ETV Bharat / state

ಬೆಂಗಳೂರಿನಲ್ಲಿ 32,011 ರಸ್ತೆ ಗುಂಡಿಗಳು ಪತ್ತೆ: ಶೇ. 92.21ರಷ್ಟು ದುರಸ್ತಿ

ಬೆಂಗಳೂರು ನಗರದಲ್ಲಿ 32,011 ರಸ್ತೆ ಗುಂಡಿಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಶೇ. 92.21ರಷ್ಟು ದುರಸ್ತಿಪಡಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.

Representative image
ಸಾಂದರ್ಭಿಕ ಚಿತ್ರ
author img

By

Published : Nov 9, 2022, 11:12 AM IST

ಬೆಂಗಳೂರು: ಗುಂಡಿಯೋ ಅಥವಾ ಗುಂಡಿಗಳಲ್ಲಿ ರಸ್ತೆಯೋ ಎಂಬ ದುಸ್ಥಿತಿ ಬೆಂಗಳೂರಿನ ರಸ್ತೆಗಳದ್ದಾಗಿದೆ. ಕೋಟ್ಯಂತರ ರೂ. ಖರ್ಚು ಮಾಡಿ ನಿರ್ಮಿಸಲಾಗಿರುವ ರಸ್ತೆಗಳು ಕಳಪೆ ಗುಣಮಟ್ಟದ್ದಾಗಿದ್ದು, ನಗರದಲ್ಲಿ 32,011 ರಸ್ತೆ ಗುಂಡಿಗಳನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 29,517 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನೂ 2,494 ರಸ್ತೆ ಗುಂಡಿಗಳು ಮುಚ್ಚಲು ಬಾಕಿ ಇರುವುದಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.

BBMP starts repairs potholes across Bengaluru
ಬೆಂಗಳೂರಿನಲ್ಲಿ 32,011 ರಸ್ತೆ ಗುಂಡಿಗಳು ಪತ್ತೆ

ದಾಸರಹಳ್ಳಿ ವಲಯದಲ್ಲಿ ಅತಿಹೆಚ್ಚು ರಸ್ತೆ ಗುಂಡಿ ಅಂದರೆ 1,045 ಗುಂಡಿಗಳಿವೆ. ಪಶ್ಚಿಮದಲ್ಲಿ 292, ಬೊಮ್ಮನಹಳ್ಳಿ ವಲಯದಲ್ಲಿ 263, ಮುಖ್ಯರಸ್ತೆಗಳಲ್ಲಿ 367 ಹಾಗೂ ಆರ್​ಆರ್ ನಗರದಲ್ಲಿ 203 ಸೇರಿದಂತೆ ಎಲ್ಲಾ ವಲಯಗಳಲ್ಲೂ 2,494 ಯಮ ಸ್ವರೂಪಿ ಗುಂಡಿಗಳು ಇನ್ನೂ ಮುಚ್ಚಲು ಬಾಕಿ ಇವೆ.

ಶೇ. 92.21ರಷ್ಟು ದುರಸ್ತಿ: ಕಳೆದ ಮೂರು ದಿನದಲ್ಲಿ ತ್ವರಿತ ಗತಿಯಲ್ಲಿ ಗುಂಡಿ ಮುಚ್ಚಲಾಗಿದ್ದು, ಶೇ. 92.21ರಷ್ಟು ದುರಸ್ತಿಪಡಿಸಲಾಗಿದೆ. ನ.6 ರಂದು 1003, ನ.7 ರಂದು 1,322, ಹಾಗೂ ನ.8 ರಂದು 1,384 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ.

ಇದನ್ನೂ ಓದಿ: ಜನರ ಪ್ರಾಣ ಬಲಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು... ವರ್ಷದಲ್ಲೇ 10 ಜನ ಸಾವು

ತ್ವರಿತಗತಿಯಲ್ಲಿ ಗುಂಡಿ ಮುಚ್ಚುವ ಕಾರ್ಯ: ಪಾಲಿಕೆ ಮುಖ್ಯ ಆಯಕ್ತರಾದ ತುಷಾರ್ ಗಿರಿನಾಥ್ ಮಾತನಾಡಿ, "ಮುಖ್ಯ ಅಭಿಯಂತರರಿಗೆ ರಸ್ತೆ ಗುಂಡಿ ತ್ವರಿತವಾಗಿ ಮುಚ್ಚಿಸಲು ಜವಾಬ್ದಾರಿ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರವಾಗಿ ಸಾಕಷ್ಟು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಎಲ್ಲಾ 8 ವಲಯಗಳಲ್ಲೂ ತ್ವರಿತವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದೆ" ಎಂದರು.

"ವಿವಿಧ ವಲಯಗಳಿಗೆ ಭೇಟಿ ನೀಡಿ ನಿರಂತರವಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಕಾರ್ಯ ಹಾಗೂ ಪಾದಚಾರಿ ಒತ್ತುವರಿ ತೆರವು ತಪಾಸಣೆಯನ್ನು ನಡೆಸಲಾಗುತ್ತಿದೆ. ಅಲ್ಲದೇ ಆಯಾ ವಲಯ ವ್ಯಾಪ್ತಿಯಲ್ಲಿ ವಲಯ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿನಿತ್ಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ. ನಗರದ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್, ಸಬ್-ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: ಡೆಡ್‌ಲೈನ್ ಮುಗಿದರೂ ರಸ್ತೆಗುಂಡಿಗಳನ್ನು ಮುಚ್ಚದ ಬಿಬಿಎಂಪಿ: ಗುಂಡಿ ಮುಚ್ಚೋಕೆ ಮತ್ತೊಮ್ಮೆ ಗಡುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.