ETV Bharat / state

ಬಿ ಕೇರ್​ ಫುಲ್​, ಹಸಿರು ಪಟಾಕಿ ಕೂಡ ಡೇಂಜರ್.. ಅದಕ್ಕೆ ಕಾರಣ ವೈದ್ಯರೇ ಹೇಳ್ತಾರೆ ಕೇಳಿ..

ಇದರಲ್ಲೂ ಸಹ ಹಾನಿಕಾರಕ ಅಂಶಗಳಿವೆ. ಈ ಪಟಾಕಿಗಳಲ್ಲೂ ಸಹ ಕೆಮಿಕಲ್ ಇರುತ್ತದೆ, ಆದ್ದರಿಂದ ಪಟಾಕಿ ಹಚ್ಚಿ ಸಂಭ್ರಮಿಸುವ ಮುನ್ನ ಎಚ್ಚರವಿರಲಿ..

Sujatha Rathod
ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತ ರಾಥೋಡ್
author img

By

Published : Nov 13, 2020, 2:07 PM IST

ಬೆಂಗಳೂರು: ರಾಜ್ಯಾದ್ಯಂತ ಎಲ್ಲರೂ ದೀಪಾವಳಿ ಹಬ್ಬದ ಸಡಗರದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುವ ಇಚ್ಚೆಯಲ್ಲಿದ್ದಾರೆ. ಆದರೆ, ಈ ಸಂಭ್ರಮದಿಂದಾಗಿ ಯಾವುದೇ ಹಾನಿಯುಂಟುಮಾಡಿಕೊಳ್ಳದಿರಿ ಎಂದು ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತ ರಾಥೋಡ್ ಸಲಹೆ ನೀಡಿದ್ದಾರೆ.

ಮಿಂಟೋ ಆಸ್ಪತ್ರೆಯ ನಿರ್ದೇಶಕಿ ಸುಜಾತ ರಾಥೋಡ್

ಪ್ರತಿವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವ ಸಂತಸದಲ್ಲಿ 50 ರಿಂದ 60 ಜನರು ಕಣ್ಣಿಗೆ ಗಾಯಗೊಂಡು ಚಿಕಿತ್ಸೆಗೆ ಬರುತ್ತಾರೆ. ಆದರೆ, ಈ ವರ್ಷ ಹಸಿರು ಪಟಾಕಿ ಮಾತ್ರ ಎಂದು ಸರ್ಕಾರ ಹೇಳಿದೆ. ಈ ಹಸಿರು ಪಟಾಕಿ ಕೂಡ ಹೇಳುವಷ್ಟು ಅಪಾಯರಹಿತವಾದುದಲ್ಲ.

ಇದರಲ್ಲೂ ಸಹ ಹಾನಿಕಾರಕ ಅಂಶಗಳಿವೆ. ಈ ಪಟಾಕಿಗಳಲ್ಲೂ ಸಹ ಕೆಮಿಕಲ್ ಇರುತ್ತದೆ, ಆದ್ದರಿಂದ ಪಟಾಕಿ ಹಚ್ಚಿ ಸಂಭ್ರಮಿಸುವ ಮುನ್ನ ಎಚ್ಚರವಿರಲಿ ಎಂಬ ಸಂದೇಶವನ್ನ ಸುಜಾತ ರಾಥೋಡ್​ ನೀಡಿದ್ದಾರೆ.

ಕಳೆದ ವರ್ಷ ಶೇ.40 ಜನರ ಕಣ್ಣಿಗೆ ಫ್ಲವರ್​​ ಪಾಟ್​​ ಪಟಾಕಿಯಿಂದ ಹಾನಿಯಾಗಿತ್ತು. 60 ಜನರಲ್ಲಿ 20 ರಷ್ಟು ಜನರ ಕಣ್ಣಿಗೆ ತೀವ್ರವಾಗಿ ಗಾಯವಾಗಿತ್ತು. ಹೀಗಾಗಿ, ಪಟಾಕಿಗಳನ್ನು ಹಚ್ಚುವ ಮುನ್ನ ಎಚ್ಚರವಹಿಸಿ ಎಂದು ಸುಜಾತ ಸಲಹೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.