ಬೆಂಗಳೂರು: ಕೋವಿಡ್ ಕರ್ತವ್ಯದಲ್ಲಿದ್ದ ಸಚಿವಾಲಯ ಸಿಬ್ಬಂದಿಗೆ ಪುನಃ ಸಚಿವಾಲಯದ ಕರ್ತವ್ಯಕ್ಕೆ ಮರಳುವಂತೆ ಆದೇಶ ನೀಡಲಾಗಿದೆ.
ಮುಖ್ಯ ಕಾರ್ಯದರ್ಶಿ ಆದೇಶದಂತೆ ಒಂದು ದಿನ ಸಚಿವಾಲಯದ ಕೆಲಸ, ಒಂದು ದಿನ ಕೋವಿಡ್ ನಿಯಂತ್ರಣ ಡ್ಯೂಟಿ ನಿರ್ವಹಿಸುವಂತೆ ಬಿಬಿಎಂಪಿ ವಿಶೇಷ ಆಯುಕ್ತರಾದ ಜೆ.ಮಂಜುನಾಥ್ ಸುತ್ತೋಲೆ ಹೊರಡಿಸಿದ್ದಾರೆ.
ಕೋವಿಡ್-19 ನಗರದಲ್ಲಿ ತೀವ್ರವಾಗಿ ಹಬ್ಬುತ್ತಿದ್ದ ಸಂದರ್ಭದಲ್ಲಿ ಸರ್ಕಾರದ ಸಚಿವಾಲಯದ ಎಲ್ಲ ಅಧಿಕಾರಿ, ನೌಕರರನ್ನೂ ಕೋವಿಡ್ ಕರ್ತವ್ಯಕ್ಕೆ ಬಿಬಿಎಂಪಿಯ ವಿವಿಧ ವಲಯಗಳಲ್ಲಿ ನಿಯೋಜಿಸಲಾಗಿತ್ತು.
ಈಗ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಜೊತೆಗೆ ಸಚಿವಾಲಯಕ್ಕೆ ಸಿಬ್ಬಂದಿ ಕರ್ತವ್ಯ ಅಗತ್ಯ ಇರುವುದರಿಂದ ಕೆಡಿಪಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನಕ್ಕೆ ಬರಲಾಗಿದೆ.