ಬೆಂಗಳೂರು: ಮೂರನೆಯ ಕೋವಿಡ್ 19 ಅಲೆಯನ್ನು ತಡೆಗಟ್ಟಲು ತಯಾರಿ ಎನ್ನುವಂತೆ ಪಾಲಿಕೆಯಿಂದ ಮನೆ ಮನೆ ಕೋವಿಡ್ ಪರೀಕ್ಷೆಯನ್ನು ನಗರದಲ್ಲಿ ನೆಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಸೋಂಕು ದೃಢಪಡುವ ಮನೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದೆ.
ನಗರದ ಯಲಹಂಕ ವಿಧಾನಸಭಾ ವ್ಯಾಪ್ತಿಯ ವಾರ್ಡ್ ಕುವೆಂಪು ನಗರದ ಸಿಂಗಾಪುರ, ಶ್ರೀನಿಧಿ ಮತ್ತು ಸೋಮಣ್ಣ ಬಡಾವಣೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಮನೆ ಮನೆ ಸಮೀಕ್ಷೆಯನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ಆಶಾ ಕಾರ್ಯಕರ್ತೆಯರು ಶುಕ್ರವಾರ ಕೈಗೊಂಡರು .
ಪಾಲಿಕೆ ಯಲಹಂಕ ವಲಯ ವ್ಯಾಪ್ತಿಯ ಅರೋಗ್ಯಾಧಿಕಾರಿಗಳು, ಉಪ ಆರೋಗ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರ ತಂಡ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ಜನರಲ್ಲಿ ಕೋವಿಡ್ ಬಗ್ಗೆ ಅರಿವು ಮೂಡಿಸಯಿತು.
ಇದನ್ನು ಓದಿ:ದೇವರನಾಡಿಗೆ ಕೃಪೆ ತೋರದ ಕೋವಿಡ್; ಸತತ 4ನೇ ದಿನವೂ 20 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