ಬೆಂಗಳೂರು: ಆರು ತಿಂಗಳೊಳಗೆ ನಗರದಲ್ಲಿರುವ ಕಸದ ಗುಂಡಿಗಳನ್ನು ತೆರವು ಮಾಡಿ, ಬ್ಲಾಕ್ ಸ್ಪಾಟ್ ಮುಕ್ತ ಶುಭ್ರ ನಗರವನ್ನಾಗಿ ಮಾಡಲಾಗುವುದು. ಈ ಬಗ್ಗೆ ಎಲಿಮಿನೇಷನ್ ಬ್ಯೂಟಿಫಿಕೇಷನ್ ಹಾಗೂ ಮೈಂಟೆನೆನ್ಸ್‌ಗೆ ಟೆಂಡರ್ ನೀಡಲಾಗಿದೆ ಎಂದು ಪಾಲಿಕೆ ವಿಶೇಷ ಆಯುಕ್ತ ಹರೀಶ್ ಕುಮಾರ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳೊಳಗೆ ಎಲ್ಲವನ್ನೂ ತೆರವುಗೊಳಿಸಿ ಶುದ್ಧ ಬೆಂಗಳೂರಾಗಿ ರೂಪಿಸಲಾಗುವುದು. ಎರಡು ಹಂತಗಳಲ್ಲಿ ಬ್ಲಾಕ್ ಸ್ಟಾಟ್ ತೆರವು ಮಾಡಬೇಕಾಗಿದೆ. 1,479 ಬ್ಲಾಕ್‌ಸ್ಪಾಟ್‌ಗಳಿದ್ದು, ಅವುಗಳನ್ನು ತೆರವುಗೊಳಿಲಾಗುವುದು ಎಂದು ಹೇಳಿದರು.
ಸಿಸಿಟಿವಿ ಹಾಕಿ ಪರಿಶೀಲನೆ: ಬ್ಲಾಕ್‌ಸ್ಪಾಟ್‌ಗಳ ನಿಯಂತ್ರಣಕ್ಕೆ ಮೂರು ತಿಂಗಳು ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಗಮನಿಸಲಾಗುತ್ತದೆ. ಅದು ತೆರವಾದ ಮೇಲೆ ಮತ್ತೆ ಜನರು ಅಲ್ಲೇ ಕಸ ಹಾಕುತ್ತಾರೆ. ಆದರೆ, ಹಾಗಾಗದ ರೀತಿಯಲ್ಲಿ ನೋಡಿಕೊಳ್ಳಲಾಗುವುದು. ಬೆಂಗಳೂರಿನಲ್ಲಿ 13,632 ಗುಂಡಿಗಳನ್ನು ಪತ್ತೆಹಚ್ಚಿದ್ದು, 12,286 ಗುಂಡಿಗಳನ್ನು ಈಗಾಗಲೇ ಮುಚ್ಚಲಾಗಿದೆ ಎಂದು ಹೇಳಿದರು.
ನಗರದಲ್ಲಿ ಆಸ್ತಿ ಸರ್ವೆ: ಬಿಬಿಎಂಪಿಯ ಎಂಟು ವಲಯಗಳ ಆಸ್ತಿಗಳ ಸರ್ವೆ ಮಾಡಲು ಆಯುಕ್ತರು ತೀರ್ಮಾನಿಸಿದ್ದು, ಸರ್ವೆಯರ್‌ಗಳನ್ನು ನೇಮಿಸಲಾಗಿದೆ. ಒತ್ತುವರಿಯಾಗಿದ್ದರೆ ತೆರವು ಮಾಡಲಾಗುವುದು. ಬಿಡಿಎನಿಂದ ವರ್ಗಾವಣೆಯಾದ ಲೇಔಟ್ ಪಟ್ಟಿ ಮಾಡಿ ಪರಿಶೀಲನೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಕಾಶ್ಮೀರದಂತೆ ನಕಲಿ ಗಾಂಧಿ ಕುಟುಂಬಕ್ಕೂ ವಿಶೇಷ ಸವಲತ್ತು ಕೊಡಬೇಕಾ?: ಛಲವಾದಿ ವಾಗ್ದಾಳಿ