ETV Bharat / state

ಬೇಗೂರು ವಾರ್ಡ್ ಕಂಟೈನ್ಮೆಂಟ್ ತೆರವು.. ಪೊಲೀಸ್ ಪೇದೆ ಕುಟುಂಬದಿಂದ ಅಧಿಕಾರಿಗಳಿಗೆ ತರಾಟೆ..

ಬೇಗೂರು ವಾರ್ಡ್​ನ ಪೊಲೀಸ್ ಪೇದೆ ರಿಪೋರ್ಟ್ ನೆಗೆಟಿವ್ ಕೇಸ್ ಬಂದ ಹಿನ್ನಲೆ ಪೇದೆಯ ಸಂಪರ್ಕದ 2 ಪ್ರೈಮರಿ ಹಾಗೂ 11 ಸೆಕಂಡರಿ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ಕ್ವಾರಂಟೈನ್ ಮುಕ್ತ ಮಾಡಲಾಗಿದೆ.

ಕೊರೊನಾ
corona
author img

By

Published : May 7, 2020, 3:34 PM IST

ಬೆಂಗಳೂರು : ಕೋವಿಡ್-19 ಪರೀಕ್ಷಾ ವರದಿ ಅದಲು ಬದಲಾಗಿ ಪೊಲೀಸ್​ ಕಾನ್ಸ್​ಸ್ಟೇಬಲ್​ನನ್ನು ಹಾಗೂ ಆತನ ಮನೆಯವರನ್ನು ಕ್ವಾರಂಟೈನ್ ಮಾಡಿದ್ದಕ್ಕೆ ಇದೀಗ ರಿಪೋರ್ಟ್ ನೆಗೆಟಿವ್ ಬಂದ ಹಿನ್ನೆಲೆ ಪೇದೆಯ ಕುಟುಂಬಸ್ಥರು ಪಾಲಿಕೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಪಾಸಿಟಿವ್ ಅಂತಾ ಹೇಳಿದ್ದರಿಂದ ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ. ಅನಾನುಕೂಲತೆ ಆಗಿದೆ, ಕೇಸ್ ಹಾಕುತ್ತೇವೆ, ಕಾನೂನು ಹೋರಾಟ ಮಾಡುವುದಾಗಿ ಜಗಳವಾಡಿದ್ದಾರೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆದರೆ, ಆರೋಗ್ಯ ಇಲಾಖೆ ಕೊಟ್ಟ ಮಾಹಿತಿ ಹಿನ್ನೆಲೆ ಎಲ್ಲರಿಗೂ ಒಂದೇ ಕಾನೂನು ಎಂದು ಕ್ವಾರಂಟೈನ್ ಮಾಡಲಾಗಿತ್ತು. ನಮ್ಮ ಕಡೆಯಿಂದ ಏನೂ ತಪ್ಪಾಗಿಲ್ಲ ಎಂದು ಅಧಿಕಾರಿ ಸ್ಪಷ್ಟಪಡಿಸಿದರು. ಪೊಲೀಸ್ ಪೇದೆ ರಿಪೋರ್ಟ್ ನೆಗೆಟಿವ್ ಬಂದ ಹಿನ್ನೆಲೆ ಪೇದೆಯ ಸಂಪರ್ಕದಲ್ಲಿದ್ದ 2, ಪ್ರೈಮರಿ ಹಾಗೂ 11 ಸೆಕಂಡರಿ ಕಾಂಟ್ಯಾಕ್ಟ್ ನಲ್ಲಿದ್ದವರನ್ನು ಕ್ವಾರಂಟೈನ್ ಮುಕ್ತ ಮಾಡಲಾಗಿದೆ. ಬೇಗೂರು ವಾರ್ಡ್‌ನ ಕೂಡಾ ಕಂಟೈನ್ಮೆಂಟ್ ಮುಕ್ತ ಮಾಡಲಾಗಿದೆ.

ಗರ್ಭಿಣಿಗೆ ಮುಂದುವರಿದ ಚಿಕಿತ್ಸೆ: ವಿಕ್ಟೋರಿಯಾಗೆ ದಾಖಲಿಸಲಾಗಿದ್ದ ಬಿಟಿಎಂಲೇಔಟ್​ನ ಗರ್ಭಿಣಿ ರಿಪೋರ್ಟ್ ಕೂಡಾ ನೆಗೆಟಿವ್ ಬಂದಿದೆ. ಆದರೂ ಮತ್ತೆ 14 ದಿನ‌ ಐಸೋಲೇಷನ್ ವಾರ್ಡ್​ನಲ್ಲಿ ಇರಬೇಕಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿದ್ದ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾದ ಪರಿಣಾಮ‌ ಮುನ್ನೆಚ್ಚರಿಕಾ ಕ್ರಮವಾಗಿ ಈಗ ಖಾಸಗಿ ಆಸ್ಪತ್ರೆಯಲ್ಲಿ ಐಸೋಲೇಷನ್ ವ್ಯವಸ್ಥೆ ಮಾಡಿ, ಹೆರಿಗೆಯಾಗುವವರೆಗೂ ಗರ್ಭಿಣಿಯ ಆರೋಗ್ಯವನ್ನು ಜೋಪಾನ ಮಾಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.