ETV Bharat / state

ಕೋವಿಡ್-19 ಪರಿಹಾರಕ್ಕೆ ಬಿಬಿಎಂಪಿಗೆ 25 ಕೋಟಿ ರೂ. ಬಿಡುಗಡೆ

author img

By

Published : May 17, 2020, 12:54 PM IST

ಪಾಲಿಕೆ ವ್ಯಾಪ್ತಿಯಲ್ಲಿ ವಾರ್ ರೂಂ ಸ್ಥಾಪನೆ, ಸೋಂಕಿತರ ಮೇಲ್ವಿಚಾರಣೆ, ಸೂಕ್ತ ಔಷಧೋಪಚಾರ, ನಗರದಲ್ಲಿ ನೈರ್ಮಲ್ಯ ಕಾಪಾಡುವುದು, ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಆರೋಗ್ಯ ಸಮೀಕ್ಷೆಗಳನ್ನು ನಡೆಸಲು 50 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

BBMP release of Rs 25 crore for Kovid-19 solution
ಕೋವಿಡ್-19 ಪರಿಹಾರಕ್ಕೆ ಬಿಬಿಎಂಪಿಗೆ 25 ಕೋಟಿ ಬಿಡುಗಡೆ

ಬೆಂಗಳೂರು: ಕೋವಿಡ್-19 ನಿರ್ಮೂಲನೆಗಾಗಿ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಸರ್ಕಾರ ಇಪ್ಪತ್ತೈದು ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ವಾರ್ ರೂಂ ಸ್ಥಾಪನೆ, ಸೋಂಕಿತರ ಮೇಲ್ವಿಚಾರಣೆ, ಸೂಕ್ತ ಔಷಧೋಪಚಾರ, ನಗರದಲ್ಲಿ ನೈರ್ಮಲ್ಯ ಕಾಪಾಡುವುದು, ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುವುದು ಸೇರಿದಂತೆ ಆರೋಗ್ಯ ಸಮೀಕ್ಷೆಗಳನ್ನು ನಡೆಸಲು ಬಿಬಿಎಂಪಿ ಆಯುಕ್ತರು 50 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದರು.

ಈ ಪ್ರಕಾರ ಸರ್ಕಾರ ಕೇಂದ್ರೀಯ ಗೃಹ ಮಂತ್ರಾಲಯದ ಮಾರ್ಗಸೂಚಿ ಅನ್ವಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಮೂಲಕ 25 ಕೋಟಿ ರೂ ಬಿಡುಗಡೆಗೊಳಿಸಲು ಆದೇಶಿಸಿದೆ. ಅನುದಾನವನ್ನು ಯಾವ ಉದ್ದೇಶಕ್ಕೆ ಬಿಡುಗಡೆ ಮಾಡಿದೆಯೋ ಅದೇ ಉದ್ದೇಶಕ್ಕೆ ಬಳಸಬೇಕು. ವೆಚ್ಚವಾಗಿರುವ ಬಿಲ್ ಗಳನ್ನು ಪರಿಶೀಲಿಸಿ ಅನುದಾನ ಬಳಕೆ ಪ್ರಮಾಣವನ್ನು ಜಿಲ್ಲಾಧಿಕಾರಿ ಸರ್ಕಾರಕ್ಕೆ ಸಲ್ಲಿಸಬೇಕು‌.ಅನುದಾನ ದುರ್ಬಳಕೆ ಆದಲ್ಲಿ ಜಿಲ್ಲಾಧಿಕಾರಿ ಹಾಗೂ ಆಯುಕ್ತರು ನೇರ ಹೊಣೆ ಎಂದು ಸರ್ಕಾರ ಆದೇಶಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.