ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಳ್ಳರು ಮತ್ತೆ ತಮ್ಮ ಬಾಲ ಬಿಚ್ಚಿದ್ದಾರೆ. ಇವರಿಂದಾಗಿ ರಸ್ತೆಯಲ್ಲಿ ಫೋನ್ ಮಾತನಾಡುವಾಗ ಮೈಯೆಲ್ಲಾ ಕಣ್ಣಿಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ಕ್ಷಣಾರ್ಧದಲ್ಲಿ ನಿಮ್ಮ ಫೋನ್ ಅನ್ನು ಎಗರಿಸಿ ಪರಾರಿಯಾಗ್ತಾರೆ.
ಹೆಚ್ಆರ್ ಎಸ್ ಲೇಔಟ್ನ ಸಮರ್ಥನಮ್ ಟ್ರಸ್ಟ್ ಬಳಿ ಬಹಳ ದಿನಗಳಿಂದ ಬೈಕ್ನಲ್ಲಿ ಬರುವ ಇಬ್ಬರು ಖದೀಮರು, ರಸ್ತೆಯಲ್ಲಿ ಮಾತಾಡುವವರ ಮೊಬೈಲ್ ಅನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡು ಪರಾರಿಯಾಗುತ್ತಿದ್ದಾರೆ. ಇದೇ ತಿಂಗಳು 21ರಂದು ದರ್ಶನ್ ಎಂಬುವರು ಫೋನ್ನಲ್ಲಿ ಮಾತನಾಡುತ್ತ ನಿಂತಿದ್ದ ವೇಳೆ ಅವರ ಮೊಬೈಲ್ ಅನ್ನು ಎಗರಿಸಿ ಖದೀಮರು ಪರಾರಿಯಾಗಿದ್ದಾರೆ.
ಮೊಬೈಲ್ ಎಗರಿಸಿ ಪರಾರಿಯಾಗುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೆಚ್ಆರ್ಎಸ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.