಾಮಗಾರಿಗಳ ಕುರಿತ ಆರೋಪ ಪ್ರತ್ಯಾರೋಪ ಶುರುವಾಗಿದೆ. ಪಾಲಿಕೆ ಆಡಳಿತ ಪಕ್ಷ, ಚುನಾವಣಾ ಸಮಯದಲ್ಲಿ ಪಡೆದ ಹಣದ ಋಣ ಸಂದಾಯಕ್ಕೆ ಹೊರಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತುರ್ತು ವಿಚಾರಗಳ ಚರ್ಚೆ ನಡೆಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಇಂದು ಮಾಸಿಕ ಕೌನ್ಸಿಲ್ ಸಭೆ ನಡೆಸಲಾಯಿತು. ಆದರೆ ತುರ್ತು ಕಾಮಗಾರಿ ಹೆಸರಲ್ಲಿ ಪಾಲಿಕೆ ಮೈತ್ರಿ ಆಡಳಿತ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿವೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ.

ಬೆಂಗಳೂರಿಗೆ ಇನ್ನು ಕೆಲವೇ ದಿನಗಳಲ್ಲಿ ಮಳೆಯಾಗಲಿದೆ. ತುರ್ತು ಕೆಲಸಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು. ಹೀಗಾಗಿ ಟೆಂಡರ್ ಕರೆದರೆ ವಿಳಂಬವಾಗಲಿದೆ. ನವ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕಿರುವುದರಿಂದ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್​ಐಡಿಎಲ್) ಗೆ 4,261 ಕೋಟಿ ರೂ. ಮೊತ್ತದ ವಾರ್ಡ್ ಮಟ್ಟದ ಕಾಮಗಾರಿಗಳನ್ನು ನೀಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಪಾಲಿಕೆ ಮಾಸಿಕ ಕೌನ್ಸಿಲ್ ಸಭೆ

ಆದ್ರೆ ಟೆಂಡರ್ ಕರೆಯದೆ, ಕೆಆರ್​​ಐಡಿಎಲ್​​ಗೆ ಸಾವಿರಾರು ಕೋಟಿ ರೂ. ಕಾಮಗಾರಿ ನೀಡುವ ಮೂಲಕ ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿವೆ. ಇದರಲ್ಲಿ ತುರ್ತು ಕೆಲಸಗಳು ಯಾವುದೂ ಇಲ್ಲ. ತುರ್ತಾಗಿ ಕೊಡಬೇಕಾಗಿದ್ದ ನೀರಿನ ಟ್ಯಾಂಕರ್​​ಗಳಿಗೆ ಕ್ರಮ ಕೈಗೊಂಡಿಲ್ಲ. ಆದರೆ ವಾರ್ಡ್ ಕೆಲಸಗಳಾದ ರಸ್ತೆ ಅಭಿವೃದ್ಧಿ, ಫುಟ್​​ಪಾತ್ ಅಭಿವೃದ್ಧಿ, ಚರಂಡಿ ಕಾಮಗಾರಿಗಳನ್ನು ಟೆಂಡರ್ ಕರೆಯದೆ ಕಾನೂನು ಬಾಹಿರವಾಗಿ ಕೆಆರ್​​ಐಡಿಎಲ್​​​ಗೆ ನೀಡುವ ಮೂಲಕ, ಚುನಾವಣೆ ಸಂದರ್ಭದಲ್ಲಿ ಪಕ್ಷಗಳು ಹಣ ಸಹಾಯ ಪಡೆದಿದ್ದ ಗುತ್ತಿಗೆದಾರರಿಗೆ ಋಣ ಸಂದಾಯ ಮಾಡಲು ಹೊರಟಿವೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದರು.

ಅಲ್ಲದೆ ವಿಶೇಷ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರು, ಕೋಡ್ ಆಫ್ ಕಂಡೆಕ್ಟ್ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲ ಎಂದು ಹೇಳಿದರೂ, ಕಾಂಗ್ರೆಸ್ ನಿಯಮ ಮೀರಿದೆ ಎಂದು ಆರೋಪಿಸಿದರು. ಇಷ್ಟೇ ಅಲ್ಲದೆ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ 400 ಕೋಟಿ ರೂಪಾಯಿಯ ಕಾಮಗಾರಿ ಟೆಂಡರ್​​ನಲ್ಲಿ ಬೃಹತ್ ಅವ್ಯವಹಾರ ನಡೆದಿದೆ ಎಂದು ಮಾಜಿ ಮೇಯರ್ ಶಾಂತಕುಮಾರಿ ಆರೋಪಿಸಿದರು‌.

