ETV Bharat / state

ಕುಂದಾಗೆ 'ಕೇಸರಿ'.. ತಾವರೆ-ತೆನೆಯೇ ಕಲ್ಯಾಣ, ಹು-ಧಾಕ್ಕೆ ರೆಬೆಲ್ 'ಸ್ಟಾರ್ಸ್'!!

author img

By

Published : Sep 6, 2021, 11:29 PM IST

Updated : Sep 7, 2021, 3:07 PM IST

ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಬೆಳಗಾವಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಏರಲಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಿದೆ.

Belgaum local election  results announced
ಬೆಳಗಾವಿ ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ

ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಬೆಳಗಾವಿಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಪಾಲಿಕೆ ಗದ್ದುಗೆ ಏರಲಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿಯಲ್ಲಿ ಅತಂತ್ರ ಸ್ಥಿತಿ ಇದ್ದರೂ ಅಲ್ಲೂ ಅಧಿಕಾರಕ್ಕೇರುವ ಉಮೇದಿನಲ್ಲಿದೆ ಕೇಸರಿ ಪಡೆ.

ಎರಡೂವರೆ ದಶಕದ ನಂತರ ಮೊಟ್ಟ ಮೊದಲ ಬಾರಿಗೆ ಕುಂದಾನಗರಿಯಲ್ಲಿ ಎಂಇಎಸ್ ಪುಂಡಾಟಕ್ಕೆ ಮತದಾರ ತಕ್ಕ ಉತ್ತರವನ್ನೇ ಕೊಟ್ಟಿದಾನೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷದ ಚಿಹ್ನೆ ಮೇಲೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಮುಖಂಡರು ಕಮಲ ಅರಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೂರ್ಣ ಬಹುಮತ ಪಡೆಯುವ ಮೂಲಕ ಕೇಸರಿ ಪಡೆ ಬೆಳಗಾವಿ ಮಹಾನಗರ ಪಾಲಿಕೆಯ ಗದ್ದುಗೆ ಏರಿದೆ. 58 ವಾರ್ಡ್‍ಗಳ ಪೈಕಿ 55ರಲ್ಲಿ ಸ್ಪರ್ಧಿಸಿದ್ದ ಬಿಜೆಪಿ 35 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸಾಮೂಹಿಕ ನಾಯಕತ್ವ ಹಾಗೂ ಚುನಾವಣೆಯ ತಂತ್ರಗಾರಿಕೆಯ ಮೂಲಕ ಎಂಇಎಸ್‍ಗೆ ಠಕ್ಕರ್ ಕೊಟ್ಟಿರುವ ಕಮಲ ನಾಯಕರು ಇತ್ತ ಕಾಂಗ್ರೆಸ್ ನ ನೆಲಕಚ್ಚುವಂತೆ ಮಾಡುವಲ್ಲೂ ಯಶಸ್ವಿಯಾಗಿದ್ದಾರೆ.

ಮತದಾರನ ಸಾತ್ವಿಕ ಸಿಟ್ಟು:

ನಾಡದ್ರೋಹಿ ಎಂಇಎಸ್‍ನ ಮನೆಗೆ ಕಳಿಸುವಲ್ಲಿ ಬಿಜೆಪಿ ತಂತ್ರಗಳನ್ನ ಹೆಣೆದಿತ್ತು. ಅದರಲ್ಲಿ ಬಿಜೆಪಿ ಯಶಸ್ವಿಯಾಗಿದೆ. 58 ವಾರ್ಡ್‍ಗಳಲ್ಲಿ 35 ಬಿಜೆಪಿ, 46 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 10ರಲ್ಲಷ್ಟೇ ಗೆಲುವು ಸಾಧಿಸಿದೆ. 21 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಎಂಇಎಸ್ 2 ಸ್ಥಾನ, 6 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದ ಎಐಎಂಐಎಂ 1 ಹಾಗೂ 12 ಪಕ್ಷೇತರ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಆಪ್ ಹಾಗೂ ಜೆಡಿಎಸ್ ಶೂನ್ಯ ಸಾಧನೆ ಮಾಡಿವೆ.

