ETV Bharat / state

ಆನೇಕಲ್: ಸೋಂಕಿತರ ನೆರವಿಗೆ ಬೆಡ್​ ಬುಕಿಂಗ್, ಮಿನಿ ವಾರ್​ ರೂಮ್ ಸೌಲಭ್ಯಕ್ಕೆ ಚಾಲನೆ

ಆನೇಕಲ್ ತಾಲೂಕಿನಲ್ಲಿ ಕೋವಿಡ್ ಬೆಡ್ ಬುಕಿಂಗ್ ವ್ಯವಸ್ಥೆಗೆ ಅವಕಾಶ ನೀಡಲಾಗಿದ್ದು, ಈಗ ಸ್ಥಳೀಯವಾಗಿ ಲಭ್ಯವಿರುವ ಬೆಡ್ ಸಂಖ್ಯೆಗಳ ಕುರಿತು ಮಾಹಿತಿ ಬರಲಿದ್ದು, ಸೋಂಕಿತರಿಗೆ ಸಹಾಯವಾಗಲಿದೆ.

ಸೋಂಕಿತರ ನೆರವಿಗೆ ಬೆಡ್​ ಬುಕಿಂಗ್
ಸೋಂಕಿತರ ನೆರವಿಗೆ ಬೆಡ್​ ಬುಕಿಂಗ್
author img

By

Published : May 16, 2021, 8:18 PM IST

ಆನೇಕಲ್ (ಬೆಂಗಳೂರು): ಆನೇಕಲ್ ತಾಲೂಕಿನಲ್ಲಿ ಕೊರೊನಾ ಚಿಕಿತ್ಸೆಗೆ ಬೆಡ್​​ ಸಮಸ್ಯೆ ಎದುರಾದ ಹಿನ್ನೆಲೆ ಎಚ್ಚೆತ್ತ ಜಿಲ್ಲಾಡಳಿತ ಇದೀಗ ತಾಲೂಕಿನಲ್ಲಿ ಬೆಡ್​ ಬುಕಿಂಗ್​ಗೆ ಅವಕಾಶ ಕಲ್ಪಿಸಿದೆ.

ರಾಜ್ಯ ಸರ್ಕಾರದ ಆದೇಶದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿಯೇ ಕೋವಿಡ್-19 ಚಿಕಿತ್ಸೆಯ ಸರದಿ ತೀರ್ಮಾನ ಕೇಂದ್ರ (ಟ್ರೈಯಾಗಿಂಗ್ ಸೆಂಟರ್)ಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಚಾಲನೆ ನೀಡಿದ್ದಾರೆ.

ಅಲ್ಲದೆ ಸೋಂಕಿತರಿಗೆ ತಕ್ಷಣವೇ ಆಮ್ಲಜನಕ ಸಿಗುವಂತೆ ಮಾಡಲು ವಿವಿಧ ಖಾಸಗಿ ದಾನಿಗಳ ಸಹಕಾರದಲ್ಲಿ 29 ಆಮ್ಲಜನಕ ಕಾನ್ಸಂಟ್ರೇಟರ್​​ಗಳನ್ನ ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದರು. ಇದರಿಂದ ತೀವ್ರ ಸೋಂಕಿಗೆ ಒಳಗಾದ ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವ ಮುನ್ನ ಎಲ್ಲ ವ್ಯವಸ್ಥೆ ಮಾಡಿಕೊಂಡು ತುರ್ತು ಸಂದರ್ಭದಲ್ಲಿ ಬಳಸಬಹುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ.

ಸೋಂಕಿತರ ನೆರವಿಗೆ ಬೆಡ್​ ಬುಕಿಂಗ್, ಮಿನಿ ವಾರ್​ ರೂಮ್ ಸೌಲಭ್ಯಕ್ಕೆ ಚಾಲನೆ

ಇದಕ್ಕೂ ಮೊದಲು ಆನ್​ಲೈನ್ ಬುಕಿಂಗ್​​​ ವ್ಯವಸ್ಥೆ ಸಮರ್ಪಕವಾಗಿರದೆ ಆನೇಕಲ್ ಭಾಗದ ಸೋಂಕಿತರು ಪರದಾಡುವಂತಾಗಿತ್ತು. ಇವೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ನಿನ್ನೆಯೇ ಪ್ರತಿ ತಾಲೂಕಿನಾದ್ಯಂತ ಟ್ರೈಯಾಗಿಂಗ್ ಸೆಂಟರ್ ತೆರೆದು ಪಾರದರ್ಶಕವಾಗಿ ಬೆಡ್ ಲಭ್ಯತೆ ಬಗ್ಗೆ ಸೋಂಕಿತರಿಗೆ ಸ್ಪಷ್ಟ ಮಾಹಿತಿ ಮತ್ತು ನಿಖರವಾದ ಸ್ಯಾಚುರೇಷನ್ ಸ್ಟೇಟಸ್ ಪಡೆದು ಸೋಂಕಿನ ಪ್ರಮಾಣಕ್ಕೆ ತಕ್ಕ ಚಿಕಿತ್ಸೆ ಕೊಡಿಸುವ ವ್ಯವಸ್ಥೆಯನ್ನು ನೆರವೇರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಕೊರೊನಾ: ಇಂದು 31 ಸಾವಿರ ಮಂದಿಗೆ ಸೋಂಕು, 403 ಜನರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.