ETV Bharat / state

ಬಿಡಿಎ ಅಧ್ಯಕ್ಷನಾಗಿ ಅಂದುಕೊಂಡದ್ದೇನು ಮಾಡಲಾಗಿಲ್ಲ: ಎಸ್ ಟಿ ಸೋಮಶೇಖರ್ ಬೇಸರ - ಬೆಂಗಳೂರು

ಮಾಧ್ಯಮಗಳಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ಎಂದು ಬರುತ್ತಿದ್ದು, ಈ ಬಗ್ಗೆ ವಿವರ ಕೊಡಿ ಎಂದು ಲಿಖಿತರೂಪದಲ್ಲಿ ನಾನು ಕೇಳಿದ್ದೇನೆ ಇದಕ್ಕಿಂತ ಹೆಚ್ಚಿನದನ್ನು ನಾನು ಏನು ಮಾಡಲಿ ಎಂದು ಬಿಡಿಎ ಅಧ್ಯಕ್ಷ ಎಸ್ ಟಿ ಸೋಮಶೇಖರ್ ಪ್ರಶ್ನಿಸಿದ್ದಾರೆ.

ಬಿಡಿಎ ಅಧ್ಯಕ್ಷ ಎಸ್ ಟಿ ಸೋಮಶೇಖರ್
author img

By

Published : Mar 23, 2019, 4:47 PM IST

ಬೆಂಗಳೂರು: ಬಿಡಿಎ ಅಧ್ಯಕ್ಷನಾಗಿ ಒಂದು ತಿಂಗಳು ಕಳೆಯುತ್ತಾ ಬಂತು, ಇಲ್ಲಿ ನಾನು ಅಂದುಕೊಂಡಂತೆ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಯಶವಂತಪುರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್. ಟಿ. ಸೋಮಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅವಕಾಶ ಆಗುತ್ತಿಲ್ಲ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಎಲ್ಲದಕ್ಕೂ ತೊಡಕಾಗಿದ್ದಾರೆ. ಇಲ್ಲಿನ ಅವ್ಯವಹಾರಗಳ ಕುರಿತು ಸಾಕಷ್ಟು ಮಾಹಿತಿಯೊಂದಿಗೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಮತ್ತು ಶಾಸಕ ಭೈರತಿ ಬಸವರಾಜ್ ಒಟ್ಟಾಗಿ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು, ಸಾಯಂಕಾಲದ ಒಳಗಡೆ ಸಮಸ್ಯೆ ಪರಿಹರಿಸುವುದಾಗಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಜೊತೆ ಸಮಾಲೋಚಿಸಿದ ಬಳಿಕ ತಿಳಿಸಿದರು. ಆದರೆ ಒಂದು ವಾರ ಕಳೆದರೂ ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದರು.

ಸಾಕಷ್ಟು ಅವ್ಯವಹಾರ ಬಿಡಿಎನಲ್ಲಿ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದುವರೆಗೂ ಆಯುಕ್ತರು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯ ಮಾಡಿಲ್ಲ. ಒಂದೆಡೆ ಬಿಡಿಎ ಮಾನ ಮರ್ಯಾದೆ ಹರಾಜು ಹಾಕುತ್ತಿರುವ ಕಾರ್ಯ ಆಗುತ್ತಿದ್ದರು ಆಯುಕ್ತರು ಈ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಂಡಿಲ್ಲ. ಅಧ್ಯಕ್ಷನಾಗಿ ನಾನು ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ಗಮನಿಸಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ ಎಂದು ವಿವರಿಸಿದರು.

ಬಿಡಿಎ ಅಧ್ಯಕ್ಷ ಎಸ್ ಟಿ ಸೋಮಶೇಖರ್
10 ಫೈಲ್​ಗಳನ್ನು ಖಾಸಗಿ ಹೋಟೆಲ್​ನಲ್ಲಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ವಿಲೇವಾರಿ ಮಾಡಿದ ಮಾಹಿತಿ ನನಗೆ ಲಭಿಸಿದೆ. ಇದು ಎಷ್ಟು ಕೋಟಿ ಮೌಲ್ಯದ ಅವ್ಯವಹಾರ ಎನ್ನುವುದು ತಿಳಿದುಕೊಳ್ಳಬೇಕಿದೆ. ಈ ಬಗ್ಗೆ ಮಾಹಿತಿ ಕೊಡಿ ಎಂದು ನಾನು ಕೂಡ ಕೇಳಿದ್ದೇನೆ. ಮಾಧ್ಯಮಗಳಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ಎಂದು ಬರುತ್ತಿದ್ದು, ಈ ಬಗ್ಗೆ ವಿವರ ಕೊಡಿ ಎಂದು ಲಿಖಿತರೂಪದಲ್ಲಿ ನಾನು ಕೇಳಿದ್ದೇನೆ ಇದಕ್ಕಿಂತ ಹೆಚ್ಚಿನದನ್ನು ನಾನು ಏನು ಮಾಡಲಿ ಎಂದರು.

