ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಹೆಚ್ಚು ಬಾಧಿಸುತ್ತಿದೆ. ಅದರಲ್ಲೂ ಮಹಾನಗರಗಳಲ್ಲೇ ಹೆಚ್ಚು ಹರಡುತ್ತಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆ ಆಗ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಬೇಡಿಕೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಬಿಬಿಎಂಪಿ ತಯಾರಿ ನಡೆಸಿದ್ದು, ಸರಣಿ ಸಭೆ ನಡೆಸುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಲಿಕೆ ಆಯುಕ್ತ ಗೌರವ್ ಗುಪ್ತಾ, ದೆಹಲಿ, ಮಹಾರಾಷ್ಟ್ರಗಳಿಗೆ ಜನರು ಹೋಗಿ ಬರುವುದು ಮಾಡ್ತಿದ್ದು, ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂದರು.
ಎರಡನೇ ಅಲೆಗೆ ಹೋಲಿಕೆ ಮಾಡಿದ್ರೆ ಮೂರನೇ ಅಲೆಯಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಸೋಂಕಿನ ಶಕ್ತಿ ಕಡಿಮೆ ಇದೆ ಎಂದು ತಜ್ಞರು ಹೇಳುತ್ತಾರೆ. ಆದರೂ ಸೋಂಕಿನ ಕುರಿತು ನಿರ್ಲಕ್ಷ್ಯ ಮಾಡಲು ಆಗುವುದಿಲ್ಲ. ಸೋಂಕಿತರ ಸಂಖ್ಯೆ ದುಪ್ಪಟ್ಟು ಆಗ್ತಿದ್ದು, ಹಾಸಿಗೆ ಸಮಸ್ಯೆ ಬರದಂತೆ ನೋಡಿಕೊಳ್ಳುವ ಕೆಲಸ ಆಗಬೇಕಿದೆ. ಹೀಗಾಗಿ ಮೊಬೈಲ್ ಟ್ರಯಜಿಂಗ್, ಟೆಲಿ ಟ್ರಯಜಿಂಗ್ ಮೂಲಕವೇ ಅವಶ್ಯಕತೆ ಇರುವ ಸೋಂಕಿತರಿಗೆ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತೆ ಎಂದು ತಿಳಿಸಿದರು.
ಇದನ್ನೂ ಓದಿ: ಒಂದು ರಾಜ್ಯದ SC/ST ವ್ಯಕ್ತಿ ಇತರ ರಾಜ್ಯದಲ್ಲಿ ಉದ್ಯೋಗ, ಶಿಕ್ಷಣ, ಭೂ ಪ್ರಯೋಜನ ಪಡೆಯಲು ಸಾಧ್ಯವಿಲ್ಲ: ಸುಪ್ರೀಂ
ಎರಡನೇ ಅಲೆಯ ಸಂದರ್ಭದಲ್ಲಿ ವ್ಯಾಪಕವಾಗಿ ಲಸಿಕಾ ಕಾರ್ಯಕ್ರಮಗಳು ನಡೆದಿದ್ದು, ಆಗಲೂ ಶೇ.80 ರಷ್ಟು ಸೋಂಕಿತರು ಮನೆಯಲ್ಲಿ ಇದ್ದುಕೊಂಡೇ ಗುಣಮುಖರಾಗಿದ್ದರು. ಇದೀಗ ಲಸಿಕಾಕರಣ ನಂತರ ಮೂರನೇ ಅಲೆಯಲ್ಲೂ ಶೇ.90 ರಷ್ಟು ಮಂದಿ ಮನೆಯಲ್ಲೇ ಇದ್ದು ಗುಣಮುಖವಾಗುವ ಸಾಧ್ಯತೆ ಇದೆ. ಹೀಗಾಗಿ ವಾರ್ಡ್ ಮಟ್ಟದಲ್ಲಿ ಟ್ರಯಜಿಂಗ್ ಮಾಡಿ ಯರ್ಯಾರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಅವಶ್ಯಕತೆ ಇದೆ ಎಂಬುದನ್ನು ನಿರ್ಧಾರ ಮಾಡಲಾಗುತ್ತೆ ಎಂದು ಮಾಹಿತಿ ನೀಡಿದರು.
ಸೋಂಕಿತರ ಮನೆ ಮನೆಗೆ ವೈದ್ಯರು ಭೇಟಿ ನೀಡಿ ಪರೀಕ್ಷಿಸಿ, ಹೋಂ ಐಸೋಲೇಷನ್ ಅಗತ್ಯ ಇದ್ಯಾ? ಮನೆಯಲ್ಲೇ ಇರಬೇಕಾ? ಬೇಡ್ವಾ? ಎಂಬ ಸಲಹೆ ನೀಡ್ತಾರೆ. ತೀರಾ ಪರಿಸ್ಥಿತಿ ಬಿಗಾಡಿಯಿಸಿದ್ದರೆ ಅಂಥವರಿಗೆ ಆಸ್ಪತ್ರೆಗೆ ಸೇರಲು ಸೂಚಿಸಲಾಗುತ್ತೆ ಎಂದು ತಿಳಿಸಿದ ಅವರು, ಈಗಾಗಲೇ 8 ವಲಯಗಳಲ್ಲೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಕ್ಕಾಗಿ ತಯಾರಿಗಳು ನಡೆದಿದೆ ಎಂದರು.