ಇದಕ್ಕೆ ಉತ್ತರಿಸಿದ ಜಂಟಿ ಆಯುಕ್ತ ಚಿದಾನಂದ್, ಕೆಲಸ ಮಾಡದೇ 35 ಕೋಟಿ ರೂ. ಪೇಮೆಂಟ್ ಕೂಡಾ ಆಗಿದೆ. ಆದರೆ ಗುತ್ತಿಗೆದಾರ ಯಾರೆಂದು ಗೊತ್ತಿಲ್ಲ ಎಂದಾಗ ಪಕ್ಷಾತೀತವಾಗಿ ಕಾರ್ಪೋರೇಟರ್ಸ್ ಅಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದ್ರು. ಆದ್ರೆ ನಗರಾಭಿವೃದ್ಧಿ ಇಲಾಖೆಯ ಯೋಜನೆ ಆಗಿರೋದ್ರಿಂದ ಜೆಸಿಯವರಿಗೆ ಮಾಹಿತಿ ಇಲ್ಲ. ಯೋಜನಾ ವಿಭಾಗದ ಮುಖ್ಯ ಅಭಿಯಂತರರ ಬಳಿ ಮಾಹಿತಿ ಪಡೆದು ತನಿಖೆ ನಡೆಸಿ, ಗುತ್ತಿಗೆದಾರರು ಹಾಗೂ ತಪ್ಪಿತಸ್ಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಮೇಯರ್ ತಿಳಿಸಿದರು.

Intro:ಗುತ್ತಿಗೆದಾರರ ಋಣ ತೀರಿಸಲು ಕಾಂಗ್ರೆಸ್,ಜೆಡಿಎಸ್ ಮುಂದಾಗಿದೆ- ಬಿಜೆಪಿ ಆರೋಪ

ಬೆಂಗಳೂರು- ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಪಾಲಿಕೆಯಲ್ಲಿ ಪಕ್ಷ-ಪಕ್ಷಗಳ ನಡುವೆ ಯೋಜನೆ,ಕಾಮಗಾರಿಗಳ ಕುರಿತ ಆರೋಪ ಪ್ರತ್ಯಾರೋಪ ಶುರುವಾಗಿದೆ. ಪಾಲಿಕೆ ಆಡಳಿತ ಪಕ್ಷ, ಚುನಾವಣಾ ಸಮಯದಲ್ಲಿ ಪಡೆದ ಹಣದ ಋಣ ಸಂದಾಯಕ್ಕೆ ಹೊರಟಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಹಾಗಿದ್ರೆ ಇಂದಿನ ಕೌನ್ಸಿಲ್ ಸಭೆಯಲ್ಲಿ ನಿಜ್ವಾಗ್ಲೂ ನಡೆದಿದ್ದೇನು? ಇಲ್ಲಿದೆ ಡೀಟೇಲ್ಸ್..

ವಾ೧- ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ತುರ್ತು ವಿಚಾರಗಳ ಚರ್ಚೆ ನಡೆಸುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಇಂದು ಮಾಸಿಕ ಕೌನ್ಸಿಲ್ ಸಭೆ ನಡೆಸಲಾಯಿತು. ಆದ್ರೆ ತುರ್ತು ಕಾಮಗಾರಿ ಹೆಸರಲ್ಲಿ ಪಾಲಿಕೆ ಮೈತ್ರಿ ಆಡಳಿತ ಪಕ್ಷವಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿದೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸಿದೆ. ಹೌದು ಬೆಂಗಳೂರಿಗೆ ಇನ್ನು ಕೆಲವೇ ದಿನಗಳಲ್ಲಿ ಮಳೆಯಾಗಲಿದೆ, ತುರ್ತು ಕೆಲಸಗಳನ್ನು ಆದಷ್ಟು ಬೇಗ ಕೈಗೆತ್ತಿಕೊಳ್ಳಬೇಕು. ಹೀಗಾಗಿ ಟೆಂಡರ್ ಕರೆದ್ರೆ ವಿಳಂಬವಾಗಲಿದೆ. ನವ ಬೆಂಗಳೂರು ಯೋಜನೆಯ ಕಾಮಗಾರಿಗಳನ್ನು ತುರ್ತಾಗಿ ಮಾಡಬೇಕಿರೋದ್ರಿಂದ ರಾಜ್ಯ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ ಆರ್ ಐಡಿಎಲ್) ಗೆ 4261 ಕೋಟಿರುಪಾಯಿ ಮೊತ್ತದ ವಾರ್ಡ್ ಮಟ್ಟದ ಕಾಮಗಾರಿಗಳನ್ನು ನೀಡಲು ಕೌನ್ಸಿಲ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ನಿರ್ಧಾರವನ್ನು ಸರ್ಕಾರ ಕೈಗೊಳ್ಳುತ್ತದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಬೈಟ್- ಗಂಗಾಂಬಿಕೆ, ಮೇಯರ್, ಬಿಬಿಎಂಪಿ