Intro:ಸಿಎಂಗೆ ಮನವಿ ಮಾಡಿದ್ದೇನೆ ಪ್ರಯೋಜನವಾಗಿಲ್ಲ, ಡಿಸಿಎಂ ಗೂ ದೂರು ಕೊಟ್ಟಿದ್ದೇನೆ ನೋಡೋಣ: ಎಸ್ ಟಿ ಸೋಮಶೇಖರ್ ಬೆಂಗಳೂರು: ಬಿಡಿಎ ಅಧ್ಯಕ್ಷನಾಗಿ ಒಂದು ತಿಂಗಳು ಕಳೆಯುತ್ತಾ ಬಂತು ಇಲ್ಲಿ ನಾನು ಅಂದುಕೊಂಡಂತೆ ಏನನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಯಶವಂತಪುರ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎಸ್ ಟಿ ಸೋಮಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನ ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿದ್ದರು ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿ, ಇಲ್ಲಿ ಅಭಿವೃದ್ಧಿ ಕೆಲಸ ಮಾಡುವುದಕ್ಕೆ ಅವಕಾಶ ಆಗುತ್ತಿಲ್ಲ. ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಎಲ್ಲಕ್ಕೂ ತೊಡಕಾಗಿ ಮಾಡುತ್ತಿದ್ದಾರೆ. ಬಿಡಿಎ ಕೂಡ ಖಾಸಗಿ ಹೋಟೆಲ್ನಲ್ಲಿ ನಲ್ಲಿ ಮಾಡುತ್ತಿದ್ದಾರೆ ವಿಲೇವಾರಿ ಕಚೇರಿಯಿಂದ ಹೊರಗಡೆ ನಡೆಯುತ್ತಿದೆ. ಇಲ್ಲಿನ ಅವ್ಯವಹಾರಗಳ ಕುರಿತು ಸಾಕಷ್ಟು ಮಾಹಿತಿಯೊಂದಿಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ್ದರು ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ನಾನು ಮತ್ತು ಶಾಸಕ ಬೈರತಿ ಬಸವರಾಜ್ ಒಟ್ಟಾಗಿ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಸಾಯಂಕಾಲದ ಒಳಗಡೆ ಸಮಸ್ಯೆ ಪರಿಹರಿಸುವುದಾಗಿ ಯೂ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಜೊತೆ ಸಮಾಲೋಚಿಸಿದ ತಿಳಿಸಿದರು. ಆದರೆ ಒಂದು ವಾರ ಕಳೆದರೂ ಇದುವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾನು ನಿನ್ನೆ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದ ಇಂದು ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಸಚಿವ ಸಿ ಎಸ್ ಶಿವಳ್ಳಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿ ಇರುವ ಕಾರಣ ಸೋಮವಾರ ನಮ್ಮ ಸಮಸ್ಯೆಯ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ. ಸಿಎಂ ಜೊತೆ ಡಿ ಸಿಎಂ ಚರ್ಚೆ ಫಲ ಕಾಣಲಿದೆ ಎಂಬ ನಿರೀಕ್ಷೆ ನಮಗಿದೆ ಎಂದರು. ಅಧ್ಯಕ್ಷನಾಗಿ ನಾನು ದಾಖಲೆಗಳನ್ನು ತರಿಸಿಕೊಂಡು ನೋಡುವುದನ್ನು ಕೂಡ ಇವರು ಸಹಿಸುತ್ತಿಲ್ಲ ಕಳೆದ ಮೂರು ವರ್ಷಗಳಿಂದ ಇವರು ಬದಲಾಗದ ಹಿನ್ನೆಲೆ ನನ್ನ ಯಾರು ಬದಲಾಯಿಸಲು ಸಾಧ್ಯವಿಲ್ಲ ಎಂಬ ಧೈರ್ಯದಲ್ಲಿ ಅವರಿದ್ದಾರೆ ಇಂತಹ ಹುಂಬತನ ಸ್ವೇಚ್ಛಾಚಾರ ಒಳ್ಳೆಯದಲ್ಲ ಇಂತಹ ಒಬ್ಬ ಯಸ್ ಅಧಿಕಾರಿಯನ್ನು ನಾನು ಇದುವರೆಗೂ ನೋಡಿಲ್ಲ ಎಂದು ಹೇಳಿದರು.

