ETV Bharat / state

ಬೆಂಗಳೂರಿನ ಅಪಾರ್ಟ್​ಮೆಂಟ್ ಮೇಲೆ ಸೋಲಾರ್​.. ಉತ್ಪಾದನೆಯಾಗಲಿದೆ 354 ಕಿಲೋ ವ್ಯಾಟ್ ವಿದ್ಯುತ್​.. - ಅಪಾರ್ಟ್​ಮೆಂಟ್​ನಲ್ಲಿ ಸೌರವಿದ್ಯುತ್‌ ಅಳವಡಿಕೆ

ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ವರ್ಷಕ್ಕೆ ಉತ್ಪತ್ತಿಯಾಗುವ ಇಂಧನ 4.78 ಲಕ್ಷ ಯೂನಿಟ್​ಗಳಾಗಿದೆ. ಅಂದರೆ ಪ್ರಸ್ತುತ ಅಂದಾಜು ಬಳಕೆಯ ಶೇ.69ರವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕವಾಗಿ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಇದು ಸಹಾಯ ಮಾಡುತ್ತದೆ..

bengaluru-apartment-to-generate-354kw-electricity
ಬೆಂಗಳೂರಿನ ಅಪಾರ್ಟ್​ಮೆಂಟ್ ಮೇಲೆ ಸೋಲಾರ್​... ಉತ್ಪಾದನೆಯಾಗಲಿದೆ 354 ಕಿಲೋ ವ್ಯಾಟ್ ವಿದ್ಯುತ್​
author img

By

Published : Oct 9, 2021, 6:11 PM IST

Updated : Oct 9, 2021, 11:05 PM IST

ಬೆಂಗಳೂರು : ಅತಿದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ಯಶವಂತಪುರದ ಬಳಿಯಿರುವ ಬ್ರಿಗೇಡ್ ಗೇಟ್ ವೇ ಅಪಾರ್ಟ್​ಮೆಂಟ್​ ಮಾಲೀಕರ ಸಂಘ (BGAOA) ತನ್ನ 1,255 ಫ್ಲಾಟ್​​ಗಳಿರುವ 13 ಟವರ್​ಗಳಿಗೆ ಬೃಹತ್‌ ಸೌರಫಲಕಗಳ‌ನ್ನು ಅಳವಡಿಸಿದೆ.

ಈ ಮೂಲಕ ಶೇ.69ರಷ್ಟು ವಿದ್ಯುಚ್ಛಕ್ತಿಯನ್ನು ಉಳಿತಾಯ ಮಾಡಿದಂತಾಗುತ್ತದೆ. ನವೀಕರಿಸಬಹುದಾದ ಇಂಧನ ಮೂಲ ಸೌರವಿದ್ಯುತ್‌ ಅಳವಡಿಕೆ ಕಾರ್ಯಕ್ರಮವನ್ನು ಸಚಿವ ಅಶ್ವತ್ಥ್ ನಾರಾಯಣ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಬ್ರಿಗೇಡ್ ಗೇಟ್‌ವೇನವರು ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಪ್ರಕೃತಿಯನ್ನು ಕಾಪಾಡುವುದು, ನೀರಿನ ಮರುಬಳಕೆ, ಕಸದ ನಿರ್ವಹಣೆ ಮಾಡುತ್ತಿದ್ದಾರೆ.

ಅದಲ್ಲದೆ ಇದೀಗ ಕರೆಂಟ್ ಉತ್ಪಾದನೆ ಕೂಡ ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ. ಇಂಡಿಯಾದಲ್ಲಿ ಅತಿ ಹೆಚ್ಚು ಕರೆಂಟ್ ಉತ್ಪಾದನೆ ಮಾಡುತ್ತಿರುವ ಅಪಾರ್ಟ್​ಮೆಂಟ್ ಇದು. 354.4 ಕಿಲೋ ವ್ಯಾಟ್ ವಿದ್ಯುತ್​ ಉತ್ಪಾದನೆ ಮಾಡುತ್ತಿದ್ದಾರೆ. ಬಹುಮಹಡಿಯ ಕಟ್ಟಡದಲ್ಲಿ ಈ ರೀತಿಯ ಸೋಲಾರ್ ಸ್ಥಾಪಿಸಿದ್ದಾರೆ ಎಂದು ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನ : ರೆನ್‌ಎಕ್ಸ್‌ಸೋಲ್‌ ಇಕೋಟೆಕ್‌ (RenXSol Ecotech Pvt. Ltd) ಸಂಸ್ಥೆ ಇದನ್ನು ನಿರ್ಮಿಸಿದೆ. ಈ ಮೊದಲು ಚಿನ್ನಸ್ವಾಮಿ ಸ್ಟೇಡಿಯಂಗೂ ಇದೇ ಸಂಸ್ಥೆ ಅಳವಡಿಸಿತ್ತು. ಬೆಂಗಳೂರಿನ ಗ್ರೀನ್ ಇನಿಶಿಯೇಟಿವ್ ಅಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು 25 ವರ್ಷಗಳ ದೀರ್ಘ ಬಾಳಿಕೆ ಬರಬಹುದಾದ ಸೋಲಾರ್‌ ಇನ್ವರ್ಟರ್‌ಗಳು ಮತ್ತು ಸೌರ ಫಲಕಗಳನ್ನು ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಪ್ಲಾಂಟ್‌ ಮಾಡಲಾಗಿದೆ.