ವಾ೨- ಆದ್ರೆ ಟೆಂಡರ್ ಕರೆಯದೆ, ಕೆಆರ್ ಐಡಿಎಲ್ ಗೆ ಸಾವಿರಾರು ಕೋಟಿ ರುಪಾಯಿಯ ಕಾಮಗಾರಿ ನೀಡಯವ ಮೂಲಕ ಕಾಂಗ್ರೆಸ್-ಜೆಡಿಎಸ್ ಭ್ರಷ್ಟಾಚಾರಕ್ಕೆ ಮುಂದಾಗಿದೆ. ಇದರಲ್ಲಿ ತುರ್ತು ಕೆಲಸಗಳು ಯಾವುದೂ ಇಲ್ಲ. ತುರ್ತಾಗಿ ಕೊಡಬೇಕಾಗಿದ್ದ ನೀರಿನ ಟ್ಯಾಂಕರ್ ಗಳಿಗೇ ಕ್ರಮಕೈಗೊಂಡಿಲ್ಲ. ಆದ್ರೆ ವಾರ್ಡ್ ಕೆಲಸಗಳಾದ ರಸ್ತೆ ಅಭಿವೃದ್ಧಿ, ಫುಟ್ ಪಾತ್ ಅಭಿವೃದ್ಧಿ, ಚರಂಡಿ ಕಾಮಗಾರಿಗಳನ್ನು ಟೆಂಡರ್ ಕರೆಯದೆ ಕಾನೂನು ಬಾಹಿರವಾಗಿ ಕೆಆರ್ಐಡಿಎಲ್ ಗೆ ನೀಡುವ ಮೂಲಕ, ಚುನಾವಣೆ ಸಂಧರ್ಭದಲ್ಲಿ ಪಕ್ಷಗಳು ಹಣ ಸಹಾಯ ಪಡೆದಿದ್ದ ಗುತ್ತಿಗೆದಾರರಿಗೆ ಋಣ ಸಂದಾಯ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದರು. ಅಲ್ಲದೆ ವಿಶೇಷ ಆಯುಕ್ತರಾದ ಮನೋಜ್ ಕುಮಾರ್ ಮೀನಾ, ಅವರು, ಕೋಡ್ ಆಫ್ ಕಂಡೆಕ್ಟ್ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳುವ ಹಾಗಿಲ್ಲದು ಹೇಳಿದರೂ, ಕಾಂಗ್ರೆಸ್ ನಿಯಮ ಮೀರಿದೆ ಎಂದು ಆರೋಪಿಸಿದರು.

