ETV Bharat / state

ಹೆಜ್ಜೇನು ದಾಳಿ.. ಇಬ್ಬರ ಸ್ಥಿತಿ ಗಂಭೀರ - ಆನೇಕಲ್​​

ಹೋಮ‌ದ ಹೊಗೆಯಿಂದ ಕೆರಳಿ ಹೆಜ್ಜೇನು ದಾಳಿ- ಇಬ್ಬರ ಸ್ಥಿತಿ ಗಂಭೀರ- ಆನೇಕಲ್​​ನಲ್ಲಿ ಘಟನೆ.

Bees attack
ಹೆಜ್ಜೇನು ದಾಳಿಗೆ ಒಳಗಾದವರು
author img

By

Published : Apr 23, 2023, 11:51 AM IST

ಬೆಂಗಳೂರು: ಹೋಮ ಹಾಕುವ ಸಂದರ್ಭದಲ್ಲಿ ಹೆಜ್ಜೇನು ದಾಳಿ ನಡೆಸಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಆನೇಕಲ್ - ತಮಿಳುನಾಡು ರಸ್ತೆಯ ಸೋಲೂರು ಗಡಿಯಲ್ಲಿ ನೂತನವಾಗಿ‌ ನಿರ್ಮಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಸಮೀಪ ಘಟನೆ ನಡೆದಿದೆ. ಮುನಿಮಾರಪ್ಪ ಹಾಗೂ ಚಿಂಟು ಹೆಜ್ಜೇನು ದಾಳಿಗೆ ಒಳಗಾದವರು. ದೇವಾಲಯದಲ್ಲಿ ಹೋಮ ಹಾಕಲು‌ ಮುಂದಾದ ಭಕ್ತ ವೃಂದ ಮರದಲ್ಲಿದ್ದ ಹೆಜ್ಜೇನು ಇರುವುದನ್ನು ಗಮನಿಸಿರಲಿಲ್ಲ. ಹೀಗಾಗಿ ಹೋಮದ ಹೊಗೆಯಿಂದ ಕೆರಳಿದ ಹೆಜ್ಜೇನು ಭಕ್ತಾಧಿಗಳ ಮೇಲೆ ದಾಳಿ‌ ಮಾಡಿದೆ ಎಂದು ತಿಳಿದು ಬಂದಿದೆ.

ಸೋಲೂರು ಗಡಿಯ ಆಂಜನೇಯ ದೇವಾಲಯಕ್ಕೆ ಲಾರಿ ಡಿಕ್ಕಿ ಹೊಡೆದು ಭಗ್ನಗೊಂಡಿದ್ದ ಗುಡಿಯನ್ನು ಮರು ನಿರ್ಮಾಣ ಮಾಡಲಾಗುತ್ತಿದೆ. ಈ ಹಿನ್ನೆಲೆ ತಮಿಳುನಾಡಿನ ಗೋಪಸಂದ್ರದ ಮುನಿಮಾರಪ್ಪ ಹೋಮ ಹಾಕಿಸಿದ್ದರು. ಇದೇ ಸಂದರ್ಭದಲ್ಲಿ ಎದ್ದ ಹೆಜ್ಜೇನು ಮುನಿಮಾರಪ್ಪನ ಆದಿಯಾಗಿ ನೆರೆದಿದ್ದವರ ಮೇಲೆ ದಾಳಿ‌ ನಡೆಸಿದೆ. ಸ್ಥಳಕ್ಕೆ ಬಂದ ಅಸ್ಸೋಂ ಮೂಲದ ಚಿಂಟು ತಂಡ ಇವರನ್ನು ಜೇನು ದಾಳಿಯಿಂದ ರಕ್ಷಿಸಲು ಮುಂದಾಗಿದೆ. ಆಗ ಅಸ್ಸೋಂ ಮೂಲದ ಹುಡುಗರಿಗೂ ಜೇನು ಕಚ್ಚಿದೆ.

ಅರೆನಗ್ನವಾಗಿದ್ದ ಮುನಿಮಾರಪ್ಪ ಮೇಲೆ ದೀಢೀರ್ ದಾಳಿ ನಡೆಸಿದ ಹೆಜ್ಜೇನಿನ‌ ರೌದ್ರತೆ ಕಂಡು ಕೈ ರಭಸವಾಗಿ ಬೀಸಿದ್ದರಿಂದ ದಾಳಿಗೆ ಒಳಗಾಗಿದ್ದಾರೆ. ಪ್ರಜ್ಞೆ ತಪ್ಪಿರುವ ಇಬ್ಬರನ್ನು ಚುನಾವಣಾ ಚೆಕ್​ಪೋಸ್ಟ್ ನಲ್ಲಿದ್ದ ಪೊಲೀಸರು ಹಾಗೂ ಅಧಿಕಾರಿಗಳು ಆನೇಕಲ್ ಸಾರ್ವಜನಿಕ‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮುನಿಮಾರಪ್ಪನನ್ನು ತಮಿಳುನಾಡಿನ ತಳಿ ಆಸ್ಪತ್ರೆಗೆ ಸಾಗಿಸಿ ಅನಂತರ ಹೆಚ್ಚಿನ ಚಿಕಿತ್ಸೆಗೆ ಹೊಸೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಮುನಿಮಾರಪ್ಪ ಪ್ರಜ್ಣೆ ತಪ್ಪಿದ ಸ್ಥಿತಿಯಲ್ಲಿದ್ದಾರೆ. ಉಳಿದಂತೆ ಚಿಂಟು ಸ್ಥಿತಿ ಇನ್ನೂ ಸುಧಾರಿಸದೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತಪತೇಶ್ವರ ಬೆಟ್ಟಕ್ಕೆ ಪ್ರವಾಸಕ್ಕೆ ತೆರಳಿದ್ದ ಮಕ್ಕಳ ಮೇಲೆ ಹೆಜ್ಜೇನು ದಾಳಿ.. ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.