ETV Bharat / state

ಖಾಸಗಿಯಿಂದ ಸರ್ಕಾರಿ ಕೋಟಾದಡಿ ಸೀಟು ಕೇಳಿದ BDS ವಿದ್ಯಾರ್ಥಿ: ಅರ್ಜಿ ವಜಾಗೊಳಿಸಿದ ಹೈಕೋರ್ಟ್ - BDS student plea in high court

ಬೆಂಗಳೂರಿನ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಕೌನ್ಸೆಲಿಂಗ್​ನ ಮಾಪ್ ಅಪ್ ರೌಂಡ್​​ನಲ್ಲಿ ಭಾಗವಹಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​​ ವಿಭಾಗೀಯ ಪೀಠವು ವಜಾಗೊಳಿಸಿದೆ.

BDS student plea dismissed by high court
ವೈದ್ಯಕೀಯ ವಿದ್ಯಾರ್ಥಿ ಅರ್ಜಿ ವಜಾ
author img

By

Published : Dec 3, 2021, 8:08 PM IST

ಬೆಂಗಳೂರು: ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ (ಬಿಡಿಎಸ್) ಗೆ ಈ ಮೊದಲೇ ಖಾಸಗಿ ಕೋಟಾದಡಿ ಸೀಟು ಪಡೆದು ನೋಂದಾಯಿಸಿಕೊಂಡ ನಂತರವೂ ಸರ್ಕಾರಿ ಕೋಟಾದಡಿ ತನಗೆ ಸೀಟು ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಕೋರಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.

ಬೆಂಗಳೂರಿನ ಪ್ರಜ್ವಲ್ ಎಂಬಾತ ಕೌನ್ಸೆಲಿಂಗ್​ನ ಮಾಪ್ ಅಪ್ ರೌಂಡ್​​ನಲ್ಲಿ ಭಾಗವಹಿಸಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ಅರ್ಜಿದಾರ ವಿದ್ಯಾರ್ಥಿಗೆ ಈಗಾಗಲೇ ಸೀಟು ನೀಡಲಾಗಿದೆ. ಆತನೂ ಶುಲ್ಕ ತುಂಬಿ ದಾಖಲು ಮಾಡಿಕೊಂಡಿದ್ದಾನೆ.

ಖಾಸಗಿ ಕೋಟಾದಡಿ ನಡೆಸಿದ ಕೌನ್ಸೆಲಿಂಗ್ ಮೂಲಕ ಸೀಟು ಪಡೆದ ನಂತರ ಮತ್ತೆ ಸರ್ಕಾರಿ ಕೋಟಾದಡಿ ಸೀಟು ಕೇಳುವುದನ್ನು ಪುರಸ್ಕರಿಸಲಾಗದು. ಅಂತೆಯೇ, ತನಗಿಂತ ಕಡಿಮೆ ಅಂಕ ಗಳಿಸಿದವರು ಎಂದು ಹೇಳಿರುವ ಯಾರನ್ನೂ ಅರ್ಜಿಯಲ್ಲಿ ತೋರಿಸಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಪ್ರಜ್ವಲ್ 2020ರ ನೀಟ್ ಪರೀಕ್ಷೆಯಲ್ಲಿ 2,14,774ನೇ ರ‍್ಯಾಂಕ್ ಪಡೆದಿದ್ದ. ನಂತರ ನಡೆದಿದ್ದ ಕೌನ್ಸೆಲಿಂಗ್​​​ನಲ್ಲಿ ಖಾಸಗಿ ಕೋಟಾದಡಿ ಸೀಟು ಪಡೆದು, ಚಿತ್ರದುರ್ಗದ ಶ್ರೀ ಜಗದ್ಗುರು ಮುರುಗರಾಜೇಂದ್ರ ಡೆಂಟಲ್ ಕಾಲೇಜಿನಲ್ಲಿ ಬಿಡಿಎಸ್​​ಗೆ ನೋಂದಾಯಿಸಿಕೊಂಡಿದ್ದ. ಆ ಬಳಿಕ ತಾನು ಆರ್​ಟಿಐ ಮೂಲಕ ಪಡೆದ ಮಾಹಿತಿಯಂತೆ ನೀಟ್​​ನಲ್ಲಿ ತನಗಿಂತ ಕಡಿಮೆ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಕೂಡ ಮಾಪ್ ಅಪ್ ರೌಂಡ್​​ನಲ್ಲಿ ಸರ್ಕಾರಿ ಕೋಟಾದಡಿ ಸೀಟು ಪಡೆದಿದ್ದಾರೆ.

ಹೀಗಾಗಿ ತನಗೂ ಮಾಪ್ ಅಪ್ ರೌಂಡ್​​ನಲ್ಲಿ ಭಾಗವಹಿಸಲು ಅವಕಾಶ ಕೊಡಿಸಬೇಕು. ಹಾಗೆಯೇ, ಈಗಾಗಲೇ ತಾನು ಖಾಸಗಿ ಸೀಟಿಗೆ ಹೆಚ್ಚುವರಿಯಾಗಿ ಪಾವತಿಸಿರುವ ಶುಲ್ಕವನ್ನೂ ಹಿಂದಿರುಗಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದ.

ವಿಚಾರಣೆ ವೇಳೆ, ಸರ್ಕಾರ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರ ವಕೀಲರು ವಾದಿಸಿ, ಅರ್ಜಿದಾರರಿಗೆ ಪ್ರಥಮ ಸುತ್ತಿನಲ್ಲಿ ಖಾಸಗಿ ಕೋಟಾದಡಿ ನಡೆಸಿದ ಕೌನ್ಸೆಲಿಂಗ್​​​ನಲ್ಲಿ ಸೀಟು ನೀಡಲಾಗಿದೆ. ಹಾಗೆಯೇ, ದಾಖಲಾತಿಗೆ ನಿಗದಿಪಡಿಸಿದ್ದ ಸಮಯವೂ ಮುಕ್ತಾಯವಾಗಿದೆ ಎಂದಿದ್ದರು.

ಇದನ್ನೂ ಓದಿ: ಕೊರೊನಾ ರೂಪಾಂತರಿ 'ಒಮಿಕ್ರಾನ್'​ ಆಕ್ರಮಣಕಾರಿಯೇ?.. ವೈರಸ್​ನಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.