ಬೆಂಗಳೂರಿನ ಅಪಾರ್ಟ್​ಮೆಂಟ್ ಮೇಲೆ ಸೋಲಾರ್​.. ಉತ್ಪಾದನೆಯಾಗಲಿದೆ 354 ಕಿಲೋ ವ್ಯಾಟ್ ವಿದ್ಯುತ್​..

ರೆನ್ಎಕ್ಸ್‌ಸೋಲ್ ಇಕೋಟೆಕ್‌ ಸಂಸ್ಥೆಯ ಎಂಡಿ ಶ್ರೀನಿವಾಸ್ ಕುಮಾರ್ ಮಾತನಾಡಿ, ಬ್ರಿಗೇಟ್ ಗೇಟ್ ವೇ ಅಪಾರ್ಟ್​ಮೆಂಟ್ ಅಸೋಸಿಯೇಷನ್ ಪರಿಸರಸ್ನೇಹಿ ಆಗಿರುವುದಕ್ಕೆ ಸಮರ್ಥ ಕ್ರಮ ಕೈಗೊಂಡಿದ್ದಾರೆ. ಬೆಂಗಳೂರು ಅಪಾರ್ಟ್​ಮೆಂಟ್ ಅಸೋಸಿಯೇಷನ್ ಅಡಿ 1,000 ಅಪಾರ್ಟ್​ಮೆಂಟ್​​ಗಳಿವೆ.

ಎಲ್ಲರಿಂದ ಬಹಳಷ್ಟು ವಿದ್ಯುತ್ ಬಳಕೆಯಾಗುತ್ತದೆ. ಒಂದೊಂದು ಅಪಾರ್ಟ್​ಮೆಂಟ್ ಕೂಡ ಈ ರೀತಿ ಕಾಮನ್ ಏರಿಯಾ ಬಳಕೆಗೆ ಸರ್ಕಾರದ ನಿಯಮಗಳನ್ನು ಪಾಲಿಸಿ ಸೋಲಾರ್ ಪವರ್ ಬಳಸಿದರೆ ಶೇ.69ರಷ್ಟು ವಿದ್ಯುತ್ ಉಳಿತಾಯ ಮಾಡಬಹುದು ಎಂದು ಹೇಳಿದರು.

ಎಲೆಕ್ಟ್ರಿಸಿಟಿ ಯೂನಿಟ್ ಬಳಕೆ ಕಡಿಮೆ : ​ವಿದ್ಯುತ್ ಬಿಲ್ ಉಳಿತಾಯ ಅಲ್ಲದೆ, ಕಾರ್ಬನ್ ಹೊರಸೂಸುವಿಕೆಯನ್ನು ಸೋಲಾರ್ ಕಡಿಮೆ ಮಾಡಲಿದೆ. ಜೊತೆಗೆ ಉಳಿತಾಯ ಮಾಡಿದ ವಿದ್ಯುತ್ ರೈತರಿಗೆ, ಬೇರೆ ಜನರಿಗೆ ಬಳಕೆಯಾಗಲಿದೆ. ಸೋಲಾರ್ ಸಿಸ್ಟಂ ಬಳಕೆಯಿಂದ ಎಲೆಕ್ಟ್ರಿಸಿಟಿ ಯೂನಿಟ್ ಬಳಕೆ ಬಹಳಷ್ಟು ಕಡಿಮೆ ಮಾಡಬಹುದು.

ಒಮ್ಮೆ ಅಳವಡಿಸಿದ ನಾಲ್ಕೈದು ವರ್ಷದೊಳಗೆ ಇದರ ಬೆಲೆ ಬಂದು ಬಿಡುತ್ತದೆ. ಇದು ಬೆಂಗಳೂರು ಮೂಲದ ಸಂಸ್ಥೆಯಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂ, ಐಟಿಪಿಎಲ್ ಮೊದಲಾದ ಕಡೆ ಈಗಾಗಲೇ ಅಳವಡಿಸಲಾಗಿದೆ ಎಂದು ಶ್ರೀನಿವಾಸ್ ತಿಳಿಸಿದರು.

ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ವರ್ಷಕ್ಕೆ ಉತ್ಪತ್ತಿಯಾಗುವ ಇಂಧನ 4.78 ಲಕ್ಷ ಯೂನಿಟ್​ಗಳಾಗಿದೆ. ಅಂದರೆ ಪ್ರಸ್ತುತ ಅಂದಾಜು ಬಳಕೆಯ ಶೇ.69ರವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕವಾಗಿ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಇದು ಸಹಾಯ ಮಾಡುತ್ತದೆ ಎಂದರು.

ಇದನ್ನೂ ಓದಿ: ಸಿಂದಗಿ ಉಪ ಚುನಾವಣೆ: ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಕೋಟ್ಯಧಿಪತಿಗಳು!

Last Updated : Oct 9, 2021, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.