ಪಾಲಿಕೆ ಚುನಾವಣೆ ಫಲಿತಾಂಶ ಪ್ರಕಟ

ಗದ್ದುಗೆ ಏರಲು ಕಾಂಗ್ರೆಸ್​ಗೆ ಅಸಾಧ್ಯ:

ಇಲ್ಲಿ 32 ಮ್ಯಾಜಿಕ್ ನಂಬರ್ ಆಗಿದೆ. ಆದರೆ, ಬಿಜೆಪಿ 35 ಸ್ಥಾನ ಗಳಿಸಿದೆ. ಮೇಯರ್ ಹಾಗೂ ಉಪಮೇಯರ್ ಆಯ್ಕೆ ವೇಳೆ ಮತಚಲಾಯಿಸುವ ಹಕ್ಕು ಹೊಂದಿರುವ ನಾಲ್ವರು ಶಾಸಕರ ಪೈಕಿ ಇಬ್ಬರು ಬಿಜೆಪಿಯವರಾಗಿದ್ದಾರೆ. ಇನ್ನು, ಬೆಳಗಾವಿ ಹಾಗೂ ಚಿಕ್ಕೋಡಿ ಸಂಸದರು ಬಿಜೆಪಿಯವರೇ ಆಗಿದ್ದಾರೆ. 36 ಸದಸ್ಯರ ಜೊತೆಗೆ ಈ ನಾಲ್ಕು ಮತಗಳು ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲಿರುವ ಬಿಜೆಪಿ ಅಭ್ಯರ್ಥಿಗೆ ಬೀಳಲಿವೆ.

ಲೋಕಸಭೆ ಉಪಚುನಾವಣೆಗೂ ಮುನ್ನವೇ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯನ್ನು ಪಕ್ಷದ ಚಿಹ್ನೆ ಮೇಲೆ ಎದುರಿಸುವುದಾಗಿ ಬಿಜೆಪಿ ಘೋಷಿಸಿತ್ತು. ಬಳಿಕ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ನೀರಸ ಗೆಲುವಿನಿಂದ ಕಂಗೆಟ್ಟಿದ್ದ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಎಂಇಎಸ್ ಅಭ್ಯರ್ಥಿಗಳ ವಿರುದ್ಧ ಮರಾಠಾ ಸಮುದಾಯದ ಅಭ್ಯರ್ಥಿಗಳನ್ನೇ ಬಿಜೆಪಿ ಕಣಕ್ಕಿಳಿಸಿತ್ತು. ಈ ತಂತ್ರಗಾರಿಕೆ ಬಿಜೆಪಿಗೆ ವರವಾಗಿ ಪರಣಮಿಸಲು ಕಾರಣವಾಯಿತು.

ಬಿರುಸಿನ ಪೈಪೋಟಿ ನೀಡುವಲ್ಲಿ ಬಿಜೆಪಿ ಯಶಸ್ವಿ:

ಕಲಬುರಗಿ ಮಹಾನಗರ ಪಾಲಿಕೆಯ ಕಾಂಗ್ರೆಸ್ ಭದ್ರಕೋಟೆ ಒಡೆದು ಬಿರುಸಿನ ಪೈಪೋಟಿ ನೀಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. 55 ವಾರ್ಡ್​ ಹೊಂದಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 27 ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ರೆ, ಬಿಜೆಪಿ 23 ಸ್ಥಾನ ಮತ್ತು ಜೆಡಿಎಸ್ 4 ವಾರ್ಡ್​ಗಳಲ್ಲಿ ವಿಜಯದ ಪತಾಕೆ ಹಾರಿಸಿದೆ. ಆದ್ರೆ, ಮ್ಯಾಜಿಕ್ ಸಂಖ್ಯೆ 28 ಇದ್ದು, ಯಾವುದೇ ಪಕ್ಷ ಈ ಸಂಖ್ಯೆ ತಲುಪುವಲ್ಲಿ ಯಶಸ್ವಿಯಾಗಿಲ್ಲ. ಕಾರಣ 4 ಸ್ಥಾನ ಪಡೆದಿರುವ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.

ಜೆಡಿಎಸ್ 4, ಒಂದು ಎಂಪಿ, ಮೂವರು ಎಂಎಲ್​ಎ ಹಾಗೂ ಇಬ್ಬರು ವಿಧಾನ ಪರಿಷತ್ ಸದಸ್ಯರ ಬೆಂಬಲ ಪಡೆದು ಬಿಜೆಪಿ ಅಧಿಕಾರ ರಚನೆಗೆ ಕಸರತ್ತು ಮಾಡಬಹುದು. ಜೆಡಿಎಸ್ ಒಂದು ವೇಳೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ರೆ 31 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರ ರಚನೆ ಮಾಡಲಿದೆ. ಆದ್ರೆ, ಜೆಡಿಎಸ್ ಬೆಂಬಲ ಯಾರಿಗೆ ಸಿಗಲಿದೆ ನೋಡಬೇಕಿದೆ.

ಯಾವುದೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಮತದಾರ ಪ್ರಭು ಯಾವುದೊಂದು ಪಕ್ಷಕ್ಕೂ ಸ್ಪಷ್ಟ ಬಹುಮತ ನೀಡಿಲ್ಲ. ಆಡಳಿತ-ಪ್ರತಿಪಕ್ಷಗಳ ವಿರುದ್ಧವೂ ಮತದಾರನ ಸಾತ್ವಿಕ ಸಿಟ್ಟು ಈ ಫಲಿತಾಂಶದಲ್ಲಿ ಕಾಣಿಸ್ತಿದೆ. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 39 ಸ್ಥಾನಗಳಿಗೆ ತೃಪ್ತಿಪಟ್ಟರೆ, ಕಾಂಗ್ರೆಸ್ 33 ಸ್ಥಾನಗಳಲ್ಲಿ 'ಕೈ'ಯೂರಲು ಸಾಧ್ಯವಾಗಿದೆ. ಮೇಯರ್ ಗದ್ದುಗೆ ಏರಲು 45 ಅಭ್ಯರ್ಥಿಗಳ ಬೆಂಬಲಬೇಕು. ಮೇಯರ್ ಆಯ್ಕೆಯಲ್ಲಿ ಮತದಾನ ಮಾಡುವ ವಿಶೇಷ ಹಕ್ಕು ಜನಪ್ರತಿನಿಧಿಗಳು ಹೊಂದಿದಾರೆ.

ಬಿಜೆಪಿಯ 5 ಜನಪ್ರತಿನಿಧಿಗಳು ಸೇರಿದರೂ ಕಮಲ ಪಕ್ಷಕ್ಕೆ 45ರ ಮ್ಯಾಜಿಕ್ ನಂಬರ್ ತಲುಪಲು ಒಂದು ಸ್ಥಾನದ ಕೊರತೆ ಇದೆ. ಹೀಗಾಗಿ, ಬಿಜೆಪಿಯ ಮೂವರು ಬಂಡಾಯ ಅಭ್ಯರ್ಥಿಗಳು ಸೇರಿ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಯವರನ್ನು ತನ್ನತ್ತ ಸೆಳೆದುಕೊಂಡರೇ ಮಾತ್ರ ಬಿಜೆಪಿ ಅಧಿಕಾರ ಗಿಟ್ಟಿಸಿ, ಹ್ಯಾಟ್ರಿಕ್ ಸಾಧಿಸಲು ಸಾಧ್ಯ. ಕಾಂಗ್ರೆಸ್ ಹರಸಾಹಸಪಟ್ಟರೂ ಸಹ ಗದ್ದುಗೆ ಏರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ 33 ಸ್ಥಾನಗಳಿಸಿದ್ದರೇ ಎಐಎಂಐಎಂನ 3, ಜೆಡಿಎಸ್1, ಎರಡು ವಿಶೇಷ ಜನಪ್ರತಿನಿಧಿಗಳ ಮತ, ಮೂವರು ತಮ್ಮದೇ ಪಕ್ಷದ ಬಂಡಾಯಗಾರರನ್ನು ಸೇರಿಸಿದರೂ 42 ಸ್ಥಾನ ಆಗುತ್ತವೆ. ಹೀಗಾಗಿ, ಈ ಬಾರಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ಗಿರಿ ಕಾಂಗ್ರೆಸ್ ಕೈ ತಪ್ಪಲಿದೆ.

ಕುಂದಾನಗರಿಯಲ್ಲಿ ಮುಖಭಂಗ ಅನುಭವಿಸಿರುವ ಕಾಂಗ್ರೆಸ್​, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡ ಪಾಲಿಕೆಗಳಲ್ಲಿ ಮ್ಯಾಜಿಕ್ ನಂಬರ್​ ತಲುಪಲು ಸಾಧ್ಯವಾಗಿಲ್ಲ. ಈಗಾಗಲೇ ಮೂರು ಮಹಾನಗರ ಪಾಲಿಕೆಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಹಂಚಿಕೆಯಾಗಿದೆ. ಈಗ ಯಾರು ಪ್ರಥಮ ಮತ್ತು ದ್ವಿತಿಯ ಪ್ರಜೆಯ ಗೌನ್ ಧರಿಸೋರು ಅನ್ನೋ ಲೆಕ್ಕಾಚಾರವೂ ಈ ಮೂರು ಮಹಾನಗರ ಪಾಲಿಕೆಗಳಲ್ಲಿ ಜೋರಾಗಿ ನಡೀತಿದೆ.

Last Updated : Sep 7, 2021, 3:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.