ಕೇಂದ್ರ ಸರ್ಕಾರ ಸ್ವಾಮ್ಯದ ಭಾರತ್ ಅರ್ಥ್ ಮೂವರ್ ಲಿಮಿಟೆಡ್‌ನಲ್ಲಿ (ಬಿಇಎಂಎಲ್) ಖಾಲಿ ಇರುವ ಗ್ರೂಪ್ ಸಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 119 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಸಂಸ್ಥೆಯ ಉತ್ಪಾದನಾ ಘಟಕ ಮತ್ತು ಮಾರ್ಕೆಟಿಂಗ್ ವಲಯಗಳಿಗೆ ನೇಮಕಾತಿ ನಡೆಯುತ್ತದೆ.
ಹುದ್ದೆಗಳ ವಿವರ:
- ಡಿಪ್ಲೋಮಾ ಟ್ರೈನಿ ಮೆಕಾನಿಕಲ್ - 52
- ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್- 27
- ಡಿಪ್ಲೋಮಾ ಟ್ರೈನಿ ಸಿವಿಲ್ - 7
- ಐಟಿಐ ಟ್ರೈನಿ ಮೆಕಾನಿಸ್ಟ್ - 16
- ಐಟಿಐ ಟ್ರೈನಿ ಟ್ಯೂನರ್ - 16
- ಸ್ಟಾಫ್ ನರ್ಸ್ -1
ವಿದ್ಯಾರ್ಹತೆ:
- ಡಿಪ್ಲೋಮಾ ಟ್ರೈನಿ ಮೆಕಾನಿಕಲ್ - ಮೆಕಾನಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
- ಡಿಪ್ಲೋಮಾ ಟ್ರೈನಿ ಎಲೆಕ್ಟ್ರಿಕಲ್ - ಎಲೆಕ್ಟ್ರಿಕಲ್ ಎಂಜಿನಿಯರಿಂಗ್ನಲ್ಲಿ ಡಿಪ್ಲೋಮಾ
- ಡಿಪ್ಲೋಮಾ ಟ್ರೈನಿ ಸಿವಿಲ್ - ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾ
- ಐಟಿಐ ಟ್ರೈನಿ ಮೆಕಾನಿಸ್ಟ್ - ಐಟಿಐ
- ಐಟಿಐ ಟ್ರೈನಿ ಟ್ಯೂನರ್ - ಐಟಿಐ
- ಸ್ಟಾಫ್ ನರ್ಸ್ - ಬಿಎಸ್ಸಿ ನರ್ಸಿಂಗ್ ಅಥವಾ ನರ್ಸಿಂಗ್ ಮತ್ತು ಮಿಡ್ವೈಫ್ನಲ್ಲಿ ಡಿಪ್ಲೊಮಾ
ವಯೋಮಿತಿ: ಸ್ಟಾಫ್ ನರ್ಸ್ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಗರಿಷ್ಟ ವಯೋಮಿತಿ 29 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
ಸ್ಟಾಫ್ ನರ್ಸ್ಗೆ ಗರಿಷ್ಠ ವಯೋಮಿತಿ 30 ವರ್ಷ. ಹಿಂದುಳಿದ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಹಿಂದುಳಿದ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕ ಭರಿಸಬೇಕಿದೆ. ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ. ಸೆಪ್ಟೆಂಬರ್ 29ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 18 ಕಡೇಯ ದಿನಾಂಕ. ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅರ್ಜಿ ಭರ್ತಿಗೆ bemlindia.in. ಇಲ್ಲಿಗೆ ಭೇಟಿ ನೀಡಿ.
ಇದನ್ನೂ ಓದಿ: ಆರ್ಬಿಐನಲ್ಲಿ ನೇಮಕಾತಿ; 450 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