ಬೈಟ್- ಪದ್ಮನಾಭ ರೆಡ್ಡಿ, ವಿಪಕ್ಷ ನಾಯಕ, ಬಿಬಿಎಂಪಿ

ವಾ೩- ಇಷ್ಟೇ ಅಲ್ಲದೆ ಗೋವಿಂದರಾಜನಗರ ಹಾಗೂ ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ 400 ಕೋಟಿ ರುಪಾಯಿಯ ಕಾಮಗಾರಿ ಟೆಂಡರ್ ನಲ್ಲಿ ಬೃಹತ್ ಅವ್ಯವಹಾರ ನಡೆದಿದೆ ಎಂದು ಮಾಜಿ ಮೇಯರ್ ಶಾಂತಕುಮಾರಿ ಆರೋಪಿಸಿದರು‌. ಇದಕ್ಕೆ ಉತ್ತರಿಸಿದ ಜಂಟಿ ಆಯುಕ್ತ ಚಿದಾನಂದ್ ಕೆಲಸ ಮಾಡದೇ 35 ಕೋಟಿ ರುಪಾಯಿ ಪೇಮೆಂಟ್ ಕೂಡಾ ಆಗಿದೆ. ಆದರೆ ಗುತ್ತಿಗೆದಾರ ಯಾರೆಂದು ಗೊತ್ತಿಲ್ಲ ಎಂದಾಗ ಪಕ್ಷಾತೀತವಾಗಿ ಕಾರ್ಪೋರೇಟರ್ಸ್ ಅಧಿಕಾರಿ ವಿರುದ್ಧ ವಾಗ್ಧಾಳಿ ನಡೆಸಿದ್ರು. ಆದ್ರೆ ನಗರಾಭಿವೃದ್ಧಿ ಇಲಾಖೆಯ ಯೋಜನೆ ಆಗಿರೋದ್ರಿಂದ ಜೆಸಿಯವರಿಗೆ ಮಾಹಿತಿ ಇಲ್ಲ, ಯೋಜನಾ ವಿಭಾಗದ ಮುಖ್ಯ ಅಭಿಯಂತರರ ಬಳಿ ಮಾಹಿತಿ ಪಡೆದು, ತನಿಖೆ ನಡೆಸಿ, ಗುತ್ತಿಗೆದಾರರು ಹಾಗೂ ತಪ್ಪಿತಸ್ಥ ಅಧಿಕಾರಿಯನ್ನು ಸಸ್ಪೆಂಡ್ ಮಾಡಲಾಗುವುದು ಎಂದು ಮೇಯರ್ ತಿಳಿಸಿದರು.
ಬೈಟ್- ಗಂಗಾಂಬಿಕೆ

ವಾ೪- ಇಷ್ಟೇ ಅಲ್ಲದೆ ನಗರದಲ್ಲಿ ಈಗಾಗಲೇ ಮರ ಬಿದ್ದು ಇಬ್ಬರು ಮೃತಪಟ್ಟಿರೋದ್ರಿಂದ, ಪಾಲಿಕೆ ಅರಣ್ಯ ಘಟಕದ ಅಧಿಕಾರಿ ಚೋಳರಾಜಪ್ಪ ಅವರನ್ನು ಕಾರ್ಪೋರೇಟರ್ಸ್ ತರಾಟೆಗೆ ತೆಗೆದುಕೊಂಡರು. ಸಿಬ್ಬಂದಿ ಕೊರತೆ, ಒಣಗಿದ ಮರ ಕಡಿಯಲು ಎನ್ ಜಿಒ ಗಳ ಅಡ್ಡಿ ಸಮಸ್ಯೆಗಳನ್ನು ಚೋಳರಾಜಪ್ಪ ಸಭೆಯ ಗಮನಕ್ಕೆ ತಂದ್ರು. ಆದ್ರೆ ಉತ್ತಮ ಮರವನ್ನೇ ಬಿಎಮ್ ಆರ್ ಸಿಎಲ್ ಗೆ ಕಡಿಯಲು ಅನುಮತಿ ನಿಒಡೊದ್ದನ್ನು ಪ್ರಶ್ನಿಸಿ, ಶಾಸಕಿ ಸೌಮ್ಯಾ ರೆಡ್ಡಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ವಾ೫- ಒಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣೆ ಮುಗಿದಿರೋದ್ರಿಂದ ಬಜೆಟ್ ನ ಯೋಜನೆಗಳ ಜಾರಿಗೂ ಕ್ರಮಕೈಗೊಳ್ಳಲಾಗ್ತಿದೆ. ಆದ್ರೆ ಯೋಜನೆಬಜಾರಿಯ ಹೆಸರಲ್ಲಿ ಬೃಹತ್ ಹಗರಣಗಳು ನಡೆಯುತ್ತಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಸೌಮ್ಯಶ್ರೀ ಮಾರ್ನಾಡ್, ಈಟಿ ಭಾರತ್, ಬೆಂಗಳೂರು

Body:KN_BNG_02_27_council_meeting_pkg_sowmya_7202707

Conclusion:KN_BNG_02_27_council_meeting_pkg_sowmya_7202707

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.