Body:ಸಾಕಷ್ಟು ಅವ್ಯವಹಾರ ಬಿಡಿಎ ನಲ್ಲಿ ಸಾಕಷ್ಟು ಅವ್ಯವಹಾರ ನಡೆಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಇದುವರೆಗೂ ವಿಡಿಯೋ ಆಯುಕ್ತರು ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಚರ್ಚಿಸುವ ಕಾರ್ಯ ಮಾಡಿಲ್ಲ. ಒಂದೆಡೆ ಬಿಡಿಎ ಮಾನ ಮರ್ಯಾದೆ ಹರಾಜು ಹಾಕುತ್ತಿರುವ ಕಾರ್ಯ ಆಗುತ್ತಿದ್ದರು ಆಯುಕ್ತರು ಈ ಬಗ್ಗೆ ಕಿಂಚಿತ್ ತಲೆಕೆಡಿಸಿಕೊಂಡಿಲ್ಲ. ಅಧ್ಯಕ್ಷನಾಗಿ ನಾನು ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ಗಮನಿಸಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದೇನೆ. ಒಂದೊಮ್ಮೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಾಗದಿದ್ದರೆ ನನ್ನನ್ನು ಈ ಸ್ಥಾನದಿಂದ ಬಿಡುಗಡೆ ಮಾಡಿ ಎಂದು ಕೂಡ ಕೋರಿ ಕೊಂಡಿದ್ದೇನೆ. ಯಾವುದಕ್ಕೂ ಸರಿಯಾದ ಪ್ರತಿಕ್ರಿಯೆ ಸ್ಪಂದನೆ ಸಿಗದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳಬೇಕಾಗುತ್ತದೆ ಎಂಬುದನ್ನು ಕೂಡ ಡಿಸಿಎಂಗೆ ಸ್ಪಷ್ಟಪಡಿಸಿದ್ದೇನೆ. ರಾಕೇಶ್ ಸಿಂಗ್ ಅವರನ್ನು ಕೆಲಸದಿಂದ ತೆಗೆದು ಹಾಕಿ ಎಂದು ನಾನು ಹೇಳಿಲ್ಲ. ಅವರು ಇರಬೇಕು ಇಲ್ಲ ನಾನು ಇರಬೇಕು ಎಂದು ಕೂಡ ಹೇಳಲಿಲ್ಲ ಕಾಯಂ ಆಗಿ ಒಬ್ಬ ಆಯುಕ್ತರ ಬೇಕು ಎಂದು ಕೇಳಿದ್ದೇನೆ. ಇವರು ಪ್ರತಿದಿನ ಬೆಳಗ್ಗೆ 9.30 ಕಚೇರಿಗೆ ಬರುತ್ತಾರೆ. ಕೇವಲ ಒಂದು ಗಂಟೆಗಳ ಕಾಲ ಇದ್ದು ವಾಪಸ್ ತೆರಳುತ್ತಾರೆ. ಇವರು ಬೆಳಗಿಂದ ಸಂಜೆಯವರೆಗೂ ಬಿಡಿಎ ಕಚೇರಿಯಲ್ಲಿ ಇದ್ದರೆ ಜನರ ಸಮಸ್ಯೆ ಆಲಿಸಬಹುದು. ಹಲವು ಅಭಿವೃದ್ಧಿ ಕಾಮಗಾರಿಗಳ ವಿವರ ಪಡೆಯಬಹುದು ಇದರಿಂದಾಗಿ ಕಾಯಂ ಆಯುಕ್ತರನ್ನು ನೀಡಿ ಎಂದು ಕೇಳಿದ್ದು ನಿಜ ಎಂದರು.

Conclusion:10 ಫೈಲ್ ವಿಲೇವಾರಿ ಖಾಸಗಿ ಹೋಟೆಲ್ ನಲ್ಲಿ ಬಿಡಿಎ ಆಯುಕ್ತ ರಾಕೇಶ್ ಸಿಂಗ್ 10 ಫೈಲ್ಗಳನ್ನು ವಿಲೇವಾರಿ ಮಾಡಿದ ಮಾಹಿತಿ ನನಗೆ ಲಭಿಸಿದೆ ಇದು ಎಷ್ಟು ಕೋಟಿ ಮೌಲ್ಯದ ಅವ್ಯವಹಾರ ಎನ್ನುವುದು ತಿಳಿದುಕೊಳ್ಳಬೇಕಿದೆ ಈ ಬಗ್ಗೆ ಮಾಹಿತಿ ಕೊಡಿ ಎಂದು ನಾನು ಕೂಡ ಕೇಳಿದ್ದೇನೆ ಮಾಧ್ಯಮಗಳಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಅವ್ಯವಹಾರ ಎಂದು ಬರುತ್ತಿದ್ದು ಈ ಬಗ್ಗೆ ವಿವರ ಕೊಡಿ ಎಂದು ಲಿಖಿತರೂಪದಲ್ಲಿ ನಾನು ಕೇಳಿದ್ದೇನೆ ಇದಕ್ಕಿಂತ ಹೆಚ್ಚಿನದನ್ನು ನಾನು ಏನು ಮಾಡಲಿ ಎಂದು ಮರುಪ್ರಶ್ನೆ ಹಾಕಿದರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.