ETV Bharat / state

ಕೆಂಪೇಗೌಡ ಜಯಂತಿ ಆಚರಣೆ ಮುಂದೂಡಿದ ಬಿಬಿಎಂಪಿ

ಪ್ರಣಬ್ ಮುಖರ್ಜಿ ನಿಧನರಾದ ಹಿನ್ನೆಲೆ ಸೆಪ್ಟೆಂಬರ್ 2ರಂದು ಆಯೋಜನೆ ಮಾಡಲಾಗಿದ್ದ ಕೆಂಪೇಗೌಡ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಿಬಿಎಂಪಿ ಮುಂದೂಡಿದೆ.

ಕೆಂಪೇಗೌಡ ಜಯಂತಿ ಆಚರಣೆ ಮುಂದೂಡಿದ ಬಿಬಿಎಂಪಿ
ಕೆಂಪೇಗೌಡ ಜಯಂತಿ ಆಚರಣೆ ಮುಂದೂಡಿದ ಬಿಬಿಎಂಪಿ
author img

By

Published : Sep 1, 2020, 7:09 AM IST

ಬೆಂಗಳೂರು: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿಧಿವಶರಾದ ಹಿನ್ನೆಲೆ ಸೆಪ್ಟೆಂಬರ್ 2ರಂದು ನಿಗದಿಯಾಗಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಿಕೆಯಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಮೇಯರ್ ಗೌತಮ್ ಕುಮಾರ್, ಮಾಜಿ ರಾಷ್ಟ್ರಪತಿ ದೇಶದ ಆರ್ಥಿಕ ವ್ಯವಸ್ಥೆ ಬಲಪಡಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಪ್ರಣಬ್ ಅವರ ಅಗಲಿಕೆಯಿಂದ ದೇಶಕ್ಕೆ ನಷ್ಟವುಂಟಾಗಿದೆ‌. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದರು.

ಇಂದು ಕೆಂಪೇಗೌಡ ಪ್ರಶಸ್ತಿಗೆ ಹೆಸರು ಆಯ್ಕೆ ಮಾಡಲು ಕರೆದಿದ್ದ ಸಭೆಯನ್ನೂ ಮುಂದೂಡಲಾಗಿದೆ. ಸೆ. 10ರಂದು ಪಾಲಿಕೆ ಸದಸ್ಯರ ಅವಧಿ ಮುಕ್ತಾಯವಾಗುವ ಹಿನ್ನೆಲೆ ಅದರ ಒಳಗಾಗಿ ಆಚರಣೆ ಮಾಡುವ ಸಾಧ್ಯತೆಯೂ ಇದೆ. ಇದರೊಂದಿಗೆ ಯಲಹಂಕ ಡೈರಿ ಸರ್ಕಲ್ ಸಮೀಪದ ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ನಾಮಕರಣ ಕಾರ್ಯಕ್ರಮವನ್ನೂ ಮುಂದೂಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.